ಬೆಳಗಾವಿ: ದಿನೇ ದಿನೇ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸರ್ಕಾರ ಮಾರ್ಗಸೂಚಿಯನ್ನು ಪಾಲಿಸದಿದ್ದರೆ, ಸಾಮಾನ್ಯರಿಗೆ ದಂಡವನ್ನು ವಿಧಿಸುತ್ತಿದೆ. ಆದರೆ ಜನ ಸಾಮಾನ್ಯರಿಗೆ ಸರ್ಕಾರದ ಮಾರ್ಗಸೂಚಿಯನ್ನು ಮನವರಿಕೆ ಮಾಡುವ ಸಚಿವರೇ ನಾನು ಮಾಸ್ಕ್ ಧರಿಸಲ್ಲ ಎಂದು ಉಡಾಫೆ ಉತ್ತರ ನೀಡಿ ಟೀಕೆಗೆ ಗುರಿಯಾಗಿದ್ದಾರೆ.
ಸಚಿವ ಉಮೇಶ್ ಕತ್ತಿ ಅವರು ಅಥಣಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಸಚಿವರು ಸೇರಿ ಮಾಜಿ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಂಸದ ಅಣ್ಣಾಸಾಹೇಬ್ ಪಾಟೀಲ್, ಶಾಸಕ ಕುಮಟಳ್ಳಿ ಮಾಸ್ಕ್ ಧರಿಸಿರಲಿಲ್ಲ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಸಚಿವ ಉಮೇಶ್‍ಕತ್ತಿ ನಾನು ಮಾಸ್ಕ್ ಹಾಕಲ್ಲ. ಮಾಸ್ಕ್ ಹಾಕೋದು ನನಗೆ ಬಿಟ್ಟಿದ್ದು. ನನಗೆ ಮಾಸ್ಕ್ ಹಾಕಬೇಕು ಎಂದು ಅನ್ನಿಸಿಲ್ಲ. ಹಾಗಾಗಿ ನಾನು ಮಾಸ್ಕ್ ಹಾಕಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕ್ಯೂನಲ್ಲಿ ನಿಂತೆ 16 ಸಾವಿರ ರೂಪಾಯಿ ಸಂಪಾದಿಸುತ್ತಾನೆ
Advertisement
Advertisement
ನಿನ್ನೆ ರಾತ್ರಿ ಪ್ರಧಾನಿಮಂತ್ರಿ ತಿಳಿಸಿದ್ದಾರೆ. ಯಾವುದೇ ನಿರ್ಬಂಧ ವಿಧಿಸಲ್ಲ. ತಮ್ಮ ಸ್ವಂತ ನಿರ್ಧಾರವನ್ನು ತೆಗೆದುಕೊಂಡು ಮಾಸ್ಕ್ ಹಾಕಿಕೊಳ್ಳಬೇಕು. ಅದು ಅವರಿಗೆ ಬಿಟ್ಟಿದ್ದು. ಇದರಿಂದಾಗಿ ನಾನು ಮಾಸ್ಕ್ ಹಾಕಲ್ಲ ಎಂದು ಹೇಳಿದರು. ಲಸಿಕೆ ವಿಚಾರವಾಗಿ ಯಾರಿಗೂ ಒತ್ತಾಯ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‍ಗೆ ತಿಳಿಸಿತ್ತು. ಇದನ್ನೂ ಓದಿ: ದೂಧ್ ಸಾಗರ್ ಬಳಿ ಹಳಿ ತಪ್ಪಿದ ಅಮರಾವತಿ ಎಕ್ಸ್‌ಪ್ರೆಸ್ ರೈಲು