ಮಂಗಳೂರು: ಆಹಾರ ಮತ್ತು ನಾಗರೀಕ ಸರಬರಾಜು ಪೂರೈಕೆ ಸಚಿವ ಯು.ಟಿ ಖಾದರ್ ಮತ್ತೆ ಕೊರಗಜ್ಜನ ದರ್ಶನ ಪಡೆದಿದ್ದಾರೆ. ಮಂಗಳೂರಿನ ಹೊರವಲಯದ ತೊಕ್ಕೊಟ್ಟಿನಲ್ಲಿರುವ ಕೊರಗಜ್ಜನ ದೈವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಅರ್ಚಕರು ಖಾದರ್ ಎದುರಲ್ಲಿ ಕೊರಗಜ್ಜನಿಗೆ ಪ್ರಾರ್ಥಿಸುತ್ತಾ, ಯಾರು ಸತ್ಯದಲ್ಲಿ ನಡೆಯುತ್ತಾರೋ ಅಂತವರನ್ನು ಕೊರಗಜ್ಜ ಕೈಬಿಡುವುದಿಲ್ಲ ಎನ್ನುವ ಅಭಯ ನೀಡಿದ್ದಾರೆ. ಈ ಮೂಲಕ ಸಚಿವ ಖಾದರ್, ಆರ್‍ಎಸ್‍ಎಸ್ ನ ಮುಖಂಡರ ಗೊಡ್ಡು ಬೆದರಿಕೆಗೆ ಬಗ್ಗುವುದಿಲ್ಲ ಎನ್ನುವ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ಖಾದರ್ ಹೋದ ದೇವಾಲಯಕ್ಕೆ ಮತ್ತೊಮ್ಮೆ ಬ್ರಹ್ಮಕಲಶ ಆಗ್ಲೇಬೇಕು- ಪ್ರಭಾಕರ ಭಟ್
Advertisement
ಈ ಹಿಂದೆ ಕೊರಗಜ್ಜನ ದರ್ಶನ ಪಡೆದು ಪ್ರಸಾದ ಸ್ವೀಕರಿದ್ದ ಖಾದರ್ ವಿರುದ್ಧ ಆರ್‍ಎಸ್‍ಎಸ್ ಮುಖಂಡರು ಟೀಕೆಗಳ ಸುರಿಮಳೆಗಯ್ದಿದ್ದರು. ಕಲ್ಲಡ್ಕ ಪ್ರಭಾಕರ ಭಟ್ ಅಂತೂ, ಯು.ಟಿ.ಖಾದರ್ ಹೋಗಿದ್ದ ದೇವಸ್ಥಾನಗಳಿಗೆ ಮತ್ತೊಮ್ಮೆ ಬ್ರಹ್ಮಕಲಶ ಮಾಡುವಂತೆ ಕರೆ ನೀಡಿದ್ದರು. ಈ ವಿಚಾರ ಸಾಕಷ್ಟು ಟೀಕೆಗೆ ಗುರಿಯಾಗುತ್ತಿದ್ದಂತೆ, ಕಾಂಗ್ರೆಸ್‍ನವರು ಕಲ್ಲಡ್ಕ ಭಟ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಇದನ್ನೂ ಓದಿ: ಕೊರಗಜ್ಜನ ಪ್ರಸಾದ ಸ್ವೀಕರಿಸಿದ ಸಚಿವ ಖಾದರ್ ವಿರುದ್ಧ ಮುಸ್ಲಿಮರಿಂದ ಟೀಕೆ