ಕಲಬುರಗಿ: ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಅಡಿಕ್ಷನ್‍ಗೆ ಗುರಿಯಾಗುತ್ತಿದ್ದಾರೆ. ಹೀಗಾಗಿ ನಾನು ಹಲವು ಬಾರಿ ಭಾಷಣದಲ್ಲಿ ಮೊಬೈಲ್ ನಮ್ಮ ಕಂಟ್ರೋಲ್‍ನಲ್ಲಿರಬೇಕು, ನಾವು ಮೊಬೈಲ್ ಕಂಟ್ರೋಲ್‍ನಲ್ಲಿರಬಾರದು ಎಂದು ಹೇಳಿದ್ದೇನೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಶಿಕ್ಷಣ ಸಚಿವರು, ಮೊಬೈಲ್‍ಗೆ ಮಕ್ಕಳು ಹೆಚ್ಚು ಒತ್ತು ನೀಡುವ ಕಾರಣ ಮಕ್ಕಳ ಶಿಕ್ಷಣದ ಮೇಲೆ ಕೆಟ್ಟ ಪರಿಣಾಮ ಬಿರುತ್ತಿದೆ. ಮನೆಯಲ್ಲಿ ಮೊಬೈಲ್ ಫ್ರೀ ಟೈಂ ಎಂದು ಪೋಷಕರು ಮಾಡಬೇಕು. ಆ ಸಮಯದಲ್ಲಿ ಮನೆಯಲ್ಲಿ ಹಾಗೂ ಮಗುವಿನ ಶಿಕ್ಷಣದ ಬೆಳವಣಿಗೆ ಬಗ್ಗೆ ಹೆಚ್ಚಿ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
Advertisement
ರಾಜ್ಯ ಸರ್ಕಾರ ಪ್ರತಿ ಶನಿವಾರದ ಬ್ಯಾಗ್ ಲೆಸ್ ಡೇ ಮಾಡಿದೆ. ಆ ದಿನ ಶಾಲೆಯಲ್ಲಿ ಮಕ್ಕಳ ಜೊತೆ ಕಥೆಗಳನ್ನು ಹೇಳುವದು ಸೇರಿದಂತೆ ಇತರೆ ಚಟುವಟಿಕೆ ಮಾಡಲು ಯೋಚಿಸಲಾಗಿದೆ. ಆದರೆ ಪ್ರತಿ ಶನಿವಾರ ಬೇಡ ತಿಂಗಳಲ್ಲಿ 2 ಶನಿವಾರ ಮಾತ್ರ ಬ್ಯಾಗ್ ಲೇಸ್ ಡೇ ಮಾಡೋಣ ಎಂದರು ಕೆಲವರು ಸಲಹೆ ನೀಡಿದ್ದಾರೆ. ಹೀಗಾಗಿ ಇದರ ಬಗ್ಗೆ ಯೋಚನೆ ನಡೆಯುತ್ತಿದ್ದು ಮುಂದಿನ ಶೈಕ್ಷಣಿಕ ವರ್ಷದ ವೇಳೆಗೆ ಅಂತಿಮ ನಿರ್ಧಾರ ಮಾಡುತ್ತೇವೆ ಎಂದರು.