ಬಳ್ಳಾರಿ: 130 ಕೋಟಿ ಜನರು ಆಯ್ಕೆ ಮಾಡಿದ ಪ್ರಧಾನ ಮಂತ್ರಿಗಿಂತ ಈತ ದೊಡ್ಡವನಾ? ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಮಾಜಿ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.
Advertisement
ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ 60 ವರ್ಷದಲ್ಲಿ ದಲಿತರು ಹಾಗು ಅಲ್ಪ ಸಂಖ್ಯಾತರಿಗೆ ಏನು ಮಾಡಿದೆ ಎನ್ನುವುದನ್ನು ಸಾಬೀತುಪಡಿಸಲಿ ಹಾಗೂ ರಾಜ್ಯದಲ್ಲಿ ಮುಂದಿನ ನಿಮ್ಮ ಸಿಎಂ ಅಭ್ಯರ್ಥಿ ದಲಿತರನ್ನು ಘೋಷಣೆ ಮಾಡಲಿ ಎಂದು ನಾನು ಹಾಕಿದ ಸವಾಲಿಗೆ ಮೊದಲ ಸಿದ್ದರಾಮಯ್ಯ ಅವರು ಉತ್ತರ ನೀಡಲಿ. ಆ ಮೇಲೆ ಸಿಎಂ ಬಸವರಾಜ್ ಬೊಮ್ಮಾಯಿ ನಿಮ್ಮ ಸವಾಲಿಗೆ ಉತ್ತರ ನೀಡಲಿದ್ದಾರೆ ಕಿಡಿಕಾರಿದ್ದಾರೆ. ಇದನ್ನೂ ಓದಿ: ಜವಳಿ ಇಲಾಖೆಯಲ್ಲಿ 12 ಲಕ್ಷ ಉದ್ಯೋಗ ಸೃಷ್ಟಿ: ಶಂಕರ್ ಪಾಟೀಲ್ ಮುನೇನಕೊಪ್ಪ
Advertisement
ಸಿದ್ದರಾಮಯ್ಯ ಅವರು ಅಭಿವೃದ್ಧಿ ಹಾಗೂ ದಲಿತರ ವಿಷಯದಲ್ಲಿ ಬೊಮ್ಮಾಯಿ ಅವರಿಗೆ ಸವಾಲು ಹಾಕಿದ್ದಾರೆ. ಆ ಸವಾಲಿಗೆ ಉತ್ತರ ಪಡೆಯುವ ಮೊದಲು ನಾನು ಹಾಕಿದ ಸವಾಲಿಗೆ ಉತ್ತರ ನೀಡಲಿ ಎಂದು ಸವಾಲು ಹಾಕಿದ್ದಾರೆ. ನಾನು ದೊಡ್ಡವನು ಎಂದು ಸಿದ್ದರಾಮಯ್ಯ ಅವರು ಅನ್ಕೊಳ್ತಾ ಇರೋದು ಅವರ ಭ್ರಮೆ. ಸಿದ್ದರಾಮಯ್ಯ ಅವರು ಏನು ಡೊಡ್ಡ ಮನುಷ್ಯನಾ? 130 ಕೋಟಿ ಜನ ಅಯ್ಕೆ ಮಾಡಿದ ಪ್ರಧಾನಿಮಂತ್ರಿಗಿಂತ ಈತ ದೊಡ್ಡವನಾ? ಎಂದು ಪ್ರಶ್ನೆ ಮಾಡಿದ್ದಾರೆ.
Advertisement
Advertisement
ಆತ ಯಾರ ಬಗ್ಗೆ ಬೇಕಾದ್ರು ಮಾತನಾಡಬಹುದು, ಯಾರನ್ನು ಬೇಕಾದ್ರೂ ಗಿರಾಕಿ ಅನ್ನಬಹುದು. ಲೂಟಿಕೊರ ಅನ್ನಬಹುದಾ? ಸಿದ್ದರಾಮಯ್ಯ ಅವರು ಒಬ್ಬ ಪಳಗಿದ ರಾಜಕಾರಣಿಯಾಗಿ ಹೇಗಿರಬೇಕು? ಮುಂದಿನ ರಾಜಕಾರಣಿಗಳಿಗೆ ಅವರು ಒಂದು ಶಕ್ತಿಯಾಗಬೇಕು. ಅದನ್ನು ಬಿಟ್ಟು ನಾನು ದೊಡ್ಡವನು ಎಂದು ಎಲ್ಲರ ಬಗ್ಗೆ ಲಘುವಾಗಿ ಮಾತಾಡಬಹುದು ಎಂದು ತಿಳಿದುಕೊಂಡಿದ್ದಾರೆ. ಇದು ಅವರ ವಿನಾಶದ ಪರಮಾವಧಿ, ಮುಂದಿನ ಚುನಾವಣೆಯಲ್ಲಿ ಜನರು ಇದಕ್ಕೆ ತಕ್ಕ ಉತ್ತರ ಸಿಗಲಿದೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮುತ್ಯಾಲಮಡುವು ಗಡಿಭಾಗದಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಗುದ್ದಲಿ ಪೂಜೆ