ಚಾಮರಾಜನಗರ: ರಾಮನನ್ನು ಬಿಜೆಪಿಯವರು (BJP) ದೊಡ್ಡ ಅಸ್ತ್ರ ಮಾಡಿಕೊಂಡು ಜನರ ಭಾವನೆ ಕೆರಳಿಸುತ್ತಿದ್ದಾರೆ ಎಂದು ರೇಷ್ಮೆ ಹಾಗೂ ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ (K. Venkatesh) ಆರೋಪಿಸಿದರು.
ಚಾಮರಾಜನಗರ (Chamarajanagar) ಜಿಲ್ಲೆಯ ಮಹದೇಶ್ವರ ಬೆಟ್ಟದಲ್ಲಿ ಮಾತನಾಡಿದ ಅವರು, ರಾಮನ ಮೇಲೆ ನಮ್ಮ ಅಭ್ಯಂತರವಿಲ್ಲ.ನಮ್ಮ ಅಭ್ಯಂತರ ಇರೋದು ಬಿಜೆಪಿ ನಡವಳಿಕೆ ಮೇಲೆ. ರಾಮಮಂದಿರ ನಿರ್ಮಾಣದ ಬಗ್ಗೆ ನಮ್ಮ ತಕರಾರಿಲ್ಲ, ಆದರೆ ರಾಮ ನಮ್ಮವನೇ ಅಂತಾ ಬಿಜೆಪಿಯವರು ಹೇಳುವ ವಿಚಾರದಲ್ಲಿ ನಮ್ಮ ತಕರಾರಿದೆ, ಆಕ್ರೋಶ ಇದೆ ಎಂದರು.
Advertisement
Advertisement
ಎಲ್ಲರಿಗೂ ಬೇಕಾದವನು ರಾಮ, ಹನುಮಂತ, ಸೀತೆಯನ್ನು ಎಲ್ಲರೂ ಪೂಜೆ ಮಾಡ್ತಾರೆ. ಅದರೆ ಬಿಜೆಪಿಯವರು ರಾಮ ತಮಗೆ ಸೇರಿದವನೆಂದು ಪ್ರತಿಬಿಂಬಿಸುತ್ತಿದ್ದಾರೆ. ಇದು ಸರಿಯಾದ ವರ್ತನೆಯಲ್ಲ. ಆ ದೃಷ್ಟಿಯಿಂದ ಸಿದ್ದರಾಮಯ್ಯ ನಮ್ಮ ನಾಯಕರು. ಆದ್ದರಿಂದ ರಾಮ ನಮ್ಮಲ್ಲಿ ಇದ್ದಾರೆಂದು ಮಾಜಿ ಸಚಿವ ಆಂಜನೇಯ ಹೇಳಿದ್ದಾರಷ್ಟೇ. ರಾಮನನ್ನು ತುಚ್ಛೀಕರಿಸುವ ರೀತಿ ಅವರು ಹೇಳಿಲ್ಲ ಎಂದು ಅವರು ಮಾಜಿ ಸಚಿವ ಆಂಜನೇಯ ಹೇಳಿಕೆ ಸಮರ್ಥಿಸಿಕೊಂಡರು. ಇದನ್ನೂ ಓದಿ: ನಿಮಗೆ ತಾಕತ್ ಇದ್ದರೆ ಕರಸೇವಕರನ್ನು ಬಂಧಿಸಿ: ಸಿಎಂ ವಿರುದ್ಧ ಸುನೀಲ್ ಕುಮಾರ್ ಕಿಡಿ
Advertisement
Advertisement
ರಾಮಮಂದಿರ (Ram Mandir) ನಮ್ಮದೇ ಎಂದು ಬಿಜೆಪಿ ಬಿಂಬಿಸಿಕೊಳ್ಳುವುದು ಬೇಸರದ ಸಂಗತಿ. ಅಯೋಧ್ಯೆ ವಿಚಾರ ಬಿಟ್ಟು ಇವರಿಗೆ ಬೇರೆ ಏನೂ ಇಲ್ಲ. ಈ ದೇಶದ ಸಮಸ್ಯೆ ಬಗ್ಗೆ ಯಾರೂ ಮಾತಾಡ್ತಿಲ್ಲ. ಕುಡಿಯುವ ನೀರು, ಮನೆಯಿಲ್ಲದವರು ಈ ದೇಶದಲ್ಲಿ ಎಷ್ಟೋ ಜನರಿದ್ದಾರೆ. ಮೋದಿ ಅವರಿಗೆ ಇದೆಲ್ಲಾ ಏನೂ ಗೊತ್ತಾಗಲ್ಲ. ವರ್ಷದಲ್ಲಿ ಆರು ತಿಂಗಳು ಫಾರಿನ್ ಗೆ ಸುತ್ತುತ್ತಾರೆ. ಎಲ್ಲೋ ಒಂದು ಕಡೆ ಬಂದು ಭಾಷಣ ಮಾಡಿ ಹೋಗ್ತಾರೆ. ಬಿಹಾರ, ಮಧ್ಯಪ್ರದೇಶ, ಯುಪಿಯ ಹಳ್ಳಿಗಳಿಗೆ ಹೋಗಿ ನೋಡಿದ್ರೆ ಜನರ ಪರಿಸ್ಥಿತಿ ತಿಳಿಯುತ್ತೆ ಎಂದು ಸಚಿವ ಕೆ ವೆಂಕಟೇಶ್ ಹೇಳಿದರು.