ಬೆಂಗಳೂರು: ಗುರುವಾರ (ಸೆ.18) ಕ್ಯಾಬಿನೆಟ್‌ನಲ್ಲಿ (Cabinet) ಗೆರಿಲ್ಲಾ ಮಾದರಿಯ ಪೊಲಿಟಿಕಲ್ ಆಟ್ಯಾಕ್ ನಡೆದಿದೆ! ಯೋಜಿತವಾಗಿ ಪ್ಲ್ಯಾನ್ ಮಾಡಿ ಗುಟ್ಟಾಗಿ ಇಟ್ಟಿದ್ದ ಸಚಿವರ ಒಂದು ಗುಂಪು, ಇದ್ದಕ್ಕಿದ್ದಂತೆ ಜಾತಿಗಣತಿ (Caste Census) ಪ್ರಸ್ತಾಪಿಸಿದ್ರು ಎನ್ನಲಾಗಿದೆ.
ಕ್ಯಾಬಿನೆಟ್ ಅಂತ್ಯದಲ್ಲಿ ಜಾತಿಗಣತಿ ವಿಚಾರ ಪ್ರಸ್ತಾಪಿಸಿ ಆಟ್ಯಾಕ್ ಮಾಡಲು ಪ್ಲ್ಯಾನ್ ಮಾಡಿದ್ದ ಸಚಿವರ ಗುಂಪು, ಈ ಮೊದಲೇ ಯೋಜಿತವಾಗಿ ಆಪರೇಷನ್ ರೆಡಿ ಮಾಡಿದ್ದರಂತೆ. ಸಿಎಂ ಸಿದ್ದರಾಮಯ್ಯ (Siddaramaiah) ಸೇರಿದಂತೆ ಜಾತಿಗಣತಿ ಪರ ಇರುವ ಸಚಿವರಿಗೆ ಈ ವಿಚಾರ ಗೊತ್ತಾಗದಂತೆ ಪ್ಲ್ಯಾನ್ ಗುಟ್ಟಾಗಿ ಇಟ್ಟಿದ್ದರಂತೆ. ಕ್ಯಾಬಿನೆಟ್ ಮುಗೀತು ಹೊರಡೋಣ್ವಾ ಎಂದಾಗ ಜಾತಿ ಗಣತಿ ವಿಷಯ ಪ್ರಸ್ತಾಪಿಸಿದ್ದಾರೆ. ಜಾತಿಗಣತಿ ಮಾತಾಡೋದು ಇದೆ ಎಂದು ಸಚಿವರಿಂದ ಕೂಗು ವ್ಯಕ್ತವಾಯ್ತು ಎನ್ನಲಾಗಿದೆ. ಇದನ್ನೂ ಓದಿ: ಕ್ಯಾಬಿನೆಟ್ ಸಭೆಯಲ್ಲಿ ಜಾತಿ ಜಟಾಪಟಿ – ಏರು ಧ್ವನಿಯಲ್ಲೇ ಸಚಿವರಿಂದ ಆಕ್ಷೇಪ
ಸಚಿವರ ನಡೆಗೆ ಸಿಎಂ ಹಾಗೂ ಜಾತಿಗಳ ಪರ ಇದ್ದ ಸಚಿವರಿಗೆ ಶಾಕ್ ಆಗಿದೆ ಎನ್ನಲಾಗಿದೆ. ಆದಾದ ಬಳಿಕ ಸುಮಾರು 40 ನಿಮಿಷಗಳ ಕಾಲ ಜಾತಿಗಣತಿ ಜಟಾಪಟಿ ನಡೆದಿದೆ ಎನ್ನಲಾಗಿದೆ. ಇದನ್ನೂ ಓದಿ: ಪರಿಸರ ಅಭಿವೃದ್ಧಿ ಸಂರಕ್ಷಣೆಗೆ ಮಾಧ್ಯಮಗಳು ಹೆಚ್ಚು ಒತ್ತು ನೀಡಬೇಕು: ಸಿದ್ದರಾಮಯ್ಯ