– ಶಾಸಕ ಎನ್. ಮಹೇಶ್‌ಗೆ ಸ್ಥಿರಾಸ್ತಿಯೇ ಇಲ್ಲ
ಚಾಮರಾಜನಗರ: ಸಚಿವ ವಿ. ಸೋಮಣ್ಣ (V Somanna) ವರುಣಾ ಬಳಿಕ ಬುಧವಾರ ಚಾಮರಾಜನಗರದಲ್ಲಿ (Chamarajanagar Constituency) ತಮ್ಮ ಉಮೇದುವಾರಿಕೆ ಸಲ್ಲಿಸಿದ್ದು, ಆಸ್ತಿ ವಿವರಗಳನ್ನ ಘೋಷಣೆ ಮಾಡಿದ್ದಾರೆ.
Advertisement
ಚರಾಸ್ತಿ ವಿಚಾರ ಗಮನಿಸಿದರೇ ಸೋಮಣ್ಣಗಿಂತ ಪತ್ನಿ ಶೈಲಜಾ ಶ್ರೀಮಂತರಾಗಿದ್ದು ಸೋಮಣ್ಣ (V Somanna) ಬಳಿ ಚರಾಸ್ತಿ 3.61 ಕೋಟಿ ಅಷ್ಟಿದ್ದರೇ, ಪತ್ನಿ ಶೈಲಜಾ 13.01 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಪತಿಗಿಂತ ಶೈಲಜಾ ಶ್ರೀಮಂತರಾದರೂ ಯಾವುದೇ ವಾಹನ ಹೊಂದಿಲ್ಲ. ಆದರೆ ಸೋಮಣ್ಣ 3 ಕಾರುಗಳ ಮಾಲೀಕರಾಗಿದ್ದಾರೆ. ಇದನ್ನೂ ಓದಿ: ಟಿಕೆಟ್ ಮಾರಿಕೊಂಡ ವೀಡಿಯೋ ಇದ್ರೆ, ತಲೆ ಬೋಳಿಸಿಕೊಂಡು ರಾಜೀನಾಮೆ ನೀಡುತ್ತೇನೆ: ಅಶೋಕ್ ಖೇಣಿ
Advertisement
Advertisement
ಸೋಮಣ್ಣ ಅವರ ಬಳಿ 4.1 ಲಕ್ಷ ರೂ. ನಗದು ಇದ್ದರೇ, ಅವರ ಪತ್ನಿ 9.99 ಲಕ್ಷ ರೂ. ನಗದನ್ನ ಹೊಂದಿದ್ದಾರೆ. ಇನ್ನೂ ಪತಿ- ಪತ್ನಿ ಇಬ್ಬರೂ ಸಾಲ ಹೊಂದಿದ್ದು ಸೋಮಣ್ಣಗೆ 2.9 ಕೋಟಿ ರೂ.ನಷ್ಟು ಸಾಲ ಇದ್ದರೇ ಪತ್ನಿ ಶೈಲಜಾ ಅವರಿಗೆ 4.5 ಕೋಟಿ ರೂ. ಸಾಲ ಇದ್ದು, ಪತ್ನಿ ಶೈಲಜಾ ಅವರ ಬಳಿಯೇ ಸೋಮಣ್ಣ 20 ಲಕ್ಷ ಸಾಲ ಪಡೆದಿದ್ದಾರೆ. ಸೋಮಣ್ಣ ಬಳಿ 10 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದರೇ, ಪತ್ನಿ 21 ಕೋಟಿಯಷ್ಟು ಸ್ಥಿರಾಸ್ತಿ ಹೊಂದಿದ್ದಾರೆ. ಇಬ್ಬರದೂ ಸ್ವಯಾರ್ಜಿತ ಆಸ್ತಿಯಾಗಿದ್ದು ಪಿತ್ರಾರ್ಜಿತವಾಗಿ ಯಾವುದೂ ಬಂದಿಲ್ಲ.
Advertisement
ವಾಟಾಳ್ ಕೋಟ್ಯಾಧೀಶ:
ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸಹ ಮಂಗಳವಾರ ನಾಮಪತ್ರ ಸಲ್ಲಿಸಿದ್ದು 5.3 ಕೋಟಿ ಮೌಲ್ಯದ ಆಸ್ತಿ ಇರುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ. ಚಿನ್ನಾಭರಣ ಹಾಗೂ ಸಾಲ ತಮಗಿಲ್ಲ ಎಂದು ವಾಟಾಳ್ ತಿಳಿಸಿದ್ದು 50 ಸಾವಿರ ರೂ. ನಗದು ಇದೆ ಎಂದು ಮಾಹಿತಿ ಕೊಟ್ಟಿದ್ದಾರೆ. ಬಹುತೇಕ ಆಸ್ತಿ ಪತ್ನಿಯಿಂದ ಬಂದದ್ದಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟಿಕೆಟ್ ಸಿಗದಿದ್ದಕೆ 5 ವರ್ಷಗಳ ಬಳಿಕ ಮತ್ತೆ ಹುದ್ದೆಯನ್ನೇರಿದ ಪೊಲೀಸ್ ಅಧಿಕಾರಿ: ಸಾರ್ವಜನಿಕ ವಲಯದಲ್ಲಿ ಚರ್ಚೆ
ಶಾಸಕ ಎನ್. ಮಹೇಶ್‌ಗೆ ಸ್ಥಿರಾಸ್ತಿಯೇ ಇಲ್ಲ:
ಶಾಸಕ ಎನ್. ಮಹೇಶ್ (N Mahesh) ಅವರು ಕೊಳ್ಳೇಗಾಲದಲ್ಲಿ ನಾಮಪತ್ರ ಸಲ್ಲಿಸಿದ್ದು ಆಸ್ತಿ ವಿವರವನ್ನ ಘೋಷಣೆ ಮಾಡಿಕೊಂಡಿದ್ದು ತಮ್ಮ ಹೆಸರಲ್ಲಿ ಯಾವುದೇ ಸ್ಥಿರಾಸ್ತಿಗಳಿಲ್ಲ ಎಂದು ತಿಳಿಸಿದ್ದಾರೆ. ಚರಾಸ್ತಿಗಳು ಮಾತ್ರ ತಮ್ಮಲ್ಲಿ ಇದ್ದು ಅವುಗಳ ಮೌಲ್ಯ ಒಟ್ಟು 1.83 ಕೋಟಿ ಎಂದು ತಿಳಿಸಿದ್ದಾರೆ. ಇದರಲ್ಲಿ 1 ಕಾರು, 150 ಗ್ರಾಂ ಚಿನ್ನ ಮತ್ತು ಚಿಗುವೆರಾ ಎಂಬವರಿಗೆ 50 ಲಕ್ಷ ರೂ. ಸಾಲ ಕೊಟ್ಟಿರುವುದು ಸೇರಿದೆ.