Connect with us

Karnataka

ಖಾತೆಗಳಿಗಾಗಿ ಕಾಂಗ್ರೆಸ್ ಸಭೆಯಲ್ಲಿ ಭುಗಿಲೆದ್ದ ಕಿತ್ತಾಟ!

Published

on

ಬೆಂಗಳೂರು:ಸಚಿವ ಸಂಪುಟ ವಿಸ್ತರಣೆ ವಿಳಂಬ ಮಾಡಬೇಡಿ ಎಂಬ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸೂಚನೆ ಬೆನ್ನಲ್ಲೇ ಖಾತೆಗಳಿಗೆ ಕಿತ್ತಾಟ ನಡೆದಿದೆ ಎನ್ನಲಾಗಿದೆ.

5 ವರ್ಷ ಸಚಿವರಾಗಿದ್ದವರಿಗೆ ಈ ಬಾರಿ ಸಚಿವ ಸ್ಥಾನ ಕೊಡುವುದು ಬೇಡ ಹೊಸಬರಿಗೆ ಅವಕಾಶ ಕೊಡುವಂತೆ ಕಾಂಗ್ರೆಸ್ ಸಭೆಯಲ್ಲಿ ಕಿರಿಯರು ಆಗ್ರಹ ಮಾಡಿದ್ದಾರೆ. ದೇಶಪಾಂಡೆ, ಎಂ.ಬಿ ಪಾಟೀಲ್, ಎಚ್.ಕೆ ಪಾಟೀಲ್, ರೋಷನ್ ಬೇಗ್ ಗೆ ಅವಕಾಶ ಕೊಡದಂತೆ ಕಿರಿಯರು ಒತ್ತಡ ಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಿರಿಯರ ಒತ್ತಡಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ಜಾರ್ಜ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸದನದಲ್ಲಿ ಹಿರಿಯ ಸಚಿವರ ಅವಶ್ಯಕತೆ ಬಗ್ಗೆ ಮಾಜಿ ಸಿಎಂ ಒತ್ತಿ ಹೇಳಿದ್ದಾರೆ. ಎಂ.ಬಿ ಪಾಟೀಲ್‍ಗೆ ಕೊಡದಂತೆ ಶಿವನಾಂದ ಪಾಟೀಲ್ ಒತ್ತಡ ಹಾಕುತ್ತಿದ್ದು, ಈಶ್ವರ ಖಂಡ್ರೆಗೆ ಕೊಡದಂತೆ ರಾಜಶೇಖರ ಪಾಟೀಲ್ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

Click to comment

Leave a Reply

Your email address will not be published. Required fields are marked *