ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಕನಸಾಗಿದ್ದ ಜನೌಷಧಿ ಮಳಿಗೆಯಲ್ಲಿ ಔಷಧಿಗಳು ಸಿಗದೇ ಇರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರವಾಗಿ ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಅವರು ಭರವಸೆ ನೀಡಿದ್ದಾರೆ.
ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ನಾನು ತಕ್ಷಣ ಡ್ರಗ್ ಕಂಟ್ರೋಲರ್ ಅವರನ್ನು ಚೆಕ್ ಮಾಡಲು ಕಳುಹಿಸಿದ್ದೇನೆ. ಕೇಂದ್ರ ಸರ್ಕಾರದದಿಂದಲೇ ಏನೋ ಎಡವಟ್ಟಾಗಿದೆ. ಯಾಕಂದ್ರೆ ಜನರಿಗೆ ಈ ಔಷಧಿಗಳು ಅಲ್ಲಿಂದ ಪೂರೈಕೆ ಆಗುತ್ತಿವೆ. ಇವೆಲ್ಲ ನಮ್ಮ ಕಂಟ್ರೋಲನಲ್ಲಿ ಇಲ್ಲ. ಈ ಔಷಧಿಗಳನ್ನು ಪೂರೈಕೆ ಮಾಡಲು ಕೇಂದ್ರ ಸರ್ಕಾರವೇ ಮಧ್ಯವರ್ತಿಗಳನ್ನು ನೇಮಿಸಿದೆ. ಒಟ್ಟಿನಲ್ಲಿ ಜನೌಷಧಿ ಮಳಿಗೆಯಲ್ಲಿ ಔಷಧಿಗಳು ಸಿಗುತ್ತಿಲ್ಲ ಅನ್ನೋ ವಿಚಾರ ಬೆಳಕಿಗೆ ಬರುತ್ತಿದಂತೆಯೇ ನಾನು ಡ್ರಗ್ ಕಂಟ್ರೋಲರನ್ನು ಪ್ರಶ್ನಿಸಿದ್ದೇನೆ. ಯಾಕೆ ಈ ಔಷಧಿಗಳು ಪೂರೈಕೆ ಆಗುತ್ತಿಲ್ಲ. ಏನು ಕಾರಣ ಅಂತ ಕೇಳಿದ್ದೇನೆ ಅಂದ್ರು.
ಹೆಚ್ಚಿನವರು ಈಗ ಅಲೋಪತಿ ಔಷಧಿ ತೆಗೆದುಕೊಳ್ಳುತ್ತಿದ್ದಾರೆ. ಆದ್ರೂ 70ರಷ್ಟು ಜನ ಜನೌಷಧಿ ಮಳಿಗೆಯಲ್ಲಿ ಕಡಿಮೆ ದರದಲ್ಲಿ ಸಿಗುತ್ತಿರುವುದರಿಂದ ಅಲ್ಲಿಂದಲೇ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದ್ರೆ ಇದೀಗ ಅಲ್ಲಿ ಔಷಧಿಗಳು ಸಿಗದೇ ಇರುವುದು ವಿಪರ್ಯಾಸವಾಗಿದೆ. ಮುಂದೆ ಈ ರೀತಿ ಆಗಬಾರದು ಅಂತ ಅವರು ಹೇಳಿದ್ರು. ಇದನ್ನೂ ಓದಿ: ಹಳ್ಳ ಹಿಡಿದ ಪ್ರಧಾನಿಯ ಮಹತ್ವಾಕಾಂಕ್ಷೆ ಯೋಜನೆ-ಬಡವರ ಸಂಜೀವಿನಿಯಲ್ಲಿ ಮಹಾ ದೋಖಾ..!
ಈ ಬಗ್ಗೆ ಇವತ್ತು ಸರ್ವೆ ಆರಂಭಿಸಿದ್ದಾರೆ. ಆದ್ರೆ ಈ ವೇಳೆ ಮಳಿಗೆಯವರು ಆ ಥರ ಏನೂ ಇಲ್ಲ ಅಂತ ಹೇಳುತ್ತಿದ್ದಾರೆ. ಈ ತರಹ ಆಗಿರೋದು ಮೊದಲ ಬಾರಿ. ಈ ವಿಚಾರ ನಿನ್ನೆಯಷ್ಟೇ ನನ್ನ ಗಮನಕ್ಕೆ ಬಂದಿದೆ. ಮೊದಲೇ ಗೊತ್ತಾಗುತ್ತಿದ್ದರೆ ಏನಾದ್ರು ಮಾಡಬಹುದಿತ್ತು. ಒಟ್ಟಿನಲ್ಲಿ ಕೇಂದ್ರ ಸರ್ಕಾರವೇ ಏಜೆಂಟ್ ಗಳನ್ನು ನೇಮಿಸಿದ್ದರಿಂದ ಅವರೇ ಈ ಬಗ್ಗೆ ಹೇಳಬೇಕು. ನಾನು ಈ ಬಗ್ಗೆ ಡ್ರಗ್ ಕಂಟ್ರೋಲರನನ್ನು ಮಾತ್ರ ಪ್ರಶ್ನಿಸಬಹುದು. ಹೀಗಾಗಿ ನಿನ್ನೆ ಡ್ರಗ್ ಕಂಟ್ರೋಲರ್ ಅವರ ಬಳಿ ಮಳಿಗೆಗಳಿಗೆ ಭೇಟಿ ನೀಡಿ ಸ್ಟೇಟಸ್ ವರದಿ ತೆಗೆದುಕೊಂಡು ಬನ್ನಿ ಈ ಮೂಲಕ ನಾವು ಕೇಂದ್ರ ಸರ್ಕಾರ ಮೊರೆ ಹೋಗುತ್ತೇವೆ ಅಂದ್ರು.
ಒಟ್ಟಿನಲ್ಲಿ ಬಿಪಿ, ಶುಗರ್ ಔಷಧಿಗಳು ಜನಸಾಮಾನ್ಯರಿಗೆ ಸಿಗಲೇ ಬೇಕು. ಹೀಗಾಗಿ ಸಮಸ್ಯೆ ಬಗ್ಗೆ ಶೀಘ್ರವೇ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews