ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ್ರೆ, ಬಾಬ್ರಿ ಮಸೀದಿಯೂ ಆಗಲಿ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ
ಡಿಸಿಎಂ ಜಿ.ಪರಮೇಶ್ವರ್ ಅವರನ್ನು ಸದಾಶಿವನಗರದ ನಿವಾಸದಲ್ಲಿ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಜಮೀರ್, ರಾಮ ಮಂದಿರ ಕಟ್ಟಲು ದೇಶದ ಯಾವ ಮುಸ್ಲಿಮರು ವಿರೋಧ ಮಾಡಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ಜೊತೆ ಮಸೀದಿಯೂ ನಿರ್ಮಾಣ ಆಗಲಿ ಎನ್ನುವುದು ಮುಸ್ಲಿಂ ಆಶಯ ಅಂದ್ರು.
Advertisement
ಬಿಜೆಪಿ ವಿರುದ್ಧ ಕಿಡಿ:
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ನಾಯಕರಿಗೆ ರಾಮಮಂದಿರದ ನೆನಪು ಆಗುತ್ತಿದೆ. 2014ರಲ್ಲೇ ಅಧಿಕಾರಕ್ಕೆ ಬಂದರೂ ಅಲ್ಲಿಂದ ಇಲ್ಲಿಯವರೆಗೆ ಈ ವಿಚಾರ ಮಾತನಾಡಿಲ್ಲ. ಚುನಾವಣೆಗಾಗಿ ಮತ್ತೆ ರಾಮ ಮಂದಿರದ ಬಗ್ಗೆ ಮಾತನಾಡುತ್ತಿದ್ದಾರೆ. ಚುನಾವಣೆ ಮುಗಿದ ಮೇಲೆ ಮತ್ತೆ ಸುಮ್ಮನಾಗುತ್ತಾರೆ ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಕಿಡಿಕಾರಿದರು.
Advertisement
Advertisement
ಟಿಪ್ಪು ಜಯಂತಿ ವಿಚಾರವನ್ನ ವೋಟ್ ಬ್ಯಾಂಕ್ ಗಾಗಿ ಬಿಜೆಪಿಯವರು ವಿವಾದ ಮಾಡ್ತಿದ್ದಾರೆ. ಅವರಿಗೆ ಚುನಾವಣೆಗೆ ಯಾವುದೇ ವಿಚಾರ ಇಲ್ಲ. ಹಿಂದೆ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಟಿಪ್ಪು ಜಯಂತಿ ಮಾಡಿದ್ದರು. ಯಡಿಯೂರಪ್ಪ, ಆರ್ ಅಶೋಕ್, ಶೋಭಾ ಕರಂದ್ಲಾಜೆ ಜಯಂತಿ ಮಾಡಿಲ್ವಾ….? ಈಗ್ಯಾಕೆ ಇವರಿಗೆ ಟಿಪ್ಪು ಜಯಂತಿ ಬೇಡ ಎಂದು ಪ್ರಶ್ನಿಸಿದರು.
Advertisement
ಕಾಂಟ್ರವರ್ಸಿ ಬೇಡ:
ಸಿದ್ದರಾಮಯ್ಯ ಸರ್ಕಾರ ಈ ಹಿಂದೆ ಮೂರು ಬಾರಿ ಟಿಪ್ಪು ಜಯಂತಿ ಆಚರಣೆ ಮಾಡಿದ್ದಾರೆ. ಹಾಗಾಗಿ ಸಮ್ಮಿಶ್ರ ಸರ್ಕಾರದಲ್ಲಿಯೂ ಟಿಪ್ಪು ಜಯಂತಿ ಅಚರಣೆ ಮಾಡಲಾಗುತ್ತಿದೆ. ಎಲ್ಲ ತಾಲೂಕು ಮಟ್ಟದಲ್ಲಿಯೂ ಜಯಂತಿ ಮಾಡಲಾಗುತ್ತಿದೆ. ಟಿಪ್ಪು ವಿವಿ ಮತ್ತು ಟಿಪ್ಪು ಪುತ್ಥಳಿ ನಿರ್ಮಾಣ ವಿಚಾರ ಸದ್ಯ ಬೇಡ. ಇಂತಹ ಕಾಂಟ್ರರ್ವಸಿ ಮಾತಾಡೋದು ಬೇಡ. ಮುಂದಿನ ದಿನಗಳಲ್ಲಿ ಈ ವಿಚಾರದ ಬಗ್ಗೆ ಮಾತಾಡೋಣ ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv