ಬೆಂಗಳೂರು: ಕರ್ನಾಟಕ ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಚಿತ್ರಕಲಾವಿದರೂ ಆದ ಪ್ರೊ.ಎಂ.ಜೆ ಕಮಲಾಕ್ಷಿ (Prof M.J Kamalaskhi) ಅವರ ನಿಧನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ (Shivaraj Tangadagi) ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಎಂಜೆ ಕಮಲಾಕ್ಷಿ ಅವರು ಈ ನಾಡು ಕಂಡ ಅತ್ಯಂತ ಪ್ರತಿಭಾನ್ವಿತ ಚಿತ್ರ ಕಲಾವಿದರಾಗಿದ್ದರು. ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರ ಕಲಾ ಕೃತಿಗಳಿಗೆ ಮನ್ನಣೆ ದೊರೆತಿತ್ತು. ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾಗಿ ಅವರು ಅನೇಕ ಗಮನಾರ್ಹ ಕಾರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸಿ ಜನಪ್ರಿಯರಾಗಿದ್ದರು ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: Indore | ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಣ – ಸೇವಿಸಿದ್ದ ಏಳು ಮಂದಿ ಸಾವು
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಹಾಗೂ ಪ್ರತಿಷ್ಠಿತ ವರ್ಣ ಶಿಲ್ಪಿ ವೆಂಕಟಪ್ಪ ಪ್ರಶಸ್ತಿಗೆ ಭಾಜನರಾಗಿದ್ದ ಕಮಲಾಕ್ಷಿ ಅವರು ಚಿತ್ರಕಲೆಗೆ ತಮ್ಮ ಇಡೀ ಜೀವನ ಮುಡಿಪಿಟ್ಟಿದ್ದರು. ಅಂತಹ ಹಿರಿಯ ಕಲಾವಿದರ ಆಗಲಿಕೆ ನೋವನ್ನು ಉಂಟುಮಾಡಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ಕೊಡಲಿ ಹಾಗೂ ಅವರ ಕುಟುಂಬಕ್ಕೆ ಅವರ ಅಗಲಿಕೆಯ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ತಂಗಡಗಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: 8 ಎಕರೆ ಭೂಮಿ ಕಬಳಿಕೆ; ನೆಲಮಂಗಲ ಹೆಡ್‌ಕಾನ್‌ಸ್ಟೆಬಲ್ ಅಮಾನತು

