ಮಂಗಳೂರು: ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಹಿಂದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೈವಾಡ ಇದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಶಂಕೆ ವ್ಯಕ್ತಪಡಿಸಿದರು.
Advertisement
ಪ್ರವೀಣ್ ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರೀತಿಯಿಂದ ಬದುಕುತ್ತಿದ್ದ ಪ್ರವೀಣ್ ಇಂದು ನಮ್ಮೊಂದಿಗೆ ಇಲ್ಲ. ಕೇರಳ ಮಾದರಿಯಲ್ಲಿ ಪ್ರವೀಣ್ ಕೊಲೆಯಾಗಿದೆ. ಕುತ್ತಿಗೆಯಿಂದ ಮೇಲೆ ತಲೆ ಕಡಿದು ಕೊಲೆ ಮಾಡಿದ್ದಾರೆ. ಪಾಪ್ಯುಲರ್ ಫ್ರಂಟ್ ಇಂಡಿಯಾ ಕೊಲೆ ಮಾಡುವ ರೀತಿಯಲ್ಲಿ ಇದೆ ಎಂದು ಆರೋಪಿಸಿದರು.
Advertisement
Advertisement
ಸಿರಿಯಾದಲ್ಲಿ ಟ್ರೈನಿಂಗ್ ಪಡೆದು ಕೊಲೆ ಮಾಡುತ್ತಾರೆ. ರುದ್ರೇಶ್ ಕೊಲೆ ಕೂಡ ಇದೇ ರೀತಿಯಲ್ಲಿ ಮಾಡಿದ್ದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೈವಾಡ ಶಂಕೆಯಿದೆ. ಪ್ರಕರಣವನ್ನು ಎನ್‍ಐಎ ತನಿಖೆಗೆ ನೀಡಿದ್ದೇವೆ. ಆದಷ್ಟು ಬೇಗ ಪ್ರವೀಣ್ ಸಾವಿಗೆ ನ್ಯಾಯ ಸಿಗಬೇಕು. ನನ್ನ ಮನೆಯಿಂದ 8 ಕಿ.ಮೀ ದೂರದಲ್ಲಿ ಕೊಲೆ ನಡೆದಿದೆ ಎಂದರು.
Advertisement
ಮುಖ್ಯವಾಗಿ ಪಿಎಫ್‍ಐ ಬ್ಯಾನ್ ಮಾಡಬೇಕಾದರೆ ಅದಕ್ಕೆ ಬೇಕಾದ ಹಿನ್ನೆಲೆ, ಮಾಹಿತಿ ಕಾನೂನು ಪ್ರಕಾರ ಸಂಗ್ರಹ ಮಾಡಬೇಕು. ಎನ್‍ಐಎ ತನಿಖೆಗೆ ನಾವು ಸಹಕಾರ ನೀಡಬೇಕು. ಅದು ನಂತರ ಕೋರ್ಟ್‍ನಲ್ಲಿ ಗೆಲ್ಲಬೇಕು. ಆದಷ್ಟು ಬೇಗ ಮಾಹಿತಿ ಸಿಗುವಂತಾಗಲಿ ಎಂದು ಹೇಳಿದರು. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಮನೆಗೆ ಶೋಭಾ ಕರಂದ್ಲಾಜೆ ಭೇಟಿ- ಕುಟುಂಬಸ್ಥರಿಗೆ ಸಾಂತ್ವನ, 5 ಲಕ್ಷ ಪರಿಹಾರ
ಇದೇ ವೇಳೆ ರಾಜ್ಯದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರ ಆಕ್ರೋಶ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಂತಹ ಘಟನೆ ಆದಾಗ ಆಕ್ರೋಶ ಆಗುವುದು ಸಹಜ. ನನಗೂ ಆಕ್ರೋಶ, ಸಿಟ್ಟು ಬಂದಿದೆ. ಕಾನೂನು ರೀತಿಯಲ್ಲಿ ಇದನ್ನು ಬಗ್ಗು ಬಡಿಯಬೇಕು. ಭಯೋತ್ಪಾದನೆ ದೂರ ಮಾಡಬೇಕು. ಮಸೂದ್ ಕೊಲೆಯ ಬಗ್ಗೆಯೂ ತನಿಖೆ ಆಗಬೇಕು. ಆರೋಪಿಗಳ ಬಂಧನವಾಗಿದೆ ಪೂರ್ಣ ತನಿಖೆಯಾಗಬೇಕು ಎಂದು ಶೋಭಾ ಕರಂದ್ಲಾಜೆ ಆಗ್ರಹಿಸಿದರು.