ಹಾಸನ: ಅಪ್ರಾಪ್ತ ಬಾಲಕಿಯ ಬೆನ್ನು ಬಿದ್ದು ಪ್ರೀತಿಸುವಂತೆ ಪ್ರತಿದಿನ ಕಿರುಕುಳ ನೀಡುತ್ತಿದ್ದ ಆಟೋ ಚಾಲಕನನ್ನು (Auto Driver) ಪೊಲೀಸರು ಬಂಧಿಸಿರುವ ಘಟನೆ ಹಾಸನ (Hassan) ಜಿಲ್ಲೆ ಬೇಲೂರು (Belur) ಪಟ್ಟಣದಲ್ಲಿ ನಡೆದಿದೆ.
ಮನು (27) ಬಂಧಿತ ಆಟೋ ಚಾಲಕ. ಶಾಲೆಗೆ ತೆರಳುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಹಿಂದೆ ಬಿದ್ದಿದ್ದ ಮನು ಪ್ರೀತಿಸುವಂತೆ ವಿದ್ಯಾರ್ಥಿನಿಗೆ ಮಾನಸಿಕ ಹಿಂಸೆ ನೀಡುತ್ತಿದ್ದ. ಪ್ರೀತಿಸಲು ನಿರಾಕರಿಸಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ರಸ್ತೆಯಲ್ಲಿ ವಿದ್ಯಾರ್ಥಿನಿಯ ಮೈಕೈ ಮುಟ್ಟಿ ಎಳೆದಾಡಿದ್ದ. ಇದನ್ನೂ ಓದಿ: ʻಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿʼ – ಮತ್ತೆ ವಾಗ್ದಾನ ನೆನಪಿಸಿದ್ರಾ ಡಿಕೆಶಿ?
ಆಟೋ ಚಾಲಕನ ಕಿರುಕುಳದಿಂದ ಬೇಸತ್ತಿದ್ದ ಅಪ್ರಾಪ್ತ ಬಾಲಕಿ ತಮ್ಮ ಪೋಷಕರ ಬಳಿ ಅಳಲು ತೋಡಿಕೊಂಡಿದ್ದರು. ಕಡೆಗೆ ಪೊಲೀಸರಿಗೆ ದೂರು ನೀಡಿದ್ದು, ಆಟೋ ಚಾಲಕನನ್ನು ಬಂಧಿಸಿದ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಹಾವೇರಿ | ಮತ್ತೆ ಚಿರತೆ ಪ್ರತ್ಯಕ್ಷ – ಅನ್ನದಾತರಿಗೆ ಆತಂಕ

