ಕೊಪ್ಪಳ: ಸರ್ಕಾರದ ಆದೇಶವನ್ನು ಉಲ್ಲೇಂಘಿಸಿದಕ್ಕೆ ವಸತಿ ಸಚಿವ ಜಮೀರ್ ಅಹಮದ್ ಖಾನ್ (Zameer Ahmed Khan) ಪುತ್ರ ಝೈದ್ ಖಾನ್ (Zaid Khan) ಮತ್ತು ರಚಿತಾ ರಾಮ್ (Rachita Ram) ಅಭಿನಯದ ಕಲ್ಟ್ (Cult) ಸಿನಿಮಾದ ಶೂಟಿಂಗ್‌ಗೆ ಅರಣ್ಯ ಇಲಾಖೆ ಶಾಕ್ ನೀಡಿದ್ದು ಚಿತ್ರೀಕರಣ ಸ್ಥಗಿತಗೊಂಡಿದೆ.
ಕಳೆದ ಕೆಲ ದಿನಗಳಿಂದ ಕಲ್ಟ್ ಚಿತ್ರ ತಂಡವು ಹಂಪಿ ಸೇರಿದಂತೆ ನಾನಾ ಕಡೆಗಳಲ್ಲಿ ಚಿತ್ರೀಕರಣ ನಡೆಸಿದೆ. ಅದೇ ರೀತಿಯಾಗಿ ತಾಲೂಕಿನ ರಂಗಾಪೂರ, ಸಣಾಪೂರ ಕೆರೆ ಭಾಗದಲ್ಲಿ ಚಿತ್ರೀಕರಣಕ್ಕೆ ಸೆಟ್ ಹಾಕಿತ್ತು.
ಸಣಾಪೂರ ಗ್ರಾಮದ ತುಂಗಭದ್ರಾ ನದಿ (Tungabhadra River) ದಡದಲ್ಲಿ ಬೆಂಕಿ ಹಚ್ಚಿ ಚಿತ್ರೀಕರಣ ಮಾಡಲು ಮುಂದಾಗಿದೆ. ಅನುಮತಿ ಪಡೆಯದೇ ಶೂಟಿಂಗ್‌ಗೆ ಮುಂದಾಗಿದ್ದಕ್ಕೆ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿ ತಡೆ ನೀಡಿದ್ದಾರೆ. ಇದನ್ನೂ ಓದಿ: ಇನ್ನು ಮುಂದೆ ಅರಣ್ಯದಲ್ಲಿ ಯಾವುದೇ ಚಿತ್ರೀಕರಣಕ್ಕೆ ಸರ್ಕಾರದ ಅನುಮತಿ ಕಡ್ಡಾಯ
ಶೂಟಿಂಗ್‌ಗೆ ಸಿದ್ಧತೆ ಮಾಡಿಕೊಂಡಿದ್ದ ಸ್ಥಳ ಅರಣ್ಯ ಪ್ರದೇಶ ಹಾಗೂ ನೀರುನಾಯಿ ಸಂರಕ್ಷಿತ ಪ್ರದೇಶವಾಗಿರುವ ಕಾರಣ ಅರಣ್ಯ ಇಲಾಖೆ ಚಿತ್ರೀಕರಣವನ್ನು ತಡೆ ಹಿಡಿದಿದೆ.
ಪರವಾನಿಗೆ ಪಡೆದ ನಂತರ ಚಿತ್ರೀಕರಣ ಮಾಡಲು ಅವಕಾಶ ನೀಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಕಲ್ಟ್ ಚಿತ್ರ ತಂಡಕ್ಕೆ ಸೂಚನೆಯನ್ನು ನೀಡಿದ್ದಾರೆ.
ಅರಣ್ಯ (Forest) ಪ್ರದೇಶದಲ್ಲಿ ಸಿನಿಮಾ, ಸಾಕ್ಷ್ಯಚಿತ್ರ, ಧಾರಾವಾಹಿ ಸೇರಿದಂತೆ ಯಾವುದೇ ಚಿತ್ರೀಕರಣಕ್ಕೆ (Shooting) ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ಸರ್ಕಾರ ಆದೇಶ ಪ್ರಕಟಿಸಿದೆ.