ದಾವಣಗೆರೆ: ಸಿಎಂ ಕುಮಾರಸ್ವಾಮಿ ಅವರು ಹೆಚ್ಚು ದೇವಾಲಯಕ್ಕೆ ಭೇಟಿ ನೀಡುತ್ತಿರುವುದು ಶತ್ರುಗಳಿಂದ ಅಲ್ಲ ಎಂದು ಆಹಾರ ನಾಗರಿಕ ಪೂರೈಕೆ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿರೋಧಿ ಪಕ್ಷದವರು ಸಿಎಂ ಏನು ಮಾಡಿದರು ಟೀಕೆ ಮಾಡುತ್ತಾರೆ. ಟೀಕೆ ಮಾಡುವುದು ಅವರ ಕೆಲಸವಾಗಿದೆ. ಆದರೆ ನಮ್ಮ ಸರ್ಕಾರ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು, ತನ್ನ ಕಾರ್ಯಗಳನ್ನು ಮುಂದುವರಿಸುತ್ತದೆ ಎಂದರು.
Advertisement
ಕುಮಾರಸ್ವಾಮಿ ಅವರು ಸದ್ಯ ಉತ್ತರ ಕರ್ನಾಟಕಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿನ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಅವರಿಗೆ ಯಾವುದೇ ಶತ್ರುಗಳ ಸಮಸ್ಯೆ ಇಲ್ಲ. ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೆ ಜನರು ಟೀಕೆ ಮಾಡುವುದು ಸಾಮಾನ್ಯ. ಕುಮಾರಸ್ವಾಮಿ ಅವರು ಭತ್ತದ ನಾಟಿ ಮಾಡಿದರೂ ಟೀಕೆ ಮಾಡಿದ್ದಾರೆ. ಅದ್ದರಿಂದ ಈ ಕುರಿತು ಹೆಚ್ಚಿನ ಪ್ರಮುಖ್ಯತೆ ನೀಡುವುದು ಅಗತ್ಯವಿಲ್ಲ ಎಂದು ಹೇಳಿದರು.
Advertisement
Advertisement
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಗೆ ಧರ್ಮಸ್ಥಳದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರು. ಈ ವೇಳೆ ಗುಂಡ್ಯ ಮೂಲಕ ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಆಗಿದ್ದರಿಂದ ಪುತ್ತೂರಿನ ಮಾರ್ಗವಾಗಿ ಬೆಳ್ಳಾರೆ ಮೂಲಕ ಸುತ್ತು ಬಳಸಿ ಕುಮಾರಸ್ವಾಮಿ ಅವರು ಸುಬ್ರಹ್ಮಣ್ಯಕ್ಕೆ ತೆರಳಿದ್ದರು. ಅಲ್ಲದೇ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೆಟ್ಟ ದೃಷ್ಟಿ ಮತ್ತು ದೋಷ ನಿವಾರಣೆಗಾಗಿ ನಾಗಪೂಜೆ ಪೂಜೆಯಲ್ಲಿ ಭಾಗಿಯಾಗಿದ್ದರು.
Advertisement
ಸಿಎಂ ಸೋಮವಾರ ಹೊಳೆನರಸೀಪುರದ ಹರದನಹಳ್ಳಿ ದೇವೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ಈ ವೇಳೆ ಕುಮಾರಸ್ವಾಮಿ ಅವರು ಕುಟುಂಬ ಸಮೇತ ಪೂಜೆ ಸಲ್ಲಿಸಿತ್ತು. ಅರ್ಚಕರು ಸಿಎಂ ಕುಮಾರಸ್ವಾಮಿ ದಂಪತಿಗೆ ಹೇಳಿದ್ದ ಪ್ರದಕ್ಷಿಣೆ ದಿಕ್ಕನ್ನು ಸಚಿವ ರೇವಣ್ಣ ವಾಸ್ತು ಪ್ರಕಾರ ಬದಲಾಗಬೇಕು ಎಂದು ಹೇಳಿದ್ದರು. ಬಳಿಕ ರೇವಣ್ಣ ಹೇಳಿದಂತೆಯೇ ಕುಮಾರಸ್ವಾಮಿ ದಂಪತಿ ಪ್ರದಕ್ಷಿಣೆ ಹಾಕಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv