ಮಂಗಳೂರು: ಕುಕ್ಕರ್ ಬಾಂಬ್ ಬ್ಲಾಸ್ಟ್ (Cooker Bomb Blast) ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಟೋ ಚಾಲಕನ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಲಾಗುವುದು ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ (Sunil Kumar) ಹೇಳಿದರು.
Advertisement
ನಾಗುರಿ ಬಳಿಯ ಬಾಂಬ್ ಸ್ಫೋಟದ ಜಾಗಕ್ಕೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಬ್ ಸ್ಫೋಟದ ಘಟನೆಯನ್ನ ಉಗ್ರವಾಗಿ ಖಂಡಿಸುತ್ತೇವೆ. ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರ ಮಾಡಲಾಗಿದೆ. ಇದರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯಲಿದೆ. ಪಿಎಫ್‍ಐ ನಿಷೇಧದ ಬಳಿಕ ಇಂಥ ಘಟನೆಗೆ ಸರ್ಕಾರ ಕಡಿವಾಣ ಹಾಕಿದೆ ಎಂದರು. ಇದನ್ನೂ ಓದಿ: ಝಾಕೀರ್ ನಾಯ್ಕ್ The Real Inspiration – ಐಸಿಸ್ ಉಗ್ರರಂತೆ ಪೋಸ್ ನೀಡಿ ಪ್ರತೀಕಾರದ ಪ್ರತಿಜ್ಞೆ
Advertisement
ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯ ನಡೆದ ಸ್ಥಳವನ್ನು ಅಧಿಕಾರಿಗಳೊಂದಿಗೆ ಪರಿಶೀಲಿಸಲಾಯಿತು. ಹಾಗೂ ಸ್ಫೋಟದಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಆಟೋ ಚಾಲಕರಾದ ಶ್ರೀ ಪುರುಷೋತ್ತಮ ಪೂಜಾರಿ ಅವರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಲಾಯಿತು… pic.twitter.com/bo0SEDCY4m
— Sunil Kumar Karkala (@karkalasunil) November 25, 2022
Advertisement
ಸಂಚುಗಳನ್ನ ವಿಫಲಗೊಳಿಸೋ ಕೆಲಸ ಸರ್ಕಾರ ಮಾಡುತ್ತಿದೆ. ಪಿಎಫ್ ಐ (Popular Front Of India) ನಿಷೇಧ ಇದರ ಒಂದು ಭಾಗ, ಸರ್ಕಾರ ಮೃಧು ಧೋರಣೆ ತಳೆದಿಲ್ಲ. ಈ ಘಟನೆಯನ್ನ ಇಡೀ ಸಮಾಜ ನಿಂತು ಎದುರಿಸಬೇಕಿದೆ. ಕದ್ರಿ ದೇವಸ್ಥಾನ (Kadri Temple), ಕೆಲವು ಕಚೇರಿ ಹಾಗೂ ಸಾರ್ವಜನಿಕ ಜಾಗಗಳು ಅವರ ಗುರಿಯಾಗಿತ್ತು. ಹಿಂದೂ ಸಮಾಜ ಟಾರ್ಗೆಟ್ ಮಾಡುವ ಅವರ ಕೆಲಸ ವಿಫಲವಾಗಿದೆ. ಸ್ಥಳೀಯ ಮತ್ತು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕೈವಾಡ ಇದೆ. ಇಂಥಹ ಮಾನಸಿಕತೆ ದೂರ ಆಗಬೇಕಿದೆ, ನಾವು ಇಂಥದ್ದನ್ನ ಆಗಲು ಬಿಡಲ್ಲ ಎಂದು ಹೇಳಿದರು.
Advertisement
ತನಿಖೆ ದೃಷ್ಟಿಯಿಂದ ಗೃಹ ಸಚಿವರು ಮೊದಲು ಭೇಟಿ ನೀಡಿದ್ದಾರೆ. ಎನ್.ಐ.ಎ ಘಟಕ ಇಲ್ಲಿ ಇವತ್ತಲ್ಲ ನಾಳೆ ಇಲ್ಲಿ ಆಗುತ್ತೆ. ಕೇಂದ್ರ ಸರ್ಕಾರ ಅದನ್ನ ಪಾಸಿಟಿವ್ ಆಗಿ ಪರಿಶೀಲಿಸ್ತಾ ಇದೆ. ದೇಶದ ಯಾವುದೇ ಭಾಗದಲ್ಲಿ ಇಂಥಹ ವಾತಾವರಣ ಸೃಷ್ಟಿಯಾಗಬಾರದು. ಈ ಘಟನೆಯನ್ನ ಎಲ್ಲರೂ ಖಂಡಿಸಿ ಸಹಕಾರ ಕೊಡೋರ ಬಗ್ಗೆ ಎಚ್ಚರ ವಹಿಸಬೇಕು. ನೆಟ್ಟಾರು ಘಟನೆ, ಎಸ್ ಡಿಪಿಐ ಉಪಟಳ ಎಲ್ಲವನ್ನೂ ಜನ ವಿರೋಧಿಸಿದ್ದಾರೆ. ಅಟೋ ಚಾಲಕನ ಕುಟುಂಬಕ್ಕೆ ಸರ್ಕಾರದ ಕಡೆಯಿಂದ ಸೂಕ್ತ ಪರಿಹಾರ ಕೊಡಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಶಾರೀಕ್‍ಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ- 8 ಮಂದಿ ವೈದ್ಯರಿಂದ ನಿಗಾ
ಸದ್ಯ ಸ್ಫೋಟವಾದ ಆಟೋ ರಿಕ್ಷಾವನ್ನು ಪೊಲೀಸರು ತೆಗೆದುಕೊಂಡು ಹೋಗಿದ್ದಾರೆ. ಸ್ಥಳಕ್ಕೆ ಆಗಮಿಸಿ ಕಂಕನಾಡಿ ಪೊಲೀಸರಿಂದ ಮಾಹಿತಿ ಪಡೆದ ಸುನೀಲ್ ಕುಮಾರ್‍ಗೆ ದ.ಕ ಜಿಲ್ಲಾಧಿಕಾರಿ ರವಿಕುಮಾರ್, ಮೇಯರ್ ಜಯಾನಂದ ಅಂಚನ್ ಸಾಥ್ ನೀಡಿದರು.