ಮಂಗಳೂರು: ಬಾವಿಯಲ್ಲಿ ಪೆಟ್ರೋಲ್ ಅಂಶ ಕಂಡುಬಂದಿದ್ದ ದೇರಳಕಟ್ಟೆಯ ಕಾನಕೆರೆ ಪ್ರದೇಶಕ್ಕೆ ವಸತಿ ಹಾಗೂ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಯು.ಟಿ.ಖಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಾಧ್ಯಮಗಳಲ್ಲಿ ಬಾವಿಯಲ್ಲಿ ಪೆಟ್ರೋಲ್ ರೀತಿಯ ಅಂಶ ಪತ್ತೆಯಾಗಿರುವ ಸುದ್ದಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತ ಜಿಲ್ಲಾ ಉಸ್ತುವಾರಿ ಸಚಿವರು, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸ್ಥಳೀಯರು ಬಾವಿಯ ನೀರನ್ನು ಮೇಲೆತ್ತಿ, ಅದಕ್ಕೆ ಬೆಂಕಿ ಹಚ್ಚಿ ತೋರಿಸಿದರು. ಬಾವಿಯ ನೀರು ಈ ಪರಿ ಹೊತ್ತಿಕೊಳ್ಳುವುದನ್ನು ಕಂಡು ಸಚಿವರೂ ಸಹ ಅಚ್ಚರಿ ಪಟ್ಟಿದ್ದಾರೆ. ಅಲ್ಲದೇ ಇದು ಕೇವಲ ಪೆಟ್ರೋಲ್ ಪಂಪ್ ಲೀಕೇಜ್ ಕಾರಣಕ್ಕೆ ಆಗುತ್ತಿರುವಂತೆ ಕಾಣುತ್ತಿಲ್ಲ. ಬೇರೆ ಏನೋ ಕಾರಣ ಇದ್ದಿರಬಹುದೆಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದರು.
ಈ ಕುರಿತು ಮಾತನಾಡಿದ ಯು.ಟಿ.ಖಾದರ್, ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಸೂಚನೆ ನೀಡಿದ್ದೇನೆ. ಈಗಾಗಲೇ ಎಂಆರ್‍ಪಿಎಲ್ ಮುಖ್ಯಸ್ಥರ ಜೊತೆ ಮಾತನಾಡಿದ್ದೇನೆ. ನೀರಿನ ಮಾದರಿಯನ್ನು ಉನ್ನತ ಮಟ್ಟದ ಪರಿಶೀಲನೆಗೆ ಕಳಿಸಿಕೊಡುತ್ತೇವೆ. ತಾತ್ಕಾಲಿಕವಾಗಿ ಸ್ಥಳೀಯ ಸಂತ್ರಸ್ತ ಮನೆಯವರಿಗೆ, ಗ್ರಾಮ ಪಂಚಾಯತಿನಿಂದ ನೀರು ಪೂರೈಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.
ಕಳೆದ ಒಂದು ವಾರದಿಂದ ದೇರಳಕಟ್ಟೆಯ ಕಾನಕೆರೆ ಎಂಬ ಪ್ರದೇಶದಲ್ಲಿ ಮೂರು ಬಾವಿಗಳಲ್ಲಿ ನೀರು ಪೆಟ್ರೋಲ್ ವಾಸನೆ ಬರುತ್ತಿದ್ದು, ಬೆಂಕಿ ತಾಗಿದರೆ ಧಗ ಧಗನೆ ಉರಿಯುತ್ತಿರುವುದು ಸ್ಥಳೀಯರಲ್ಲಿ ಅಚ್ಚರಿಗೆ ಕಾರಣವಾಗಿದೆ. ಇದನ್ನೂ ಓದಿ: ಬೆಂಕಿ ಹಚ್ಚಿದರೆ ಉರಿಯುತ್ತಿದೆ ಬಾವಿ ನೀರು!
https://youtu.be/uE3r9qZoJWk
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews