Davanagere
ಜಿಲ್ಲೆಯ ಜನತೆಗೆ ತಲೆಕೆಟ್ಟಿರಬೇಕು, ತಲೆಕೆಟ್ಟವರಿಗೆ ನಾನು ಉತ್ತರ ಕೊಡೋದಿಲ್ಲ – ಸಚಿವ ಎಸ್.ಆರ್.ಶ್ರೀನಿವಾಸ್

ದಾವಣಗೆರೆ: ಜಿಲ್ಲೆಯ ಜನತೆಗೆ ತಲೆಕೆಟ್ಟಿರಬೇಕು, ತಲೆಕೆಟ್ಟವರಿಗೆ ನಾನು ಉತ್ತರ ಕೊಡೋದಿಲ್ಲ ಎಂದು ದಾವಣಗೆರೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಆರ್ ಶ್ರೀನಿವಾಸ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಬರ ನಿರ್ವಹಣಾ ಸಭೆಯ ನಂತರ ಮಾಧ್ಯಮಗಳ ಪ್ರಶ್ನೆ ಉತ್ತರಿಸಿ ಮಾತನಾಡಿದರು. ಈ ವೇಳೆ ಜಿಲ್ಲೆಯ ಜನತೆಗೆ ಸಚಿವರು ಸಿಗುತ್ತಿಲ್ಲ ಎಂಬ ಆರೋಪಕ್ಕೆ ಉತ್ತರಿಸಿದ ಅವರು 2 ತಿಂಗಳ ಹಿಂದೆಯಷ್ಟೇ ಬಂದು ನಾನು ಸಭೆ ನಡೆಸಿ ಹೋಗಿದ್ದೇನೆ. ಆದರೆ ಈಗ ನೀತಿ ಸಂಹಿತೆ ಜಾರಿ ಇರುವುದಿಂದ ಜಿಲ್ಲೆಗೆ ಬರುವುದಕ್ಕೆ ಆಗಲಿಲ್ಲ ಅಷ್ಟೇ. ನನಗೆ ಹೇಗೆ ಕೆಲಸ ಮಾಡಬೇಕು ಎಂದು ಗೊತ್ತಿದೆ ಎಂದರು.
ಜಿಲ್ಲೆಯಲ್ಲಿ ಅಧಿಕಾರಿಗಳ ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಅವರಿಂದ ಮಾಹಿತಿ ಪಡೆದು ನಾನು ಕೆಲಸ ಮಾಡಿದ್ದೇನೆ. ಆದರೆ ಜನರನ್ನು ಸಮಾಧಾನ ಮಾಡಲು ಆಗಲ್ಲ. ನಾನು ಜಿಲ್ಲೆಗೆ ಬರುವುದಿಲ್ಲ ಎಂದು ಜಿಲ್ಲೆಯ ಜನ ಅಂದರೆ ಅವರಿಗೆ ತಲೆ ಕೆಟ್ಟಿದೆ ಎಂದರ್ಥ. ತಲೆ ಕೆಟ್ಟವರಿಗೆ ನಾನು ಉತ್ತರ ಕೊಡುವುದಿಲ್ಲ. ನಾನು ಜಿಲ್ಲೆಗೆ ಬರುವುದಿಲ್ಲ ಅಂತ ಯಾರೋ ತಲೆಕೆಟ್ಟವರು ಹೇಳಿರಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವರನ್ನ ಬದಲಾಯಿಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರೇ ಹೇಳುತ್ತಿದ್ದಾರೆ ಎಂಬ ಪ್ರಶ್ನೆಗೆ ಗರಂ ಆದ ಅವರು, ಬದಲಾಯಿಸೋದು ಬೇಡ ಅಂತ ನಾನು ಹೇಳಿಲ್ಲ. ಕಾಂಗ್ರೆಸ್ ಪಕ್ಷದವರು ಬೇಕಿದ್ದರೆ ಬದಲಾಯಿಸಲಿ. ಗುಬ್ಬಿ ಕ್ಷೇತ್ರದಲ್ಲಿ 1.20 ಲಕ್ಷ ಮತದಾರರಿದ್ದಾರೆ, ಅವರೆಲ್ಲ ನನಗೆ ವೋಟ್ ಹಾಕಿದ್ದಾರಾ? 60 ಸಾವಿರ ಜನ ವೋಟ್ ಹಾಕಿರೋದು, ಉಳಿದ 60 ಸಾವಿರ ಜನ ವಿರೋಧಿಸುತ್ತಾರೆ ಎಂದು ಹೇಳಿದರು.
