Dharwad
ಬಸ್ ಡ್ರೈವರ್ ಆದ ಸಚಿವ ವಿನಯ ಕುಲಕರ್ಣಿ

ಧಾರವಾಡ: ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರು ಡ್ರೈವರ್ ಆಗಿ ಬಸ್ ಚಾಲನೆ ಮಾಡಿದ್ದಾರೆ.
ಹೌದು, ಇಂದು ಧಾರವಾಡ ನಗರ ಸಾರಿಗೆಗೆ ಹೊಸ 50 ಮಿನಿ ಬಸ್ ಲೋಕಾರ್ಪಣೆ ಮಾಡಲಾಯಿತು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಲಕರ್ಣಿ ಬಸ್ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ನಂತರ ತಾವೇ ಬಸ್ ಚಲಾಯಿಸಿದರು.
ಇಂದು ಧಾರವಾಡ ನಗರ ಸಾರಿಗೆಗೆ ಹೊಸ 50 ಮಿನಿ ಬಸ್‍ಗಳನ್ನು ಲೋಕಾರ್ಪಣೆ ಮಾಡಲಾಗಿದೆ. ನಗರದಲ್ಲಿ ಕೆಲವು ಕಡೆ ಚಿಕ್ಕ ರಸ್ತೆಗಳಿರುವುದರಿಂದ ಇವುಗಳು ಸಂಚಾರಕ್ಕೆ ಸೂಕ್ತವಾಗಿವೆ. ನಗರದಲ್ಲಿ ಮಿನಿಬಸ್‍ಗಳ ಚಾಲನೆಯಿಂದ ಕೆಎಸ್‍ಆರ್‍ಟಿಸಿಗೆ ಒಳ್ಳೆಯ ಆದಾಯ ಬರಲಿದೆ ಎಂದು ಸಚಿವ ವಿನಯ ಕುಲಕರ್ಣಿ ತಿಳಿಸಿದರು.
