– ಗನ್‌ಮ್ಯಾನ್ ಜೇಬಿನಿಂದ ಹಣ ತೆಗೆದು ಮಹಿಳೆಗೆ ಕೊಟ್ಟ ಜಮೀರ್
ರಾಮನಗರ: ಚನ್ನಪಟ್ಟಣ ಉಪಚುನಾವಣಾ ಕಣ ರಂಗೇರಿದೆ. ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದಲ್ಲಿ ಸಚಿವ ಜಮೀರ್ ಅಹ್ಮದ್ (Zameer Ahmed) ಅವರು ನೀತಿ ಸಂಹಿತೆ ಉಲ್ಲಂಘಿಸಿದ್ರಾ ಎಂಬ ಪ್ರಶ್ನೆ ಉದ್ಭವಿಸಿದೆ. ಪ್ರಚಾರದ ವೇಳೆ ಮಹಿಳೆಯೊಬ್ಬರಿಗೆ ಸಚಿವರು 500 ರೂ. ದುಡ್ಡು ಕೊಟ್ಟಿರುವ ವೀಡಿಯೋ ವೈರಲ್ ಆಗಿದೆ.
ನಿನ್ನೆ ರಾತ್ರಿ ನಗರದ ಯಾರಬ್ ನಗರದಲ್ಲಿ ಸಿ.ಪಿ.ಯೋಗೇಶ್ವರ್ ಪರ ಜಮೀರ್ ಪ್ರಚಾರ ನಡೆಸಿದ್ದರು. ಪ್ರಚಾರದ ವೇಳೆ ಮಹಿಳೆಗೆ 500 ಮುಖಬೆಲೆಯ ನೋಟನ್ನು ಜಮೀರ್ ಕೊಟ್ಟಿದ್ದಾರೆ. ಗನ್ ಮ್ಯಾನ್ ಬಳಿಯಿಂದ ಹಣ ಪಡೆದು ಪ್ರಚಾರ ವಾಹನದ ಮೇಲಿಂದಲೇ ಮಹಿಳೆಗೆ ಹಣ ನೀಡಿದ್ದಾರೆ. ಈ ದೃಶ್ಯದ ವೀಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಇದನ್ನೂ ಓದಿ: ಮುಡಾದಲ್ಲಿ ಸಿಎಂ ಪ್ರಭಾವಕ್ಕೆ ಮತ್ತೊಂದು ಸಾಕ್ಷಿ – ಸಿಎಂ ಪತ್ನಿ ಕ್ರಯಪತ್ರದ ಮುದ್ರಾಂಕ ಶುಲ್ಕ ತಹಶೀಲ್ದಾರ್‌ರಿಂದಲೇ ಪಾವತಿ
ಶನಿವಾರ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಪರ ಸಚಿವ ಜಮೀರ್, ರಹೀಂ ಖಾನ್, ಡಿ.ಕೆ.ಸುರೇಶ್ ಪ್ರಚಾರ ನಡೆಸಿದ್ದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ನಾಯಕರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಕಾಂಗ್ರೆಸ್ ಸಚಿವರಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಈ ಉಪಚುನಾವಣೆ ಬಿಜೆಪಿ ಬಸವರಾಜ ಬೊಮ್ಮಾಯಿ ವರ್ಸಸ್ ಕಾಂಗ್ರೆಸ್ ಸರ್ಕಾರ: ಬೊಮ್ಮಾಯಿ