ಬೆಂಗಳೂರು: ಬೈ ಎಲೆಕ್ಷನ್ ಹೊತ್ತಲ್ಲಿ ಸಚಿವ ಜಮೀರ್ (Zameer Ahmed Khan) ವಿವಾದದ ಮೇಲೆ ವಿವಾದ ಮೈಮೇಲೆ ಎಳೆದುಕೊಳ್ತಿದ್ದಾರೆ. ವಕ್ಫ್ ಆಸ್ತಿ ವಿಚಾರ ಕೆದಕಿ ಜನಾಕ್ರೋಶಕ್ಕೆ ತುತ್ತಾಗಿರುವ ಸಚಿವ ಜಮೀರ್, ಇದೀಗ ಕುಮಾರಸ್ವಾಮಿ (HD Kumaraswamy) ಬಗ್ಗೆ ಅನುಚಿತ ಪದ ಬಳಸಿ ಮತ್ತೊಮ್ಮೆ ವಿವಾದಕ್ಕೆ ಕಾರಣರಾಗಿದ್ದಾರೆ.
Advertisement
ಚನ್ನಪಟ್ಟಣದಲ್ಲಿ ಪ್ರಚಾರ ವೇಳೆ ಕುಮಾರಸ್ವಾಮಿ ಬಣ್ಣದ ಬಗ್ಗೆ ಮಾತಾಡಿ ಲೇವಡಿ ಮಾಡಿದ್ದಾರೆ. ಕರಿಯಾ ಕುಮಾರಸ್ವಾಮಿ ಎಂದು ಜರೆದಿದ್ದಾರೆ. ಅಷ್ಟೇ ಅಲ್ಲ, ಇನ್ನೊಂದು ಹೆಜ್ಜೆ ಮುಂದೆ ಹೋದ ಜಮೀರ್, ಹಿಂದೆ ಹಿಜಬ್ ಬೇಡ ಎಂದಿದ್ದ ಕುಮಾರಸ್ವಾಮಿಗೆ ಈಗ ಮುಸ್ಲಿಮರ ವೋಟ್ ಬೇಕಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: Manipur | ಭದ್ರತಾ ಪಡೆಗಳೊಂದಿಗೆ ಭಾರಿ ಗುಂಡಿನ ಚಕಮಕಿ – 11 ಶಂಕಿತ ಕುಕಿ ಬಂಡುಕೋರರು ಬಲಿ!
Advertisement
Advertisement
ನಿನ್ ರೇಟ್ ಎಷ್ಟು ಹೇಳು.. ಮುಸ್ಲಿಮರೆಲ್ಲಾ ಸೇರಿ ನಿಮ್ಮ ಕುಟುಂಬವನ್ನು ಖರೀದಿ ಮಾಡ್ತಾರೆ ಅಂತಾ ಸವಾಲ್ ಹಾಕಿದ್ದಾರೆ. ಜಮೀರ್ ಮಾತುಗಳೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇದು ಜನಾಂಗೀಯ ನಿಂದನೆ.. ಎಂದು ಜೆಡಿಎಸ್ ಟೀಕಿಸಿದೆ. ಇದು ಅಕ್ಷಮ್ಯ.. ಜಮೀರ್ ವಿರುದ್ಧ ಕ್ರಮ ಆಗ್ಬೇಕು.. ರಾಜೀನಾಮೆ ಪಡೀಬೇಕು ಎಂದು ಆಗ್ರಹಿಸಿದೆ. ಜಮೀರ್ ಹೇಳಿಕೆ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದೆ. ಕೇಂದ್ರ ಸಚಿವ ಕಿರಣ್ ರಿಜಿಜು ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ, ಅಶೋಕ್ ಸೇರಿ ಹಲವರು ಆಕ್ರೋಶ ಹೊರಹಾಕಿದ್ದಾರೆ. ಈ ಬೆನ್ನಲ್ಲೇ ಎಚ್ಚೆತ್ತ ಜಮೀರ್ ಅಹ್ಮದ್, ಕುಮಾರಸ್ವಾಮಿ ನನ್ನನ್ನು ಕುಳ್ಳ ಅಂತಾರೆ.. ನಾನು ಪ್ರೀತಿಯಿಂದ ಕರಿಯಾ ಅಂದಿದ್ದೀನಿ ಅಷ್ಟೇ.. ನಮ್ಮ ಸಮಾಜವನ್ನು ಖರೀದಿ ಮಾಡಲಾಗಲ್ಲ ಅಂದಿದ್ದೇನೆ ಅಷ್ಟೇ ಅಂತಾ ತೇಪೆ ಹಚ್ಚಲು ನೋಡಿದ್ದಾರೆ.
Advertisement
ಚನ್ನಪಟ್ಟಣ ಎಲೆಕ್ಷನ್‌ಗೆ ಸ್ಟೀಲ್, ಕಾಂಟ್ರಾಕ್ಟ್ ದುಡ್ಡಾ?
ಚನ್ನಪಟ್ಟಣ ಚುನಾವಣೆಗೆ ಸ್ಟೀಲ್ ಕಂಪನಿ ದುಡ್ಡನ್ನು ಕುಮಾರಸ್ವಾಮಿ ಹರಿಸ್ತಿದ್ದಾರೆ ಎಂಬ ಚಲುವರಾಯಸ್ವಾಮಿ ಆರೋಪಕ್ಕೆ ಜೆಡಿಎಸ್ ಗರಂ ಆಗಿದೆ.ಚ ಲುವರಾಯಸ್ವಾಮಿಯನ್ನು ಕೆರೆ ಕಳ್ಳ, ವಂಚಕ ಮಂತ್ರಿ, ಲೂಟಿಕೋರ ಎಂಬ ಪದಪುಂಜ ಬಳಸಿ ಜೆಡಿಎಸ್ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದೆ. ಗುತ್ತಿಗೆದಾರನಿಗೆ ಮಂಡ್ಯ ಲೋಕಸಭೆ ಟಿಕೆಟ್ ಕೊಡಿಸಿ ಎಷ್ಟು ಸಂಪಾದಿಸಿದ್ದೀಯಾ ಅಂತಾ ಗೊತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿದೆ. ಇದ್ರ ಮಧ್ಯೆಯೂ, ಕುಮಾರಸ್ವಾಮಿ ಕಲೆಕ್ಷನ್ ಗಿರಾಕಿ.. ಎಂದು ಚಲುವರಾಯಸ್ವಾಮಿ ಕರೆದಿದ್ದಾರೆ. ಅವರು ಎಲೆಕ್ಷನ್ ಕಲೆಕ್ಷನ್ ಹೇಗೆ ಮಾಡ್ತಾರೆ ಗೊತ್ತು ಎಂದಿದ್ದಾರೆ. ಇದನ್ನೂ ಓದಿ: ಇಸ್ರೇಲ್ ಮೇಲೆ 150 ರಾಕೆಟ್‌ಗಳ ಸುರಿಮಳೆ – ಹಿಜ್ಬುಲ್ಲಾ ಭೀಕರ ದಾಳಿಗೆ ಹಲವೆಡೆ ಹಾನಿ!
ಇನ್ನು ಸ್ಟೀಲ್ ಜೊತೆಗೆ ಮೈನಿಂಗ್ ದುಡ್ಡಲ್ಲಿ ಕುಮಾರಸ್ವಾಮಿ ಎಲೆಕ್ಷನ್ ಮಾಡ್ತಿದ್ದಾರೆ ಎಂಬರ್ಥದ ಹೇಳಿಕೆಯನ್ನು ಡಿಸಿಎಂ ನೀಡಿದ್ದಾರೆ. ಇದಕ್ಕೆ ಬಿಜೆಪಿ ಕೌಂಟರ್ ನೀಡಿದೆ. ಗುತ್ತಿಗೆದಾರರಿಂದ ಸಂಗ್ರಹಿಸಿದ ಹಣದಲ್ಲಿ ಕಾಂಗ್ರೆಸ್ ಎಲೆಕ್ಷನ್ ಮಾಡ್ತಿದೆ ಎಂದು ಕೇಂದ್ರ ಸಚಿವ ಸೋಮಣ್ಣ ಪ್ರತ್ಯಾರೋಪ ಮಾಡಿದ್ದಾರೆ. ಈ ಮಧ್ಯೆ, ಹಣ ಹಂಚಿಕೆ ಆರೋಪದಡಿ ಸಚಿವ ಜಮೀರ್ ವಿರುದ್ಧ ಚುನಾವಣಾ ಆಯೋಗ ದೂರು ದಾಖಲಿಸಿಕೊಂಡಿದೆ. ಇದನ್ನೂ ಓದಿ: ಸಮಾಜ ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ, ರಾಷ್ಟ್ರೀಯ ಶತ್ರುಗಳ ವಿರುದ್ಧ ಹೋರಾಡಬೇಕಿದೆ – ಮೋದಿ ವಾಗ್ದಾಳಿ