– ಸಚಿವ ಸುರೇಶ್ ಕುಮಾರ್ ಉಡುಗೊರೆ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನ ಪ್ರವಾಸಕ್ಕೆ ಬೆಂಗಳೂರಿಗೆ ಆಗಮಿಸಿದ್ದಾರೆ. ಗುರುವಾರ ತುಮಕೂರಿನಲ್ಲಿ ಸಿದ್ದಗಂಗಾ ಮಠ ಭೇಟಿ ನೀಡಿ ಕೃಷಿ ಸಮಾವೇಶದಲ್ಲಿ ಭಾಗವಹಿಸಿದರು. ಮೋದಿ ಅವರಿಗೆ ಕಾರ್ಯಕ್ರಮಗಳಲ್ಲಿ ವಿವಿಧ ಬಗೆಯ ಗಿಫ್ಟ್ ಗಳನ್ನು ನೀಡಲಾಗಿತ್ತು. ಸಿದ್ದಗಂಗಾ ಮಠದಲ್ಲಿ ಶ್ರೀಗಳ ಬೆಳ್ಳಿ ವಿಗ್ರಹ, ರುದ್ರಾಕ್ಷಿ ಮಾಲೆ ಗಿಫ್ಟ್ ಕೊಟ್ಟರೆ ಕೃಷಿ ಸಮಾವೇಶದಲ್ಲಿ ಹಸಿರು ಶಾಲು ಹೊದಿಸಿ ಮೈಸೂರು ಪೇಟ ತೊಡಿಸಿ ಗೌರವಿಸಿದರು. ಆದರೆ ನಿನ್ನೆ ಪ್ರಧಾನಿ ಮೋದಿಗೆ ಅವ್ರಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ.
Advertisement
ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸಚಿವರಾದ ಮೇಲೆ ವಿಶಿಷ್ಟ ಕೆಲಸಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ನಿನ್ನೆ ಪ್ರಧಾನಿ ಮೋದಿ ಅವರನ್ನ ಸ್ವಾಗತ ಮಾಡಲು ಎಚ್‍ಎಎಲ್ ಏರ್ ಪೋರ್ಟಿಗೆ ತೆರಳಿದರು. ಈ ವೇಳೆ ಪ್ರಧಾನಿಗಳಿಗೆ ಇಸ್ರೇಲ್ ಲೇಖಕ ಯುವಲ್ ನೋವಾ ಹರಾರಿ ಬರೆದಿರುವ 21 ನೇ ಶತಮಾನದ 21 ಪಾಠಗಳು(21 Lessons for the 21st Century) ಅನ್ನುವ ಪುಸ್ತಕ ನೀಡಿ ಗೌರವಿಸಿದ್ದಾರೆ.
Advertisement
ಪುಸ್ತಕ ಪಡೆದ ಪ್ರಧಾನಿಗಳು ಪುಸ್ತಕದ ಶೀರ್ಷಿಕೆಯನ್ನ ಕೆಲ ಕ್ಷಣ ನೋಡಿ ಸಂತೋಷ ಪಟ್ಟಿದ್ದಾರೆ. ನರೇಂದ್ರ ಮೋದಿ ಅವರು ಹಾರ-ತೂರಾಯಿ ಸಂಸ್ಕೃತಿಗೆ ವಿರೋಧಿಯಾಗಿದ್ದಾರೆ. ಎಲ್ಲೇ ಪ್ರವಾಸ ಮಾಡಿದರೂ ಇಂತಹ ಆಡಂಬರದ ಸ್ವಾಗತಕ್ಕೆ ವಿರೋಧ ಮಾಡುತ್ತಾರೆ. ಇದರ ಸೂಕ್ಷ್ಮತೆ ಅರಿತಿರುವ ಸಚಿವರು ಹೊಸ ವರ್ಷದ ಕೊಡುಗೆಯಾಗಿ ಪ್ರಧಾನಿಗಳಿಗೆ ಪುಸ್ತಕ ನೀಡುವ ಮೂಲಕ ಗಮನ ಸೆಳೆದಿದ್ದಾರೆ.