ಮಡಿಕೇರಿ: ಮೈಸೂರಿನಲ್ಲಿ ವಾರಾಂತ್ಯದ ಲಾಕ್‍ಡೌನ್ ಗೆ ಈಗಾಗಲೇ ಅನೇಕ ಸಂಘ-ಸಂಸ್ಥೆಗಳು, ವರ್ತಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವೀಕೆಂಡ್ ಲಾಕ್‍ಡೌನ್ ಬೇಡ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದು ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಮಡಿಕೇರಿಯಲ್ಲಿ ಮಾತಾನಾಡಿದ ಅವರು, ಮೈಸೂರಿನಲ್ಲಿ ವೀಕೆಂಡ್ ಕಫ್ರ್ಯೂಗೆ ವರ್ತಕರ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಮಾಹಿತಿ ಪಡೆದಿದ್ದೇನೆ. ಅದನ್ನು ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೇನೆ. ಮೈಸೂರಿನಲ್ಲಿ ಈಗಾಗಲೇ ಪಾಸಿಟಿವಿಟಿ ರೇಟ್ ಶೇ.1ಕ್ಕಿಂತ ಒಳಗಿದೆ. ಹೀಗಾಗಿ ವೀಕೆಂಡ್ ಕಫ್ರ್ಯೂ ಬೇಡವೆಂದು ಹೇಳಿದ್ದೇನೆ. ಒಂದು ವಾರ ಪಾಸಿಟಿವಿಟಿ ರೇಟ್ ಶೇ.1ರ ಒಳಗಿದ್ದರೆ ವಾರಾಂತ್ಯದ ಲಾಕ್‍ಡೌನ್ ತೆರವು ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ಸೋಮಶೇಖರ್ ಹೇಳಿದರು. ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ ಜನಸ್ತೋಮ – ಇಂದು ಸೇರಿದಂತೆ 3 ದಿನ ಭಕ್ತರ ಪ್ರವೇಶಕ್ಕೆ ನಿರ್ಬಂಧ
ಸಚಿವ ಅನಂದ್ ಸಿಂಗ್ ಅಸಮಾಧಾನದ ಕುರಿತು ಮಾತನಾಡಿದ ಅವರು, ಆನಂದ್ ಸಿಂಗ್ ಅವರಿಗೆ ಯಾವುದೇ ಅಸಮಾಧಾನ ಮುನಿಸು ಇಲ್ಲ, ಸಿಎಂ ಮಾತನಾಡಿ ಎಲ್ಲವನ್ನೂ ಸರಿಮಾಡಿದ್ದಾರೆ. ಯಾವುದೇ ಸಮಸ್ಯೆ ಇಲ್ಲ, ಸಚಿವ ಸಂಪುಟ ಸಭೆಗೆ ಗೈರಾಗುವ ಬಗ್ಗೆ ಅನಂದ್ ಸಿಂಗ್ ಸಿಎಂ ಅವರ ಪರ್ಮಿಷನ್ ತೆಗೆದುಕೊಂಡಿದ್ದರು. ಆನಂದ ಸಿಂಗ್ ಗೆ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು.