ಬೆಂಗಳೂರು: ದಕ್ಷಿಣ ಕನ್ನಡದಲ್ಲಿ ಗಲಾಟೆಗಳು ಎಲ್ಲ ನಿಂತು ಶಾಂತ ಸ್ಥಿತಿ ನಿರ್ಮಾಣವಾಗುತ್ತಿದ್ದರೂ, ಕರಾವಳಿ ಗಲಭೆಯನ್ನು ಮುಂದಿಟ್ಟುಕೊಂಡು ರಾಜಕೀಯ ನಾಯಕರ ಡರ್ಟಿ ಪಾಲಿಟಿಕ್ಸ್ ಮತ್ತಷ್ಟು ಜೋರಾಗಿದೆ. ಆಡಳಿತ ಪಕ್ಷ ಕಾಂಗ್ರೆಸ್, ವಿಪಕ್ಷ ಬಿಜೆಪಿಯ ನಾಯಕರು ಜಿದ್ದಿಗೆ ಬಿದ್ದು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಪದ ಬಳಕೆ, ಭಾಷೆಯ ಬಳಕೆ ಹಿಡಿತ ತಪ್ಪುತ್ತಿರುವುದು ಸಾರ್ವಜನಿಕ ಟೀಕೆಗೆ ಗುರಿಯಾಗಿದೆ.
ದಕ್ಷಿಣ ಕನ್ನಡದ ಸದಾನಂದ ಗೌಡ ಅವರು ಮುಖ್ಯಮಂತ್ರಿ ಆದಾಗ ಅವರು ಬೇಡ ಎಂದು ಹೇಳಿ ಶೋಭಾ ಕರಂದ್ಲಾಜೆ, ಯಡಿಯೂರಪ್ಪನವರನ್ನು ಬೆಂಬಲಿಸಿದ್ದು ಈ ಕಾರಣಕ್ಕಾ ಗೊತ್ತಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಯುಟಿ ಖಾದರ್ ಪ್ರಶ್ನಿಸಿದ್ದಾರೆ.
Advertisement
ದಕ್ಷಿಣ ಕನ್ನಡದವರು ಷಂಡಾರ ಎನ್ನುವ ಶೋಭಾ ಕರಂದ್ಲಾಜೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಶೋಭಾ ಅವರು ಮಂಗಳೂರು ಬಿಟ್ಟು ಚಿಕ್ಕಮಗಳೂರು, ಬೆಂಗಳೂರಿನಲ್ಲಿ ನಿಂತದ್ದು ಯಾಕೆ ಎನ್ನುವುದು ನನಗೆ ಗೊತ್ತಿಲ್ಲ. ದಕ್ಷಿಣ ಕನ್ನಡದ ಸದಾನಂದ ಗೌಡರು ಮುಖ್ಯಮಂತ್ರಿ ಆದಾಗ ಬಿಎಸ್ ಯಡಿಯೂರಪ್ಪನವರ ಹಿಂದೆ ಹೋಗಿದ್ದು ಈ ಕಾರಣಕ್ಕಾ ಎನ್ನುವುದನ್ನು ಕರಂದ್ಲಾಜೆ ಅವರೇ ಹೇಳಬೇಕು ಎಂದು ಉತ್ತರಿಸಿದರು.
Advertisement
Advertisement
ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಹತ್ಯೆ ಸಂಬಂಧ ಕಲಬುರಗಿಯಲ್ಲಿ ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ ಅವರು, ನಮ್ಮ ಜಿಲ್ಲೆಗಳಲ್ಲಿ ಏನೇ ಆದ್ರು ನೋಡಿಕೊಂಡು ಇರಲು ದಕ್ಷಿಣ ಕನ್ನಡ ಜಿಲ್ಲೆಯವರು ಷಂಡರಾ? ನಾವು ಪ್ರತಿಭಟನೆ ಮಾಡೋದು ತಪ್ಪಾ ಎಂದು ಪ್ರಶ್ನಿಸಿದ್ದರು.
Advertisement
ಶೋಭಾ ಹೇಳಿಕೆಗೆ ಸಾಥ್ ಎನ್ನುವಂತೆ ಬೆಂಗಳೂರಿನಲ್ಲಿ ಈಶ್ವರಪ್ಪ ಕೂಡ ಮಾತನಾಡಿ ಸುಮ್ನೆ ಕೂರಲು ನಮ್ಮದೇನು ಷಂಡ ಸಮಾಜನಾ ಅಂತಾ ಪ್ರಶ್ನಿಸಿದ್ದಾರೆ. ಇವರಿಗಿಂತ ನಾನೇನು ಕಮ್ಮಿ ಎನ್ನುವಂತೆ ಸಿಎಂ ಕೂಡ ವ್ಯಂಗ್ಯವಾಗಿ ಪ್ರತಿಕ್ರಿಯಿಸಿ ಷಂಡರಾ ಯಾರು, ಗಂಡಸರು ಅಂತಾ ಅವರೇ ಹೇಳ್ತಿದ್ದಾರೆ ನನಗೆ ಗೊತ್ತಿಲ್ಲ ಎಂದು ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಸಂಸದೆ ಶೋಭಾ ಅವರನ್ನು ಕಂಟ್ರೋಲ್ ಮಾಡೋಕೆ ಬಿಎಸ್‍ವೈ ಅವರಿಂದಲೇ ಆಗುತ್ತಿಲ್ಲ. ನನ್ನ ಮದುವೆಯ ಬಗ್ಗೆ ಶೋಭಾ ಅವರು ಯಾಕೆ ಮಾತಾಡ್ತಾರೋ ಗೊತ್ತಿಲ್ಲ. ನನಗೆ ಮದುವೆಯಾಗಿ 24 ವರ್ಷ ಮುಗಿದು ಹೋಯ್ತು. ನನಗೆ ಮದುವೆಯಾಗಲು ಮುಂದೆ ಅವಕಾಶ ಇಲ್ಲ. ನಾನು ಯಾರನ್ನು ಮದುವೆಯಾಗಿದ್ದೇನೆ ಎಂದು ಎಲ್ಲರಿಗೂ ಗೊತ್ತು. ಅದರಿಂದ ಸಮಾಜಕ್ಕೆ ಯಾವುದೇ ತಪ್ಪು ಸಂದೇಶ ಹೋಗಿಲ್ಲ. ನಾನು ಅಂದು ದಲಿತ ಹುಡುಗಿಯನ್ನು ಇಷ್ಟಪಟ್ಟಿದ್ರೆ ಅವರನ್ನೇ ಮದುವೆಯಾಗುತ್ತಿದ್ದೆ. ಬಟ್ ಅವರಿಗೇ ಇನ್ನು ಆವಕಾಶವಿದೆ. ನೋಡಿ ಬೇಕಾದ್ರೆ ಮದುವೆ ಮಾಡಿಕೊಳ್ಳಲಿ ಎಂದು ಟಾಂಗ್ ನೀಡಿದರು.
ಬೆಂಗಳೂರಿನ ಜಯನಗರ ಶಾಸಕ ವಿಜಯಕುಮಾರ್ ಮತ್ತಷ್ಟು ಮುಂದೆ ಹೋಗಿ, ಮುಖ್ಯಮಂತ್ರಿ, ಉಸ್ತುವಾರಿ ಸಚಿವ, ಪೊಲೀಸರು ಎಲ್ಲರೂ ಷಂಡರು ಎಂದು ಹೇಳಿದರು.