ಬಳ್ಳಾರಿ: ಸಿದ್ದರಾಮಯ್ಯ (Siddaramaiah) ಒಬ್ಬ ರಾಕ್ಷಸ ಅದಕ್ಕಾಗಿ ಚಾಮುಂಡೇಶ್ವರಿ ಕ್ಷೇತ್ರದ ಜನ ಮುಖಕ್ಕೆ ಮಸಿ ಬಳಿದು ಸೋಲಿಸಿದ್ದಾರೆ ಎಂದು ಸಚಿವ ಶ್ರೀರಾಮುಲು (SriRamulu) ತಿರುಗೇಟು ನೀಡಿದ್ದಾರೆ.
`ಶ್ರೀರಾಮುಲು ಪೆದ್ದ, ಪೆದ್ದನ ಜೊತೆ ನಾನೇಕೆ ಚರ್ಚೆ ಮಾಡಲಿ’ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ಸಿದ್ದರಾಮಯ್ಯ ವಕೀಲಿ ಹೇಗೆ ಮಾಡಿದ್ದಾನೆ ಎಂಬುದನ್ನು ನಾನು ನೋಡಿದ್ದೇನೆ. ಸಂಡೇ ಮಾತ್ರ ವಕೀಲ ಕೆಲಸ ಮಾಡಿದ್ದಾನೆ. ಸಿದ್ದರಾಮಯ್ಯ ಒಬ್ಬ ರಾಕ್ಷಸ ಅದಕ್ಕಾಗಿಯೇ ಚಾಮುಂಡೇಶ್ವರಿ ಕ್ಷೇತ್ರದ ಜನ ಮುಖಕ್ಕೆ ಮಸಿ ಬಳಿದು ಸೋಲಿಸಿದ್ದಾರೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
Advertisement
Advertisement
ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು (Congress Party) ಎರಡು ಹೋಳು ಮಾಡಿದ್ದಾರೆ. ಹೆಚ್.ಡಿ ದೇವೇಗೌಡರ (HD Devegowda) ಬೆನ್ನಿಗೆ ಚೂರಿ ಹಾಕಿದ್ದಾರೆ. ಆದ್ರೆ ನಾನು ರಾಹುಲ್ ಗಾಂಧಿಯ (Rahul Gandhi) ಹಾಗೆ ಪೆದ್ದ ಅಲ್ಲಾ ಎಂದಿದ್ದಾರೆ. ಇದನ್ನೂ ಓದಿ: ಸೇಲ್ಸ್ ಟ್ಯಾಕ್ಸ್ ಏಜೆಂಟ್ ಕಿಡ್ನ್ಯಾಪ್ ಮಾಡಿ 1.5 ಲಕ್ಷ ಸುಲಿಗೆ – ದೆಹಲಿಯ ಇಬ್ಬರು ಪೊಲೀಸರು ಅರೆಸ್ಟ್
Advertisement
Advertisement
ಬೆಂಕಿಹಚ್ಚೋದ್ರಲ್ಲಿ ನಿಪುಣ:
ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (Dk Shivakumar) ಅವರನ್ನ ಸಿದ್ದರಾಮಯ್ಯ ಅವರು ಬ್ಲಾಕ್‌ಮೇಲ್ ಮಾಡಿದ್ದಾರೆ. ಈ ಬಗ್ಗೆ ನಮ್ಮ ಬಳಿ ದಾಖಲೆಯಿದೆ. ಸಮಯ ಸಂದರ್ಭದ ಬಂದಾಗ ನಾ ದಾಖಲೆ ಬಿಡುಗಡೆ ಮಾಡುತ್ತೇನೆ. ಸಿದ್ದರಾಮಯ್ಯಾ ಒಬ್ಬ ವಕೀಲ, ಹೀಗಾಗಿ ಬೆಂಕಿ ಹಚ್ಚುವುದರಲ್ಲಿ ನಿಪುಣ. ಕೊಡಗಿನಲ್ಲಿ ಬೆಂಕಿ ಹಚ್ಚಿದ್ದು ಅವನೇ-ಅವನೇ, ಮೊಟ್ಟೆ ಹೊಡಿಸಿಕೊಂಡು ಡ್ರಾಮಾ ಮಾಡಿದ, ಸಿದ್ದರಾಮಯ್ಯಾ ಸಂಡೆ – ಮಂಡೆ ವಕೀಲ, ಹೀಗಾಗಿ ಇದೆಲ್ಲಾ ಅವರಿಗೆ ಕರಗತವಾಗಿದೆ ಎಂದು ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ಪಾದಯಾತ್ರೆ ಸರ್ಕಸ್‌ನಂತಿತ್ತು:
ರಾಹುಲ್‌ಗಾಂಧಿ (Rahul Gandhi) ಅವರು ರಾಜ್ಯದಲ್ಲಿ 16 ದಿನ ಪಾದಯಾತ್ರೆ (Bharath Jodo Yatra) ಮಾಡಿದ್ದಾರೆ. ನಾನು ಸಮಾವೇಶ ಸೂಕ್ಷ್ಮವಾಗಿ ಗಮನಿಸಿದ್ದೇನೆ. ಕಾಂಗ್ರೆಸ್ ಸಮಾವೇಶ ಒಂದು ಸರ್ಕಸ್‌ನಂತೆ ಇತ್ತು. ನಾನು ಸರ್ಕಸ್ ನೋಡಿದ ಹಾಗೆ ನೋಡಿದೆ. ಸಿದ್ದರಾಮಯ್ಯ ಅವರು ಕ್ಯಾಪ್ಟನ್ ತರ ಇದ್ದರು. ಸಿದ್ದರಾಮಯ್ಯ ಅವರು ಉತ್ತರ ಕುಮಾರನ ಹಾಗೆ ಕಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಗೆ ಬಂದಿದ್ದ ಕೈ ನಾಯಕನಿಗೆ ಹೃದಯಾಘಾತ!
ಸಿದ್ದರಾಮಯ್ಯ ಅವರ ಭಾಷೆ ಈಗ ಬದಲಾಗಿದೆ. ನಮ್ಮ ಪ್ರಧಾನಿ ಮೋದಿ (Narendra Modi) ಹಾಗೂ ಬಸವರಾಜ ಬೊಮ್ಮಾಯಿ (Basavaraj Bommai) ಬಗ್ಗೆ ಟೀಕೆ ಮಾಡಿದ್ದಾರೆ. ಅಭಿಮನ್ಯು ಚಕ್ರವ್ಯೂಹದಲ್ಲಿ ಸಿಲುಕಿದ ಹಾಗೇ ಸಿದ್ದರಾಮಯ್ಯ ಮೋದಿ ಅವರು ಮೋದಿ ವ್ಯೂಹದಲ್ಲಿ ಸಿಲುಕಿದ್ದಾರೆ. ಸಿದ್ದರಾಮಯ್ಯ ಅವರ ಪಾಪದ ಕೊಡ ತುಂಬಿದೆ. ಹಾಗಾಗಿ ಇದು ಅವರನ್ನು ಮನೆಗೆ ಕಳಿಸುವ ಕೊನೆಯ ಚುನಾವಣೆಯಾಗಲಿದೆ ಎಂದು ಕುಟುಕಿದ್ದಾರೆ.