ಉಡುಪಿ: ರಾಜಕಾರಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಜನಾಭಿಪ್ರಾಯ ಕಳೆದುಕೊಂಡಿದ್ದಾರೆ ಎಂದು ರಾಷ್ಟ್ರ ರಾಜಕಾರಣ ಬಗ್ಗೆ ಆಸಕ್ತಿ ತೋರದ ಸಿದ್ದುಗೆ ಇಂಧನ ಸಚಿವ ಸುನಿಲ್ ಕುಮಾರ್ ತಿರುಗೇಟು ನೀಡಿದ್ದಾರೆ.
ರಾಷ್ಟ್ರ ರಾಜಕಾರಣಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಸ್ವಾಗತ ಮಾಡಿದ್ದಾರೆ. ದೆಹಲಿಗೆ ಕರೆಸಿಕೊಂಡು ಈ ಬಗ್ಗೆ ಅವರು ಚರ್ಚೆ ಮಾಡಿದ್ದಾರೆ. ಈ ಕುರಿತಂತೆ ಉಡುಪಿಯಲ್ಲಿ ಮಾತನಾಡಿದ ಸುನೀಲ್ ಕುಮಾರ್, ಇದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರವಾಗಿದೆ. ಸಿದ್ದರಾಮಯ್ಯ ಜನಾಭಿಪ್ರಾಯ ಕಳೆದುಕೊಂಡಿದ್ದಾರೆ. ಎಲ್ಲ ಉಪಚುನಾವಣೆ ಸೋತಿದ್ದಾರೆ. ಮೈಸೂರಿನಲ್ಲಿ ಸಿದ್ದರಾಮಯ್ಯಗೆ ಅಸ್ತಿತ್ವ ಇಲ್ಲ. ಪರಿಸ್ಥಿತಿ ಹೀಗಿರುವಾಗ ಸಿದ್ಧರಾಮಯ್ಯ ಯಾವ ರಾಜಕಾರಣ ಮಾಡಬೇಕೆಂದು ಅವರು ತೀರ್ಮಾನಿಸಬೇಕು ಎಂದು ಟಾಂಗ್ ಕೊಟ್ಟರು.ಇದನ್ನೂ ಓದಿ: ಪಿಡಿಒನಿಂದ ರಾಷ್ಟ್ರಪತಿವರೆಗೆ RSS ಕಾರ್ಯಕರ್ತರೇ ಇರೋದು- ಹೆಚ್‍ಡಿಕೆಗೆ ಸುನೀಲ್ ಕುಮಾರ್ ತಿರುಗೇಟು
ಹಾನಗಲ್ ಮತ್ತು ಸಿಂದಗಿಯ ಉಪಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ಅಥವಾ ಯಾರೇ ನೇತೃತ್ವ ತೆಗೆದುಕೊಂಡರು ಅಡ್ಡಿ ಇಲ್ಲ. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಎರಡು ಉಪ ಚುನಾವಣೆ ಗೆಲ್ಲುತ್ತೇವೆ ಎಂದಿದ್ದಾರೆ. ಇದನ್ನೂ ಓದಿ:RSS ಜಾತಿ, ಧರ್ಮ ಮೀರಿದ ಮಾತೃಹೃದಯಿ ಸಂಘಟನೆ: ಜಗ್ಗೇಶ್