ಚಿಕ್ಕಬಳ್ಳಾಪುರ: ಕೆಎಸ್‌ಆರ್‌ಟಿಸಿ ಬಸ್‍ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಶಾಸಕ ಹಾಗೂ ಕೃಷಿ ಸಚಿವ ಎನ್.ಎಚ್ ಶಿವಶಂಕರರೆಡ್ಡಿ ಪ್ರಯಾಣ ಮಾಡಿದ್ದಾರೆ.
ಗೌರಿಬಿದನೂರು ನಗರದಿಂದ 24 ಕಿಲೋಮೀಟರ್ ದೂರದ ಕರ್ನಾಟಕ-ಆಂಧ್ರ ಗಢಿಭಾಗದ ಸಾದಾರ್ಲಹಳ್ಳಿಗೆ 25 ರೂಪಾಯಿ ನೀಡಿ ಟಿಕೆಟ್ ಪಡೆದ ಸಚಿವರು ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ಪ್ರಯಾಣಿಸಿದ್ದಾರೆ.
Advertisement
Advertisement
ಅಂದಹಾಗೆ ಇದುವರೆಗೂ ಸಾದಾರ್ಲಹಳ್ಳಿ ಗ್ರಾಮಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸೇವೆ ಲಭ್ಯವಿರಲಿಲ್ಲ. ಕಳೆದ ವಿಧಾನಸಭೆ ಚುನಾವಣೆ ವೇಳೆ ಗ್ರಾಮಸ್ಥರಿಗೆ ಬಸ್ ಸಂಚಾರ ಸೌಲಭ್ಯ ಓದಗಿಸುವ ಬಗ್ಗೆ ಸಚಿವರು ಭರವಸೆಯನ್ನು ನೀಡಿದ್ದರು. ಇನ್ನೂ ಇತ್ತೀಚೆಗೆ ಸಾದಾರ್ಲಹಳ್ಳಿ ಮಾರ್ಗಕ್ಕೆ ಡಾಂಬರೀಕರಣ ರಸ್ತೆ ಸಹ ನಿರ್ಮಾಣ ಮಾಡಲಾಗಿತ್ತು.
Advertisement
Advertisement
ಇಂದು ಸ್ವತಃ ಸಚಿವರೇ ಕೆಎಸ್‌ಆರ್‌ಟಿಸಿ ಬಸ್ ಹತ್ತಿ ಸಾದಾರ್ಲಹಳ್ಳಿ ಗ್ರಾಮಕ್ಕೆ ಭೇಟಿ ನೀಡುವ ಮೂಲಕ ನೂತನ ಬಸ್ ಸಂಚಾರ ಸೇವೆಗೆ ಚಾಲನೆ ನೀಡಿದ್ದರು. ಸಾದಾರ್ಲಹಳ್ಳಿ ಗ್ರಾಮಕ್ಕೆ ಆಗಮಿಸಿದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಸಚಿವರನ್ನು ಗ್ರಾಮಸ್ಥರು ತಮಟೆ ವಾದ್ಯಗಳೊಂದಿಗೆ ಬರ ಮಾಡಿಕೊಂಡರು. ಈ ವೇಳೆ ಸಚಿವರಿಗೆ ಅನೇಕ ಮುಖಂಡರು ಸಾಥ್ ಕೊಟ್ಟಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv