ನವದೆಹಲಿ: ಬಾಲ್ಯ ವಿವಾಹ (Child Marriage) ತಡೆಗಟ್ಟಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ (Ministry of Women and Child Development) ನಾಳೆಯಿಂದ ದೇಶದಲ್ಲಿ 100 ದಿನಗಳ ಜಾಗೃತಿ ಅಭಿಯಾನವನ್ನು ಆರಂಭಿಸಲಿದೆ.
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಅನ್ನಪೂರ್ಣ ದೇವಿ, ರಾಜ್ಯ ಸಚಿವೆ ಶ್ರೀಮತಿ ಸಾವಿತ್ರಿ ಠಾಕೂರ್ ಅವರು ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ರಾಷ್ಟ್ರೀಯ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ಈ ರಾಷ್ಟ್ರೀಯ ಅಭಿಯಾನವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪಂಚಾಯತಿ ರಾಜ್, ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಚಿವಾಲಯಗಳೊಂದಿಗೆ ನಿಕಟ ಸಮನ್ವಯದೊಂದಿಗೆ ಕಾರ್ಯಗತಗೊಳಿಸಲಾಗುತ್ತದೆ. ಒಟ್ಟು ಮೂರು ಹಂತದಲ್ಲಿ ಈ ಅಭಿಯಾನ ನಡೆಯಲಿದ್ದು ನಾಗರಿಕರು, ಸಂಸ್ಥೆಗಳು ಮತ್ತು ಸಮುದಾಯ ಮುಖಂಡರು ಈ ಆಂದೋಲನಕ್ಕೆ ಕೈ ಜೋಡಿಸಬೇಕೆಂದು ಸಚಿವಾಲಯ ಮನವಿ ಮಾಡಿದೆ. ಇದನ್ನೂ ಓದಿ: ನನ್ನನ್ನು ಕೇಳಿದ್ರೆ ಡಿಕೆಶಿ ಇವತ್ತೇ ಸಿಎಂ ಆಗ್ಬೇಕು: ಮಿಥುನ್ ರೈ
हर बेटी का सपना पूरा हो, हर बेटी आत्मनिर्भर बने।
बाल विवाह जैसी कुप्रथा को खत्म करना हमारा सामूहिक संकल्प है।
जब समाज जागरूक होगा, तब भारत की हर बेटी सुरक्षित, शिक्षित और सशक्त मुस्कुराएगी।
आइए मिलकर भारत को बाल विवाह मुक्त बनाएं।#BalVivahMuktBharat pic.twitter.com/BcmWH7Vegu
— Annpurna Devi (@Annapurna4BJP) November 27, 2025
ಅಭಿಯಾನಲ್ಲಿ ಏನಿರಲಿದೆ?
ನ.27 ರಿಂದ ಡಿ.31 – ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಚರ್ಚೆ, ಪ್ರಬಂಧ ಸ್ಪರ್ಧೆಗಳು ಮತ್ತು ಪ್ರತಿಜ್ಞೆ ಸಮಾರಂಭಗಳು ಸೇರಿದಂತೆ ಜಾಗೃತಿ ಚಟುವಟಿಕೆಗಳು.
ಜನವರಿ 1 ರಿಂದ 31- ಮಕ್ಕಳ ಹಕ್ಕುಗಳು, ಸುರಕ್ಷತೆ ಮತ್ತು ಸಬಲೀಕರಣದ ಬಗ್ಗೆ ಸಮುದಾಯದ ಪ್ರಭಾವಿಗಳು, ನಾಯಕರ ಜೊತೆ ತೊಡಗಿಸಿಕೊಳ್ಳುವುದು.
ಫೆ.1 ರಿಂದ ಮಾ.8 – ಗ್ರಾಮ ಪಂಚಾಯತ್‌ಗಳು ಮತ್ತು ಪುರಸಭೆಯ ವಾರ್ಡ್‌ಗಳು ತಮ್ಮ ನ್ಯಾಯವ್ಯಾಪ್ತಿಗಳನ್ನು ಬಾಲ್ಯವಿವಾಹ ಮುಕ್ತವೆಂದು ಘೋಷಿಸುವಂತೆ ನಿರ್ಣಯ ಕೈಗೊಳ್ಳುವುದು.

