Connect with us

Bengaluru City

ರಾಕ್ಷಸರು ಯಾರು, ಪುಣ್ಯಕೋಟಿ ಯಾರಂತ ಜನರೇ ತೀರ್ಮಾನ ಮಾಡಿದ್ದಾರೆ: ಖಾದರ್

Published

on

ಬೆಂಗಳೂರು: ರಾಕ್ಷಸರು ಯಾರು, ಪುಣ್ಯಕೋಟಿ ಯಾರು ಅಂತ ಉಪಚುನಾವಣೆಯಲ್ಲಿ ಬಳ್ಳಾರಿ ಜನ ಉತ್ತರ ಕೊಟ್ಟಿದ್ದಾರೆಂದು ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಗಾಲಿ ಜನಾರ್ದನ ರೆಡ್ಡಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಜೈಲಿನಿಂದ ಬಿಡುಗಡೆಯಾಗಿರುವ ಗಾಲಿ ಜನಾರ್ದನ ರೆಡ್ಡಿ ನೀಡಿದ್ದ ಹೇಳಿಕೆಗೆ, ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ಬಳ್ಳಾರಿ ಜನ ರಾಕ್ಷಸರು ಯಾರು, ಪುಣ್ಯ ಕೋಟಿ ಯಾರೆಂದು ಉಪ ಚುನಾವಣೆಯಲ್ಲೇ ಉತ್ತರ ಕೊಟ್ಟಿದ್ದಾರೆ. ಅಲ್ಲದೇ ನಾನು ಸುಮ್ಮನೆ ಇರುವುದಿಲ್ಲವೆಂದು ಹೇಳಿದ್ದಾರೆ. ಅವರು ಏನು ಮಾಡುತ್ತಾರೆ ಎನ್ನುವುದನ್ನು ನಾವೂ ನೋಡುತ್ತೇವೆಂದು ಗುಡುಗಿದ್ದಾರೆ.

ಇದೇ ವೇಳೆ ಶಿರಾಡಿಘಾಟ್ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಕುರಿತು ಮಾತನಾಡಿ, ಬೆಂಗಳೂರಿನಿಂದ ಮಂಗಳೂರು ಸಂಪರ್ಕಿಸುವ ಶಿರಾಡಿ ಘಾಟ್ ರಸ್ತೆಯ ದುರಸ್ಥಿ ಕಾರ್ಯ ಸಂಪೂರ್ಣ ಮುಗಿದಿದೆ. ದುರಸ್ಥಿ ಇದ್ದ ಕಾರಣ ಇಷ್ಟು ದಿನ, ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಇದೀಗ ಎಲ್ಲಾ ಕಾರ್ಯ ಪೂರ್ಣಗೊಂಡಿದೆ. ಹೀಗಾಗಿ ಎಲ್ಲಾ ವಾಹನಗಳ ಸಂಚಾರಕ್ಕೆ ಇಂದು ಬೆಳಗ್ಗೆಯಿಂದ ಅವಕಾಶ ಮಾಡಿಕೊಡಲಾಗಿದೆ. ಮಧ್ಯಮ ಹಾಗೂ ಭಾರೀ ಗಾತ್ರದ ಎಲ್ಲಾ ವಾಹನಗಳ ಚಾಲಕರು ಸಹಕರಿಸಬೇಕು. ತಿರುವುಗಳಲ್ಲಿ ಓವರ್ ಟೇಕ್ ಮಾಡದೇ, ನಿಧಾನವಾಗಿ ವಾಹನ ಚಾಲಯಿಸಬೇಕೆಂದು ಹೇಳಿದ್ದಾರೆ.

ಕೊಡಗಿನ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ವಿಚಾರದ ಕುರಿತು ಮಾಧ್ಯಮಗಳು ಪ್ರಶ್ನಿಸಿದಾಗ, ಕೊಡಗು ಜಿಲ್ಲೆಯಲ್ಲಿ ಮಾಡೆಲ್ ಮನೆ ಕಟ್ಟಲು ಚಿಂತನೆ ನಡೆಸಲಾಗಿದೆ. ಅಲ್ಲದೇ ಈಗಿದ್ದ ಸಿಂಗಲ್ ಬೆಡ್ ರೂಮಿನ ಬದಲಾಗಿ ಡಬ್ಬಲ್ ಬೆಡ್ ರೂಮಿನ ಮನೆಯಾಗಿ ಕಟ್ಟಲು ಮಾತುಕತೆ ನಡೆಸಿದ್ದೇವೆ. ಈ ನಿಟ್ಟಿನಲ್ಲಿ ಅನುದಾನ ನೀಡುವ ಕುರಿತು ಸಿಎಂ ಕುಮಾರಸ್ವಾಮಿಯವರು ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಅನುದಾನ ಸಿಗುವ ಕುರಿತಾದ ಪ್ರಸ್ತಾವನೆಯನ್ನು ಮುಂದಿನ ಸಂಪುಟಕ್ಕೆ ಕಳುಹಿಸುತ್ತೇವೆ. ಎಲ್ಲಾ ಮಾಡೆಲ್ ಮನೆಗಳ ಒಟ್ಟು ವೆಚ್ಚ 101 ಕೋಟಿ ರೂಪಾಯಿ ಆಗಲಿದ್ದು, ಪ್ರತಿ ಮಾಡೆಲ್ ಮನೆಗೆ 9.45 ಲಕ್ಷ ರೂ. ವೆಚ್ಚ ಬೀಳಲಿದೆ ಎಂದು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Click to comment

Leave a Reply

Your email address will not be published. Required fields are marked *

www.publictv.in