ಬೆಂಗಳೂರು: ನಗರದಲ್ಲಿರುವ ಟ್ರಾನ್ಸ್ ಫಾರ್ಮರ್ ಗಳ ಸಂಪೂರ್ಣ ಆಡಿಟ್ ಮಾಡಲು ಆದೇಶ ಮಾಡಿದ್ದೇನೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಕಲಾಪದ ಶೂನ್ಯವೇಳೆ ಬೆಂಗಳೂರಿನ ಮಂಗನಹಳ್ಳಿಯಲ್ಲಿ ಟ್ರಾನ್ಸ್ ಫಾರ್ಮರ್ ಬ್ಲಾಸ್ಟ್ ಆಗಿ ತಂದೆ-ಮಗಳು ಮೃತರಾದ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಟ್ರಾನ್ಸ್ ಫಾರ್ಮರ್ ಗಳ ಆಡಿಟ್ ಗೆ ಆದೇಶ ಮಾಡಲಾಗಿದೆ ಅಂತ ತಿಳಿಸಿದರು.
ಬೆಂಗಳೂರಿನ ಮಂಗನಹಳ್ಳಿಯಲ್ಲಿ ಟ್ರಾನ್ಸ್ ಫಾರ್ಮರ್ ಬ್ಲಾಸ್ಟ್ ಆದ ಪ್ರಕರಣವನ್ನ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ನ ಮಂಜುನಾಥ್ ಬಂಡಾರಿ ಪ್ರಸ್ತಾಪ ಮಾಡಿದರು. ಮಂಗನಹಳ್ಳಿ ಟ್ರಾನ್ಸ್ ಫಾರ್ಮರ್ ಬ್ಲಾಸ್ಟ್ ಆಗಿದೆ ತಂದೆ-ಮಗಳ ಮೃತರಾಗಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಘಟನೆ ಆಗಿದೆ. ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಸೂಕ್ತ ಪರಿಹಾರ ನೀಡಬೇಕು ಅಂತ ಮನವಿ ಮಾಡಿದರು.ಇದನ್ನೂ ಓದಿ: ಟ್ರಾನ್ಸ್ ಫಾರ್ಮರ್ ಸ್ಫೋಟ ಪ್ರಕರಣ – ಚಿಕಿತ್ಸೆ ಫಲಕಾರಿಯಾಗದೇ ಯುವತಿಯೂ ಸಾವು
ಇದಕ್ಕೆ ಉತ್ತರ ನೀಡಿದ ಸಚಿವ ಸುನೀಲ್ ಕುಮಾರ್, ನಿನ್ನೆ ಟ್ರಾನ್ಸ್‍ಫಾರ್ಮರ್ ಸ್ಫೋಟಗೊಂಡು ತಂದೆ-ಮಗಳು ಮೃತರಾಗಿದ್ದಾರೆ. 250KW ಟ್ರಾನ್ಸ್ ಫಾರ್ಮರ್ ಇದಾಗಿದೆ. ಸ್ಥಳೀಯರು 12.50ಕ್ಕೆ ಕರೆ ಮಾಡಿ ಅಧಿಕಾರಿಗಳಿಗೆ ಟ್ರಾನ್ಸ್ ಫಾರ್ಮರ್ ದೋಷದ ಬಗ್ಗೆ ಮಾಹಿತಿ ಕೊಟ್ಟಿದ್ದರು. ಆದರೆ ಸೂಕ್ತ ಸಮಯಕ್ಕೆ ಅಧಿಕಾರಿಗಳು ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ ಮಧ್ಯಾಹ್ನ 3.10 ಕ್ಕೆ ಟ್ರಾನ್ಸ್ ಫಾರ್ಮರ್ ಬ್ಲಾಸ್ಟ್ ಆಗಿದೆ. ಅಧಿಕಾರಿಗಳ ಬೇಜವಾಬ್ದಾರಿ ಕೂಡಾ ಇದರಲ್ಲಿ ಇದೆ. ಹೀಗಾಗಿ ಅಧಿಕಾರಿಗಳ ವಿರುದ್ಧ ಎಂಡಿ ಜೊತೆ ಮಾತಾಡಿ ಕ್ರಮ ತಗೋತೀವಿ ಅಂತ ಭರವಸೆ ನೀಡಿದರು. ಇದನ್ನೂ ಓದಿ: ಗಂಡನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಊರೆಲ್ಲಾ ಅರಚಾಡಿ ಹೈ-ಡ್ರಾಮಾ ಮಾಡಿದ ಪತ್ನಿ
ನಮ್ಮ ಇಲಾಖೆಯಲ್ಲಿ ಹೀಗೆ ಮೃತರಾದರೆ 5 ಲಕ್ಷ ಕೊಡಲಾಗುತ್ತದೆ. ವಿಶೇಷ ಪ್ರಕರಣ ಅಂತ ಪರಿಗಣನೆ ಮಾಡಿ ಮೃತರಿಗೆ ತಲಾ 10 ಲಕ್ಷ ಪರಿಹಾರ ಇಲಾಖೆಯಿಂದ ನೀಡಲಾಗುತ್ತದೆ ಅಂತ ತಿಳಿಸಿದರು. ಇನ್ನು ಬೆಂಗಳೂರಿನಲ್ಲಿ ಅಪಾಯದ ಅಂಚಿನಲ್ಲಿರುವ ಟ್ರಾನ್ಸ್ ಫಾರ್ಮರ್ ಗಳ ಆಡಿಟ್ ಮಾಡಿಸಲು ಸೂಚನೆ ನೀಡಲಾಗಿದೆ.15 ವರ್ಷ ಮೇಲ್ಪಟ್ಟ ಟ್ರಾನ್ಸ್ ಫಾರ್ಮರ್ ಗಳನ್ನ ಬದಲಾವಣೆ ಮಾಡುವ ಬಗ್ಗೆ ಕ್ರಮವಹಿಸುತ್ತೇವೆ. ಆಡಿಟ್ ರಿಪೋರ್ಟ್ ಬಂದ ಕೂಡಲೇ ಟ್ರಾನ್ಸ್ ಫಾರ್ಮರ್ ಗಳ ಬಗ್ಗೆ ಕ್ರಮವಹಿಸುತ್ತೇವೆ ಅಂತ ತಿಳಿಸಿದರು.