ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರ ಹಳೆಯ ವಿಡಿಯೋ ಇಟ್ಟುಕೊಂಡು ರಿಲೀಸ್ ಮಾಡುತ್ತೇವೆ ಎಂದು ಹೇಳುತ್ತಿದ್ದಾರಲ್ಲ. ಅಂದಿನಿಂದ ಅಂದರೆ 2014 ರಿಂದ 2018ರ ವರೆಗೆ ಬಿಜೆಪಿಯವರಿಗೆ ಪ್ಯಾರಾಲಿಸಿಸ್ (ಲಕ್ವಾ) ಹೊಡೆದಿತ್ತಾ ಎಂದು ಆಹಾರ ಸಚಿವ ಜಮೀರ್ ಅಹ್ಮದ್ ಪ್ರಶ್ನೆ ಮಾಡಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕಳೆದ ದಿನವೇ ತನಿಖೆ ಮಾಡಬೇಕು ಎಂದು ಹೇಳಿದ್ದೆ. ಆದರೆ ಯಡಿಯೂರಪ್ಪ ಅವರೆ ಈ ಬಗ್ಗೆ ಒಪ್ಪಿಕೊಂಡಿದ್ದಾರೆ. ಮೊದಲು ನಾನು ಮಾತನಾಡಿಲ್ಲ, ಮಿಮಿಕ್ರಿ, ಒಂದು ವೇಳೆ ನನ್ನ ಧ್ವನಿಯಾದರೆ ವಿರೋಧ ಪಕ್ಷ ಸೇರಿದಂತೆ ಎಂಎಲ್‍ಎ ಪದವಿಗೂ ರಾಜಿನಾಮೆ ಕೊಡುತ್ತೇನೆ ಎಂದು ಹೇಳಿದ್ದರು. ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ. ಈಗ ಸ್ಪೀಕರ್ ಬಗ್ಗೆ ಆರೋಪ ಮಾಡುತ್ತಿದ್ದಾರೆ. ನಮ್ಮೆಲ್ಲರಿಗೂ ಸ್ಪೀಕರ್ ಬಗ್ಗೆ ಗೊತ್ತು ಎಂದು ಬಿಎಸ್‍ವೈ ವಿರುದ್ಧ ಕಿಡಿಕಾರಿದ್ದಾರೆ.
Advertisement
Advertisement
ಕುಮಾರಸ್ವಾಮಿ ಅವರ ವಿಡಿಯೋ ಬಿಡುಗಡೆ ಮಾಡುತ್ತೇನೆ ಎಂದರಲ್ಲ ಅದು ಹಳೆ ಸರಕು, ಸುಮಾರು 2014ರದ್ದು, ಅಂದಿನಿಂದ ಬಿಜೆಪಿಯವರು ಏನು ಮಾಡುತ್ತಿದ್ದರು. ನಾಲ್ಕು ವರ್ಷ ಸರ್ಕಾರ ಇತ್ತು. ಆದರೂ ಏನು ಮಾಡಲಿಲ್ಲ. ಏನು ಅವರಿಗೆ ಪ್ಯಾರಾಲಿಸಿಸ್ ಹೊಡೆದಿತ್ತಾ. ಅಂದಿನ ದಿನವೇ ತನಿಖೆ ಮಾಡಿ ಎಂದು ಹೇಳಬಹುದಿತ್ತು ಎಂದು ಜಮೀರ್ ಪ್ರಶ್ನೆ ಮಾಡಿದ್ದಾರೆ. ಯಡಿಯೂರಪ್ಪ ಅವರಿಗೆ ಎರಡು ನಾಲಿಗೆ ಇದೆ. ಅವತ್ತು ಕುಮಾರಸ್ವಾಮಿ ತಮಾಷೆಗೆ ಹೇಳಿದ್ದಾರೆ. ನಾನು ಅವತ್ತೂ ಜೆಡಿಎಸ್ ಪಕ್ಷದಲ್ಲೇ ಇದ್ದೆ. ವಿಜುಗೌಡ ಬಂದು ನಮ್ಮ ಕ್ಷೇತ್ರಕ್ಕೂ ಶಾಸಕರನ್ನು ಮಾಡಿ ಎಂದು ಕೇಳಿದಾಗ ಕುಮಾರಸ್ವಾಮಿ 2 ಕೋಟಿ ರೂ. ಕೊಡಿ ಮಾಡುತ್ತೇನೆ ಎಂದು ತಮಾಷೆ ಮಾಡಿದ್ದರು ಅಷ್ಟೆ ಎಂದರು.
Advertisement
Advertisement
ಇಂದು ಸ್ಪೀಕರ್ ಮೇಲೆ ಆರೋಪ ಮಾಡಿದ್ದಾರೆ. ಒಂದು ವೇಳೆ ಅವರು ತಪ್ಪು ಮಾಡಿದ್ದರೆ, ಅವರೆ ಹೇಗೆ ತನಿಖೆ ಮಾಡಲು ಸೂಚಿಸುತ್ತಾರ. ಸರ್ಕಾರ ಈ ಬಗ್ಗೆ ತನಿಖೆ ಮಾಡಿಸಬೇಕು. 15 ದಿನದ ಒಳಗೆ ಎಸ್‍ಐಟಿ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ. ಬಿಜೆಪಿಯವರ ಮಾತಿನಲ್ಲಿ ಅರ್ಥವಿಲ್ಲ. ಸಭಾಧ್ಯಕ್ಷರು ಈಗಾಗಲೇ ಈ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv