ಮಡಿಕೇರಿ: ಕೇರಳ ರಾಜ್ಯದ ಕಾಸರಗೋಡು ಹಾಗೂ ಕಣ್ಣೂರು ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರು ಹೆಚ್ಚಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ಕೊಡಗು ಮತ್ತು ಕೇರಳ ನಡುವಿನ ರಸ್ತೆಗಳ ಸಂಚಾರವನ್ನು ರೀಓಪನ್ ಮಾಡುವುದು ಸದ್ಯಕ್ಕೆ ಸಾಧ್ಯವೇ ಇಲ್ಲ ಎಂದು ಕೊಡಗು ಉಸ್ತುವಾರಿ ಸಚಿವ ವಿ. ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳ, ಅಗತ್ಯ ವಸ್ತುಗಳಿಗೆ ಕೊಡಗಿನೊಂದಿಗೆ ಸಂಪರ್ಕವಿರುವ ರಸ್ತೆಗಳ ಮೂಲಕ ವ್ಯವಹರಿಸುವುದು ತೀರಾ ಕಡಿಮೆ. ಮೊದಲಿನಿಂದಲೂ ಗುಂಡ್ಲುಪೇಟೆ ಮೂಲಕವೇ ಹತ್ತಿರವಿರುವುದರಿಂದ ಅದೇ ಮಾರ್ಗದ ಮೂಲಕ ವ್ಯವಹರಿಸಿದ್ದಾರೆ. ಹೀಗಾಗಿ ಕೊಡಗು ಮತ್ತು ಕೇರಳ ನಡುವಿನ ರಸ್ತೆ ಸಂಪರ್ಕ ಬಂದ್ ಮಾಡಿರುವ ಜಿಲ್ಲಾಧಿಕಾರಿಯ ಕ್ರಮ ಸರಿಯಾಗಿಯೇ ಇದೆ ಎಂದು ತಿಳಿಸಿದರು.
Advertisement
Advertisement
ರಾಜ್ಯದಲ್ಲಿ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಕೊಡಗಿನಲ್ಲಿ ಮಾತ್ರ ಕೊರೊನಾ ನಿಯಂತ್ರಣದಲ್ಲಿ ಇದೆ. ಕೇರಳದ ಕಾಸರಗೋಡು ಮತ್ತು ಕಣ್ಣೂರಿನಲ್ಲಿ ಅತೀ ಹೆಚ್ಚು ಕೊರೊನಾ ಸೋಂಕಿತರು ಇರುವುದರಿಂದ ಕೊಡಗಿಗೂ ಇದರ ಎಫೆಕ್ಟ್ ಆಗಬಹುದು. ಈ ದೃಷ್ಟಿಯಿಂದ ಅಂತರ್ ರಾಜ್ಯ ಹೆದ್ದಾರಿ ಬಂದ್ ಓಪನ್ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.