ಬೆಂಗಳೂರು: ಕಾಂಗ್ರೆಸ್‌ನಲ್ಲಿನ ಕುರ್ಚಿ ಗುದ್ದಾಟದ ನಡುವೆ ಖರ್ಗೆ ನಿವಾಸಕ್ಕೆ ಸಚಿವರು ಪರೇಡ್ ನಡೆಸಿದ್ದಾರೆ. 2028ರವರೆಗೆ ಕಾಂಗ್ರೆಸ್ ಸಿಎಂ ಇರ್ತಾರೆ ಎಂದು ಹೆಚ್‌ಸಿ ಮಹದೇವಪ್ಪ (HC Mahadevappa) ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.
ಶನಿವಾರ (ನ.22) ಸಿಎಂ ಸಿದ್ದರಾಮಯ್ಯ (Siddaramaiah) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು (Mallikarjun Kharge) ಭೇಟಿಯಾಗಿದ್ದರು. ಅದರ ಬೆನ್ನಲ್ಲೇ ಇಂದು (ನ.23) ಖರ್ಗೆ ನಿವಾಸಕ್ಕೆ ಸಚಿವ ಹೆಚ್.ಸಿ ಮಹದೇವಪ್ಪ, ಸಚಿವ ಕೆ.ವೆಂಕಟೇಶ್ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಭೇಟಿಯಾಗಿ, ಚರ್ಚೆ ನಡೆಸಿದ್ದಾರೆ.ಇದನ್ನೂ ಓದಿ: ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದರೂ ಸಿದ್ದರಾಮಯ್ಯ ರಾಜೀನಾಮೆ ಕೊಡಲ್ಲ: ಜಗದೀಶ್ ಶೆಟ್ಟರ್
ಬಳಿಕ ಮಾಧ್ಯಮದವರೊಂದಿಗೆ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಇರ್ತಾರಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್.ಸಿ ಮಹದೇವಪ್ಪ, ಈಗ ಸಿಎಂ ಕುರ್ಚಿ ಖಾಲಿ ಇಲ್ಲಾ. 2028ರವರೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸಿಎಂ ಇರ್ತಾರೆ. 2028ಕ್ಕೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ರೇಸ್ ಶುರುವಾದಾಗ ಪ್ಲೇಯರ್ ಆಯ್ಕೆ ಮಾಡ್ತಾರೆ. ಆ ರೀತಿಯ ಸನ್ನಿವೇಶ ಬಂದಾಗ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಅಧ್ಯಕ್ಷರು ನೀವೆಲ್ಲಾ ಆಕ್ಟೀವ್ ಆಗಿ, ಪಕ್ಷ ಕಟ್ಟಿ ಎಂದಿದ್ದಾರೆ ಎಂದು ಹೇಳಿದ್ದಾರೆ.
ಸಿಎಂ ಆಕಾಂಕ್ಷಿ ಎಂದು ಪರಮೇಶ್ವರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ಯಾವುದು ಕೂಡ ಚರ್ಚೆ ಆಗಿಲ್ಲ. ದಲಿತ ಸಿಎಂ ರೇಸ್ ಬಗ್ಗೆಯೂ ಚರ್ಚೆ ಆಗಿಲ್ಲ. ಡಿನ್ನರ್ ಮೀಟಿಂಗ್ ವಿಚಾರ ಮಾತನಾಡಿಲ್ಲ. ಪಕ್ಷ ಸಂಘಟನೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಸೌಹಾರ್ದಯುತವಾಗಿ ಚರ್ಚೆ ಮಾಡಿದ್ದೇವೆ. ಕರ್ನಾಟಕದಲ್ಲಿ ಕಾಂಗ್ರೆಸ್ (Congress) ನೀತಿಗೆ ಜನ ಬೆಂಬಲ ನೀಡಿದ್ದಾರೆ. ಸ್ಥಳೀಯ ಸಂಸ್ಥೆಗಳ ಬಗ್ಗೆ ಮಾತ್ರ ಚರ್ಚೆ ಮಾಡಿದ್ದೇವೆ ಎಂದಿದ್ದಾರೆ.
ಇನ್ನೂ ಕಾಂಗ್ರೆಸ್‌ನಲ್ಲೇ ಕುದುರೆ ವ್ಯಾಪಾರ ನಡೆಯುತ್ತಿದೆ ಎಂಬ ಬಿಜೆಪಿ ಆರೋಪವಾಗಿ ವಿಚಾರವಾಗಿ ಮಾತನಾಡಿ, ಅವರು ವಿರೋಧ ಪಕ್ಷದವರಾದ ಕಾರಣ ಆ ರೀತಿ ಮಾತಾಡ್ತಾರೆ. ನಾವು ಕ್ಯಾಬಿನೆಟ್ ರಿಶಫಲ್ ಬಗ್ಗೆಯೂ ಚರ್ಚೆ ಮಾಡಿಲ್ಲ. ಶಾಸಕರ ಸಹಿ ಸಂಗ್ರಹದ ಬಗ್ಗೆ ನನಗೆ ಮಾಹಿತಿ ಇಲ್ಲ. ನನಗೆ ಸಹಿ ಹಾಕಲು ಯಾರು ಕರೆದಿಲ್ಲ ಎಂದು ತಿಳಿಸಿದ್ದಾರೆ.
ಆರು ತಿಂಗಳ ಬಳಿಕ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಅಗುತ್ತೆ ಎಂಬ ಹೆಚ್‌ಡಿಕೆ (HDK) ಹೇಳಿಕೆ ವಿಚಾರವಾಗಿ, ಅವರು ಹಗಲುಗನಸು ಕಾಣ್ತಿದ್ದಾರೆ. 2028ರವರೆಗೆ ಅಧಿಕಾರ ಸಂಪೂರ್ಣ ಮಾಡಿ, ಮತ್ತೆ ನಾವೇ ಅಧಿಕಾರಕ್ಕೆ ಬರ್ತಿವಿ. ಮುಖ್ಯಮಂತ್ರಿಗಳು ಇದ್ದೆ ಇರ್ತಾರೆ ಎಂದು ನುಡಿದಿದ್ದಾರೆ.
ಎಲ್ಲರಿಂದ ಅಧಿಕಾರಕ್ಕೆ ಬಂದಿದೆ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಒಬ್ಬರಿಂದ ಯಾವುದೇ ಪಕ್ಷ ಅಧಿಕಾರಕ್ಕೆ ಬರೋದಕ್ಕೆ ಸಾಧ್ಯವಿಲ್ಲ. ಕಲೆಕ್ಟೀವ್ ಲೀಡರ್‌ಶಿಪ್ ಬೇಕು, ಕಲೆಕ್ಟೀವ್ ಲೀಡರ್ ಶಿಪ್‌ನಿಂದ ಗೆದ್ದಿದ್ದೇವೆ. ದೇಶದ ಇತಿಹಾಸದಲ್ಲಿ ಯಾರು ಕೂಡ ಒಬ್ಬಂಟಿಯಾಗಿ ಪಕ್ಷವನ್ನ ಅಧಿಕಾರಕ್ಕೆ ತಂದಿಲ್ಲ ಎಂದು ಹೇಳಿದ್ದಾರೆ.ಇದನ್ನೂ ಓದಿ: ಕಾಂಗ್ರೆಸ್‌ನಲ್ಲೇ ಕುದುರೆ ವ್ಯಾಪಾರ – ಒಬ್ಬೊಬ್ಬರಿಗೆ 50 ಕೋಟಿ, 1 ಫ್ಲಾಟ್, ಫಾರ್ಚುನರ್ ಕಾರ್ ಆಫರ್ ನಡೀತಿದೆ: ಛಲವಾದಿ ಬಾಂಬ್
