ಗಣೇಶ ಹಬ್ಬ ವಿಜೃಂಭಣೆಯಿಂದ ಆಚರಿಸುವ ಆಶಯ ಇದೆ: ಸಚಿವ ಸುನಿಲ್ ಕುಮಾರ್

Public TV
2 Min Read
sunil kumar

ಬೆಂಗಳೂರು: ಸರ್ಕಾರ ನಿಷೇಧ ಹೇರಿದ್ದರೂ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ಆಶಯ ಇದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನಿಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸರ್ಕಾರ ಅನುಮತಿ ನೀಡುತ್ತಾ? ರಿಲ್ಯಾಕ್ಷೇಶನ್ ಕೊಡುತ್ತಾ ಎಂಬ ಪ್ರಶ್ನೆ ಇದೀಗ ಎದ್ದಿದೆ.

ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ ಈಗಾಗಲೇ ನಿಷೇಧ ಹೇರಿದೆ. ಗಣೇಶೋತ್ಸವ ಹಬ್ಬ ಆಚರಣೆಗೆ ಸರ್ಕಾರ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದೆ. ಆದರೆ ಇದೀಗ ಮಾರ್ಗಸೂಚಿ ಪರಾಮರ್ಶೆ ಮಾಡಿ ಹಬ್ಬಕ್ಕೆ ರಿಲ್ಯಾಕ್ಸೇಶನ್ ಕೊಡುವ ಕುರಿತು ಚಿಂತನೆ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೆ ಸರ್ಕಾರ ನಿಷೇಧ ಹೇರಿದ್ದರೂ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ಆಶಯ ಇದೆ ಎಂದು ಸಚಿವ ಸುನೀಲ್ ಕುಮಾರ್ ಸೇರಿ ಹಲವು ಸಚಿವರು ಹೇಳಿದ್ದಾರೆ. ಅಲ್ಲದೆ ಶಾಸಕ ಬಸನಗೌಡ ಪಾಟೀಲ್ ಸಹ ವಿಜೃಂಭಣೆಯಿಂದ ಗಣೇಶೋತ್ಸವ ಆಚರಣೆ ಕುರಿತು ಹೇಳಿಕೆ ನೀಡಿದ್ದು, ನಮ್ಮನ್ನು ನಮಗೆ ಗುಂಡು ಹೊಡೆದರೂ ನಾವು ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗುಂಡು ಹೊಡೆಯೋದಾದ್ರೆ ಹೊಡಿರಿ, ವಿಜೃಂಭಣೆಯಿಂದ ಗಣೇಶೋತ್ಸವ ಆಚರಣೆ: ಸರ್ಕಾರಕ್ಕೆ ಸೆಡ್ಡು ಹೊಡೆದ ಯತ್ನಾಳ್

ಮತ್ತೊಂದೆಡೆ ಧಾರ್ಮಿಕ ಆಚರಣೆ, ಆರೋಗ್ಯ ಎರಡು ಮುಖ್ಯ. ಧಾರ್ಮಿಕ ಆಚರಣೆ, ವೈಭವೀಕರಣಕ್ಕೆ ಕುಂದು ಬರದಂತೆ ನಿಯಮ ಜಾರಿ ಮಾಡುತ್ತೇವೆ ಎಂದು ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ. ಹೀಗಾಗಿ ಗಣೇಶೋತ್ಸವ ಆಚರಣೆಗೆ ಹೊರಡಿಸಿರುವ ಮಾರ್ಗಸೂಚಿ ಬದಲಾವಣೆ ಮಾಡಿ ಸರ್ಕಾರ ಗಣೇಶೋತ್ಸವಕ್ಕೆ ಅವಕಾಶ ಕೊಡುತ್ತಾ ಎಂಬ ಪ್ರಶ್ನೆ ಎದ್ದಿದೆ.

ಮೂರನೇ ಅಲೆ ಸೆಪ್ಟೆಂಬರ್ ಮೊದಲ ವಾರದಲ್ಲೇ ಕಾಣಿಸಿಕೊಳ್ಳಬಹುದು ಎಂದು ತಜ್ಞರು ಹೇಳಿದ್ದಾರೆ. ಆಗಸ್ಟ್ ಕೊನೆಯವಾರದಲ್ಲಿ ಕೇಸ್ ಏರಿಕೆಯಾಗಿ, ಸೆಪ್ಟೆಂಬರ್ ಮೊದಲ ವಾರದಲ್ಲಿ ಮೂರನೇ ಅಲೆ ಆರಂಭವಾಗಬಹುದು ಎಂದಿದ್ದಾರೆ.

KPL GANESH GALATE AV 5

ಗಣೇಶೋತ್ಸವಕ್ಕೆ ಸರ್ಕಾರದ ಮಾರ್ಗಸೂಚಿ
– ಸಾರ್ವಜನಿಕ ಗಣೇಶೋತ್ಸವಕ್ಕೆ ನಿಷೇಧ.
– ಗಣೇಶ ಹಬ್ಬವನ್ನು ಸರಳವಾಗಿ ತಮ್ಮ ಮನೆಗಳಲ್ಲಿ ಆಚರಿಸತಕ್ಕದ್ದು, ಸಾರ್ವಜನಿಕ ಸ್ಥಳಗಳಲ್ಲಿ ಚಪ್ಪರ, ಪೆಂಡಾಲ್, ಶಾಮಿಯಾನ ಹಾಕಿ, ವೇದಿಕೆಗಳನ್ನು ನಿರ್ಮಿಸಿ ಗಣೇಶ ಪ್ರತಿಷ್ಢಾಪನೆ ಮಾಡುವಂತಿಲ್ಲ.
– ಗಣೇಶ ಮೂರ್ತಿಗಳನ್ನು ತರುವಾಗ ಮತ್ತು ವಿಸರ್ಜಿಸುವಾಗ ಮೆರವಣಿಗೆ ಮತ್ತು ಮನೋರಂಜನಾ ಕಾರ್ಯಕ್ರಮ ಮಾಡುವಂತಿಲ್ಲ.
– ಪಾರಂಪರಿಕ ಗೌರಿ ಗಣೇಶ ಮೂರ್ತಿಯನ್ನು ಪೂಜಿಸುವವರು ಅವರ ಮನೆಗಳಲ್ಲೇ ವಿಸರ್ಜಿಸುವುದು.
– ಗಣೇಶ ಮೂರ್ತಿಯನ್ನು ಮಹಾನಗರ ಪಾಲಿಕೆ, ಜಿಲ್ಲಾಡಳಿತಣ ಸ್ಥಳೀಯ ಆಡಳಿತ ನಿರ್ಮಿಸಿರುವ ಹೊಂಡ, ಕಲ್ಯಾಣಿ, ಮೊಬೈಲ್ ಟ್ಯಾಂಕ್ ಗಳಲ್ಲಿ, ಕೃತಕ ವಿಸರ್ಜನಾ ಟ್ಯಾಂಕ್ ಗಳಲ್ಲಿ ವಿಸರ್ಜಿಸುವುದು.
– ಗಣೇಶ ಹಬ್ಬ ಆಚರಿಸುವ ದೇವಸ್ಥಾನಗಳಲ್ಲಿ ದಿನನಿತ್ಯ ಸ್ಯಾನಿಟೈಸ್ ಮಾಡಬೇಕು. ಭಕ್ತಾದಿಗಳಿಗೆ ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ಯಾನಿಂಗ್ ಮಾಡಬೇಕು.
– ದರ್ಶನಕ್ಕಾಗಿ ಬರುವ ಭಕ್ತರಿಗೆ ಮಾಸ್ಕ್ ಕಡ್ಡಾಯ, 6 ಅಡಿ ಅಂತರ ಕಾಯ್ದುಕೊಳ್ಳಬೇಕು, ಸರ್ಕಲ್ ನಿರ್ಮಾಣ ಮಾಡಬೇಕು.
– ಗಣೇಶೋತ್ಸವ ಆಚರಣೆ ಕಾಲಕ್ಕೆ ಪೊಲೀಸ್, ಜಿಲ್ಲಾಡಳಿತ, ಸ್ಥಳೀಯ ಆಡಳಿತ ಹೊರಡಿಸುವ ನಿಯಮಗಳನ್ನ ಪಾಲಿಸುವುದು.

GANESHSTHVA

Share This Article
Leave a Comment

Leave a Reply

Your email address will not be published. Required fields are marked *