ವಿಜಯಪುರ: ಪಂಚ ಗ್ಯಾರಂಟಿಯಿಂದ (Guarantees) ಸಚಿವರಿಗೆ ಎಲ್ಲಿ ಹಣ ತಿನ್ನಬೇಕು ಅನ್ನೋದು ಗೊತ್ತಾಗುತ್ತಿಲ್ಲ. ಗ್ಯಾರಂಟಿ ಕೊಟ್ಟ ಮೇಲೆ ಕಾಂಗ್ರೆಸ್ ಸರ್ಕಾರದ್ದೆ ಗ್ಯಾರಂಟಿ ಇಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ (Basanagouda Patil Yatnal) ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ತಿಮ್ಮಾಪುರ್ ವರ್ಗಾವಣೆ ಭ್ರಷ್ಟಾಚಾರ ವಿಚಾರವಾಗಿ, ಕಾಂಗ್ರೆಸ್ ಸರ್ಕಾರ (Congress Governmnet) ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ ಮಾಡಿದೆ. ಪಂಚ ಗ್ಯಾರಂಟಿಯಿಂದ ಸಚಿವರಿಗೆ ಎಲ್ಲಿ ಹಣ ತಿನ್ನಬೇಕು ಎಂದು ಗೊತ್ತಾಗುತ್ತಿಲ್ಲ. ಅಬಕಾರಿ ಇಲಾಖೆ ಹೊರತಾಗಿ ಸಚಿವರಿಗೆ ಮತ್ತೊಂದು ಸೋರ್ಸ್ ಇಲ್ಲ. ಅಬಕಾರಿ ಇಲಾಖೆಯ (Departmnet Of Excise) ವರ್ಗಾವಣೆಯಲ್ಲಿ ದೊಡ್ಡ ಉದ್ಯೋಗ ಹುಟ್ಟಿಕೊಂಡಿದೆ. ಏಕೆಂದರೆ ಅವರಿಗೆ ಗ್ಯಾರಂಟಿ ಇಲ್ಲ. ಗ್ಯಾರಂಟಿ ಕೊಟ್ಟ ಮೇಲೆ ಅವರ ಸರ್ಕಾರದ್ದೆ ಗ್ಯಾರಂಟಿ ಇಲ್ಲ ಎಂದು ಹೇಳಿದರು.ಇದನ್ನೂ ಓದಿ: Kamala, you’re fired – ಮಧ್ಯರಾತ್ರಿ 2:15 ಕ್ಕೆ ಕೊನೆಯ ಪ್ರಚಾರದಲ್ಲಿ ಗುಡುಗಿದ ಟ್ರಂಪ್
ಸಿಎಂ ಸಿದ್ದರಾಮಯಯ್ಯಗೆ (CM Siddaramaiah) ಎಷ್ಟು ದಿನ ಮುಂದುವರೆಯುತ್ತೇನೆ ಎನ್ನುವ ಗ್ಯಾರಂಟಿ ಇಲ್ಲ, ಎಲ್ಲರೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಶಾಸಕರಿಗೆ ಏನೂ ಸಿಗುತ್ತಿಲ್ಲ ಹೀಗಾಗಿ ಹತಾಶರಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದರಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಶೇ.90 ರಷ್ಟು ಭ್ರಷ್ಟಾಚಾರ ಇದೆ. ಆಗ ನಮ್ಮದು ಶೇ.40 ರಷ್ಟು ಭ್ರಷ್ಟಾಚಾರ ಇದೆ ಎಂದು ಹೇಳುತ್ತಿದ್ದರು. ಜೊತೆಗೆ ಬಿಜೆಪಿ ಮೇಲೆ ಪೇಸಿಎಂ ಎಂದು ಆರೋಪ ಮಾಡುತ್ತಿದ್ದರು. ಆದರೆ ಯಾಕೆ ತನಿಖೆ ಮಾಡಲಿಲ್ಲ? ತನಿಖೆ ಮಾಡಿ ಸಾಬೀತು ಮಾಡುವುದಕ್ಕೆ ಆಗಲಿಲ್ಲ ಎಂದು ಪ್ರಶ್ನಿಸಿದರು.
ಬೆಂಗಳೂರಲ್ಲಿ ಜಾಗಗಳ ಎನ್‌ಎ ಮಾಡಲು ಭ್ರಷ್ಟಾಚಾರ ಮಾಡಿದ್ದಾರೆ. ಎನ್‌ಎ ಮಾಡಲು ಡಿಕೆಶಿಗೆ ಹಣ ಕೊಡಬೇಕು. ಚದರ ಅಡಿಗೆ 75 ರಿಂದ 100 ರೂ. ಕೊಡಬೇಕು. ಡಿಕೆಶಿ (DCM DK Shivakumar) ಕ್ಯಾಲ್ಕುಲೇಟರ್ ತೆಗೆದುಕೊಂಡು ಕೂತಿರುತ್ತಾನೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ತಹಶಿಲ್ದಾರ್ ಕಚೇರಿ ಎಸ್‌ಡಿಎ ಆತ್ಮಹತ್ಯೆಯಲ್ಲಿ ಹೆಬ್ಬಾಳ್ಕರ್ (Lakshmi Hebbalkar) ಪಿಎ ಹೆಸರು ಬರೆದಿಟ್ಟ ವಿಚಾರವಾಗಿ ಮಾತನಾಡಿ, ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಬಹಳಷ್ಟು ದೂರುಗಳಿವೆ. ಭ್ರಷ್ಟಾಚಾರದ ತುತ್ತ ತುದಿಯಲ್ಲಿದ್ದಾರೆ. ಹಿಂದೆ ಮಾಡಿದ ಪಾಪದ ಫಲ ಈಗ ಕಾಡುತ್ತಿದೆ. ಈಶ್ವರಪ್ಪ ರಾಜೀನಾಮೆ ಕೊಡುವಂತೆ ಮಾಡಿದ ಪಾಪದ ಕೊಡ ತುಂಬಿ ಈಗ ಬೆನ್ನು ಹತ್ತಿದೆ. ಬೆಳಗಾವಿಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಐದಾರು ಸಾವಿರ ರೂ. ಕೆಲಸಕ್ಕೂ ಲಂಚ ಕೊಡಬೇಕಿದೆ. ಪಿಎ ಹೆಸರು ಬರೆದಿರುವುದಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಹೊಣೆ. ಲಕ್ಷ್ಮಿ ಹೆಬ್ಬಾಳ್ಕರ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: Pushpa 2: ಅಲ್ಲು ಅರ್ಜುನ್ ಜೊತೆ ಶ್ರೀಲೀಲಾ ಡ್ಯಾನ್ಸ್?