ಧ್ರುವನಾರಾಯಣ್‍ಗೆ ಎಬಿಸಿಡಿ ಗೊತ್ತಿಲ್ಲ – ಕೆಜಿಎಫ್ ಬಾಬು ಮೇಲಿನ 20 FIR ಪ್ರತಿ ನನ್ನ ಜೊತೆ ಇದೆ: ಎಸ್‍ಟಿಎಸ್

Public TV
1 Min Read
ST SOMESHKSR AND KGF BABU

ಚಾಮರಾಜನಗರ: ಕೈ ಅಭ್ಯರ್ಥಿ ಕೆಜಿಎಫ್ ಬಾಬು ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್‍ಗೆ ಎಬಿಸಿಡಿ ಗೊತ್ತಿಲ್ಲ, ನನಗೆ ಗೊತ್ತು ಆತ ಯಾರು, ಆತನ ಹಿನ್ನೆಲೆ ಏನು ಆತನ ಮೇಲಿರುವ 20 ಎಫ್‍ಐಆರ್ ಪ್ರತಿ ನನ್ನ ಮೊಬೈಲ್‍ನಲ್ಲಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಕಿಡಿಕಾರಿದ್ದಾರೆ.

ST SOMEHKAR
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಜಿಎಫ್ ಬಾಬು ಉತ್ತಮ ಅಭ್ಯರ್ಥಿ ಎಂಬಂತೆ ಧ್ರುವನಾರಾಯಣ್ ಮಾತನಾಡಿದ್ದಾರೆ. ಆದರೆ, ಬಾಬು ವಿರುದ್ಧ 60ಕ್ಕೂ ಹೆಚ್ಚು FIR ದಾಖಲಾಗಿದ್ದು, 20 FIR ನನ್ನ ಮೊಬೈಲ್‍ನಲ್ಲೇ ಇದೆ, ಆತ ಏನು ಎಂದು ನನಗೆ ಗೊತ್ತು, ಬೆಂಗಳೂರು ಅಭ್ಯರ್ಥಿಗಳ ಬಗ್ಗೆ, ಕೆಜಿಎಫ್ ಬಾಬು ಬಗ್ಗೆ ಧ್ರುವನಾರಾಯಣ್‍ಗೆ ಎಬಿಸಿಡಿಯೂ ಗೊತ್ತಿಲ್ಲ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಮಗಳು, ಇಬ್ಬರು ಪತ್ನಿಯರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟ ಕೆಜಿಎಫ್ ಬಾಬು

KGF Babu Yusuf Sharif

ಜೆಡಿಎಸ್ ಮತ್ತು ಬಿಜೆಪಿ ಹೊಂದಾಣಿಕೆ ಕುರಿತು ಮಾತನಾಡಿ, ಮೈಸೂರಿನಲ್ಲಿ ಜೆಡಿಎಸ್ ಜೊತೆ ಯಾವುದೇ ಹೊಂದಾಣಿಕೆ ಇಲ್ಲ. ಬೇರೆ ಜಿಲ್ಲೆಗಳ ಬಗ್ಗೆ ನನಗೆ ಮಾಹಿತಿ ಇಲ್ಲ. ಬೆಳಗಾವಿ ಚುನಾವಣೆ ಬಗ್ಗೆಯೂ ಗೊತ್ತಿಲ್ಲ ಎಂದು ರಮೇಶ್ ಜಾರಕಿಹೊಳಿ ಕುರಿತ ಪ್ರಶ್ನೆಗೆ ಉತ್ತರಿಸದೇ ಜಾರಿಕೊಂಡರು. ಇದನ್ನೂ ಓದಿ: ಮಗಳ ಮೇಲೆ ಅತ್ಯಾಚಾರ ಮಾಡಿದವನಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ: ಸೋಮಶೇಖರ್

ಮಂಜೇಗೌಡ ತಮಗೆ ಬಹಿರಂಗ ಪತ್ರ ಬರೆದಿರುವ ಮಾಹಿತಿ ಇದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪತ್ರವನ್ನು ನಾನು ನೋಡಿಲ್ಲ, ಪತ್ರ ಓದಿದ ಬಳಿಕ ಅದಕ್ಕೆ ಸಮಂಜಸವಾದ ಉತ್ತರವನ್ನು ಕೊಡುತ್ತೇನೆ. ಈ ಬಾರಿ ವಿಧಾನಪರಿಷತ್ ಚುನಾವಣೆಯಲ್ಲಿ ರಘು ಕೌಟಿಲ್ಯ ಮೊದಲ ಪ್ರಾಶಸ್ತ್ಯ ಮತದಿಂದಲೇ ಗೆಲ್ಲುವ ಭರವಸೆ ಮೂಡಿದ್ದು ಚಾಮರಾಜನಗರ-ಮೈಸೂರಿನ ಗ್ರಾಮಾಂತರ ಭಾಗದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದ್ದು ಬಿಜೆಪಿ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *