ಲಕ್ನೋ: ದಟ್ಟಕಾಡಿನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ (Gang Rape) ಒಳಗಾದ 15ರ ಹುಡುಗಿ ತಪ್ಪಿಸಿಕೊಂಡು ಬೆತ್ತಲಾಗಿಯೇ ಓಡಿ ಬಂದಿರುವ ಘಟನೆ ಉತ್ತರಪ್ರದೇಶದ (Uttar Pradesh) ಮೊರಾದಾಬಾದ್ ಬೆಳಕಿಗೆ ಬಂದಿದೆ.
ಹುಡುಗಿ (Girl) ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಯೋಗಿತಾ ಭಯನಾ ಎಂಬವರು ತಮ್ಮ ಟ್ವೀಟ್ (Twitter) ಖಾತೆಯಲ್ಲಿ ವೀಡಿಯೋ ಹಂಚಿಕೊಂಡಿದ್ದು, ಸುಮಾರು 12 ಲಕ್ಷ ಮಂದಿ ವೀಡಿಯೋ ನೋಡಿದ್ದಾರೆ. ಇದನ್ನೂ ಓದಿ: ಇರಾನ್ನಲ್ಲಿ ಹಿಜಬ್ ಹೋರಾಟ- ವಾಟ್ಸಪ್, ಇನ್ಸ್ಟಾಗ್ರಾಮ್ ಬಳಕೆ ಸ್ಥಗಿತ
Advertisement
यूपी मुरादाबाद में एक नाबालिग के साथ 5 युवकों ने गैंगरेप किया,अपराधियों के हौसले इतने बुलंद हैं कि मुरादाबाद में हैवानों ने रेप कर युवती को सड़क पर निर्वस्त्र दौड़ाया !! pic.twitter.com/B1gndx6Gs3
— Yogita Bhayana योगिता भयाना (@yogitabhayana) September 21, 2022
Advertisement
ಇದೇ ಸೆಪ್ಟೆಂಬರ್ 1ರಂದು ಹುಡುಗಿ ಮೇಲೆ ಅತ್ಯಾಚಾರ ನಡೆದಿತ್ತು. ಸೆಪ್ಟೆಂಬರ್ 7ರಂದು ದೂರು ದಾಖಲಾದ 13 ದಿನಗಳ ನಂತರ ಪೊಲೀಸರು (Bojpuri District Police) ಮೊದಲ ಆರೋಪಿಯನ್ನಷ್ಟೇ ಬಂಧಿಸಿದ್ದಾರೆ.
Advertisement
ಆರೋಪಿಗಳನ್ನು ನಿತಿನ್, ಕಪಿಲ್, ಅಜಯ್, ಇಮ್ರಾನ್, ನೌಶ ಅಲಿ ಎಂದು ಗುರುತಿಸಲಾಗಿದೆ. ಅದರಲ್ಲಿ ನೌಶ ಅಲಿ ಬಂಧಿತನಾಗಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: NIA ಮಿಡ್ನೈಟ್ ಆಪರೇಷನ್- ಬೆಂಗ್ಳೂರಿನಲ್ಲಿ ಶಂಕಿತ ಉಗ್ರ ಯಾಸಿರ್ ಅರೆಸ್ಟ್
Advertisement
ಏನಿದು ಘಟನೆ?
ಇದೇ ತಿಂಗಳ ಸೆ.1ರಂದು ಹುಡುಗಿ ತನ್ನ ನೆರೆ ಊರಿನ ಜಾತ್ರೆ ನೋಡಲು ಸ್ನೇಹಿತೆಯೊಟ್ಟಿಗೆ ಹೋಗಿದ್ದಳು. ಸಂಜೆ 8 ಗಂಟೆ ಹೊತ್ತಿಗೆ ಆಕೆ ಒಬ್ಬಳೇ ವಾಪಸ್ ಮನೆಗೆ ಹೋಗುತ್ತಿದ್ದಾಗ, 2 ಬೈಕ್ಗಳಲ್ಲಿ (Bike) ಬಂದ ಐವರು ಕಾಮುಕರು ಹುಡುಗಿಯನ್ನು ಅಪಹರಣ (Kidnap) ಮಾಡಿಕೊಂಡು, ಸೈಯದ್ಪುರ್ ಖಾದರ್ ಏರಿಯಾದಲ್ಲಿರುವ ದಟ್ಟ ಕಾಡಿಗೆ (Forest) ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಬಳಿಕ ಬಟ್ಟೆ ಹರಿದು ಬೆತ್ತಲುಗೊಳಿಸಿದ್ದಾರೆ. ತೀವ್ರ ರಕ್ತಸ್ರಾವ ಆಗುತ್ತಿದ್ದ ಆಕೆ ಹೇಗೋ ತಪ್ಪಿಸಿಕೊಂಡು ಬೆತ್ತಲೆ ಸ್ಥಿತಿಯಲ್ಲೇ ಓಡಿ ಬಂದಿದ್ದಾಳೆ. ಹಾಗೇ ಅವಳು ಬೆತ್ತಲಾಗಿ ರಸ್ತೆ ಮೇಲೆ ಬರುತ್ತಿದ್ದಾಗ ಅನೇಕರು ಅವಳೊಬ್ಬ ಹುಚ್ಚಿ ಎಂದು ಭಾವಿಸಿ ಕಲ್ಲು ಎಸೆದಿದ್ದಾರೆ ಎಂದ ಹುಡುಗಿಯ ಚಿಕ್ಕಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ.
ಮನೆಗೆ ಬೆತ್ತಲಾಗಿಯೇ ಓಡಿಬಂದ ಯುವತಿ ತನ್ನ ಅಕ್ಕನ ಬಳಿ ವಿಷಯ ಹೇಳಿಕೊಂಡಿದ್ದಾಳೆ. ಅದಾದ 6 ದಿನಗಳ ನಂತರ ಹುಡುಗಿ ಚಿಕ್ಕಪ್ಪ ರಾಮ್ ಅವತಾರ್ ಭೋಜ್ಪುರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಬ್ರೇಕ್ಅಪ್ ಮಾಡಿದ್ದಕ್ಕೆ ಪ್ರಿಯತಮೆಯ ನಗ್ನ ಫೋಟೋ ಲೀಕ್ ಮಾಡ್ದ
ಸದ್ಯ ಈ ಕುರಿತು ಮಾಹಿತಿ ನೀಡಿದ ಪೊಲೀಸರು, ಹುಡುಗಿ ಸ್ವಲ್ಪಮಟ್ಟಿಗೆ ಮಾನಸಿಕ ಅಸ್ವಸ್ಥೆ. ಆಕೆಯನ್ನು ವೈದ್ಯಕೀಯ ತಪಾಸಣಿಗೆ ಒಳಪಡಿಸಲಾಗಿದೆ. ಆದರೆ ಇನ್ನೂ ವರದಿ ಬಂದಿಲ್ಲ, ಅತ್ಯಾಚಾರ ಆಗಿದ್ದು ದೃಢಪಟ್ಟಿಲ್ಲ. ಹಾಗಿದ್ದಾಗ್ಯೂ ಒಬ್ಬಾತನನ್ನು ಅರೆಸ್ಟ್ ಮಾಡಿದ್ದೇವೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ವೈದ್ಯಕೀಯ ತಪಾಸಣೆ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.