ತುಮಕೂರು: ಮಾಜಿ ಪ್ರಧಾನಿ ದೇವೇಗೌಡರನ್ನು ಹೀನಾಯವಾಗಿ ತುಮಕೂರು ಕ್ಷೇತ್ರದಲ್ಲಿ ಸೋಲಿಸಿದ ಬಿಜೆಪಿ ನಾಯಕ ಬಸವರಾಜು ಅವರು ಹೇಮಾವತಿ ನೀರನ್ನು ಜಿಲ್ಲೆಗೆ ಬಿಟ್ಟು ತೋರಿಸಲಿ ಎಂದು ಸಚಿವ ಶ್ರೀನಿವಾಸ್ ಸವಾಲ್ ಹಾಕಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀನಿವಾಸ್ ಅವರು, ಬಸವರಾಜು ಗೆದ್ದರೂ ಅಂತ ಹೇಮಾವತಿ ಸರಾಗವಾಗಿ ಹರಿಯತ್ತಾ? ಎಲ್ಲಾದರೂ ಹರಿಯೋಕೆ ಸಾಧ್ಯ ಇದೆಯಾ? ದೇವೇಗೌಡರು ಗೆದ್ದಿದ್ದರೆ ಅವರಿಗೆ ಕಮಿಟ್‍ಮೆಂಟ್ ಆದರೂ ಇತ್ತು. ಹಾಗಾಗಿ ನೀರು ಬೀಡೋರು. ಈಗ ಬಸವರಾಜು ಹೇಮಾವತಿ ನೀರು ಹರಿಸಲಿ, ಎಲ್ಲಿಂದ ತರುತ್ತಾರೋ ತರಲಿ. ಜನ ಹೇಮಾವತಿ ನೀರು ತರುತ್ತಾರೆ ಎಂದು ಬಸವರಾಜು ಅವರಿಗೆ ವೋಟ್ ಹಾಕಿದ್ದಾರೆ. ಈಗ ಅವರು ಜಿಲ್ಲೆಗೆ ನೀರು ತಂದು ತೋರಿಸಲಿ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಈ ಬಾರಿಯ ಚುನಾವಣೆಯಲ್ಲಿ ಹೇಮಾವತಿ ನೀರಿನ ವಿಚಾರವನ್ನೇ ಪ್ರಮುಖ ಅಸ್ತ್ರವನ್ನಾಗಿ ಬಿಜೆಪಿ ಬಳಸಿತ್ತು. ಆದರೆ ಈಗ ಮತ್ತೆ ಅದೇ ಹೇಮಾವತಿ ವಿಚಾರವನ್ನು ಜೆಡಿಎಸ್ ಬಳಸಿಕೊಂದು ಬಿಜೆಪಿ ನಾಯಕರು ಮೇಲೆ ಕಿಡಿಕಾರುತ್ತಿದ್ದಾರೆ. ಜೊತೆಗೆ ನಿಖಿಲ್ ಕುಮಾರಸ್ವಾಮಿ ಅವರ ಅಭಿಮಾನಿಗಳು ಫೇಸ್‍ಬುಕ್‍ನಲ್ಲಿ ಹೇಮಾವತಿ ನೀರನ್ನು ಹಾಸನದಿಂದ ತುಮಕೂರಿಗೆ ಬಿಡಬೇಡಿ. ಅಲ್ಲಿನ ಜನ ಬಸವರಾಜು ಅವರನ್ನ ಗೆಲ್ಲಿಸಿದ್ದಾರಲ್ಲ. ತಾಖತ್ ಇದ್ದರೇ ಒಂದು ಹನಿ ನೀರು ಹಾಸನದಿಂದ ತುಮಕೂರಿಗೆ ಬಿಡಿಸಲಿ ನೋಡೋಣ ಎಂದು ಪೋಸ್ಟ್ ಗಳನ್ನು ಹಾಕಿ ಆಕ್ರೋಶ ಹೊರಹಾಕಿದ್ದಾರೆ.
Advertisement
Advertisement
ದೇವೇಗೌಡರ ಕುಟುಂಬ ತುಮಕೂರು ಜಿಲ್ಲೆಯ ಮೇಲೆ ಸೋಲಿನ ಸೇಡು ತೀರಿಸಿಕೊಳ್ಳಲಿದೆಯಾ? ಹೇಮಾವತಿ ನೀರಿಗೆ ಮತ್ತೆ ಬ್ರೇಕ್ ಹಾಕಿ ಸೇಡು ತೀರಿಸಿಕೊಳ್ಳುತ್ತಿದ್ದಾರಾ ದೊಡ್ಡಗೌಡರು? ಎಂಬ ಪ್ರಶ್ನೆ ಈಗ ಹುಟ್ಟುಕೊಂಡಿದೆ. ತುಮಕೂರಿನಲ್ಲಿ ದೇವೇಗೌಡರು ಬಿಜೆಪಿ ವಿರುದ್ಧ ಸೋಲನ್ನು ಕಂಡ ಬಳಿಕ ಜೆಡಿಎಸ್ ನಾಯಕರ ಹೇಳಿಕೆಗಳು ಈ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಹೇಮಾವತಿ ನೀರಿನ ವಿಚಾರದಲ್ಲಿ ಜೆಡಿಎಸ್ ನಾಯಕರು ಮತ್ತೆ ಟ್ರಬಲ್ ಸೃಷ್ಟಿಯಾಗುವ ಸುಳಿವು ನೀಡುತ್ತಿದ್ದು, ಮತ್ತೆ ತುಮಕೂರು ಜಿಲ್ಲೆಗೆ ಗೌಡರ ಕುಟುಂಬದಿಂದ ಕಂಟಕ ಕಾದಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.