ಚಾಮರಾಜನಗರ: ಹಾಲಿನ ದರ ಏರಿಕೆ ಕುರಿತು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ (K.Venkatesh) ಚಾಮರಾಜನಗರದಲ್ಲಿ ಮಾತನಾಡಿದ್ದಾರೆ.
ಲೀಟರ್ ಹಾಲಿಗೆ 5 ರೂ. ಏರಿಕೆ ಮಾಡುವಂತೆ ರೈತರ ಒತ್ತಾಯ ಇದೆ. ರೈತರ ಒತ್ತಾಯ ಪರಿಗಣಿಸಿ ಮುಂದಿನ ದಿನಗಳಲ್ಲಿ ದರ ಏರಿಕೆಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತಳ ಸಮುದಾಯದವರು ಸಂಸ್ಕೃತ ಕಲಿತು ಕಾವ್ಯ ರಚಿಸಿದರೆ ಅಂಥವರ ಬಗ್ಗೆ ಕಥೆ ಕಟ್ಟುತ್ತಾರೆ: ಸಿದ್ದರಾಮಯ್ಯ
ನಾಯಕ ಸಮುದಾಯದಿಂದ ಪ್ರತ್ಯೇಕ ವಾಲ್ಮೀಕಿ ಜಯಂತಿ ಆಚರಣೆ ಕುರಿತು ಮಾತನಾಡಿ, ಈಗಾಗಲೇ ಸಿಎಂ ಸಿದ್ದರಾಮಯ್ಯ ಪುತ್ಥಳಿ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಕೇವಲ ವಾಲ್ಮೀಕಿ ಪುತ್ಥಳಿ ಅಷ್ಟೇ ಅಲ್ಲ ಭಗೀರಥ ಮಹರ್ಷಿ ಹಾಗೂ ಕನಕ ಮಹರ್ಷಿಯ ಪುತ್ಥಳಿಯನ್ನು ಸಹ ನಿರ್ಮಿಸುತ್ತೇವೆ. ಜಾಗ ನಿಗದಿ ಆಗಬೇಕಿದ್ದು, ಬಳಿಕ ಗುದ್ದಲಿ ಪೂಜೆ ನಡೆಯಲಿದೆ ಎಂದು ಹೇಳಿದ್ದಾರೆ.
ಇದ್ದಕ್ಕಿದ್ದಂತೆ ಇಂದೇ ಗುದ್ದಲಿ ಪೂಜೆ ಮಾಡ್ಬೇಕಂದ್ರೆ ಸಾಧ್ಯವಾಗುತ್ತಾ? ಈಗಾಗಲೇ ನಾಯಕ ಮುಖಂಡರ ಜತೆ ನಮ್ಮ ಜಿಲ್ಲಾಡಳಿತ ಮಾತನಾಡಿದೆ. ಸಮಯಾವಕಾಶ ಬೇಕಿದೆ, ಎಲ್ಲರೂ ತಾಳ್ಮೆಯಿಂದ ಇರಬೇಕಿದೆ ಎಂದಿದ್ದಾರೆ. ಇದನ್ನೂ ಓದಿ: RSS ಅಂದ್ರೆ ‘ರೂಮರ್ಸ್ ಸ್ಪ್ರೆಡಿಂಗ್ ಸಂಘ್’: ಬಿ.ಕೆ.ಹರಿಪ್ರಸಾದ್ ಕಿಡಿ