ಚಿಕ್ಕೋಡಿ(ಬೆಳಗಾವಿ): ದಶಕಗಳಿಂದ ನಡೆದು ಬಂದ ಜಿಲ್ಲಾ ಹೋರಾಟ ಚಿಕ್ಕೋಡಿ ಜಿಲ್ಲೆ ರಚನೆ ಆಗೋವರೆಗೂ ಮುಂದುವರಿಯಲಿದೆ. ಚುನಾಯಿತ ಪ್ರತಿನಿಧಿಗಳ ವಿಶ್ವಾಸಕ್ಕೆ ತೆಗೆದುಕೊಂಡು ಸಕಾರಾತ್ಮಕ ನೀತಿಯಲ್ಲಿ ಚಿಕ್ಕೋಡಿ ಜಿಲ್ಲಾ ಹೊರಾಟ ಸಮಿತಿ ನಡೆಯುತ್ತಿದ್ದು ಆ ನಿಟ್ಟಿನಲ್ಲಿ ಮುಜರಾಯಿ, ಹಜ್ ಮತ್ತು ವಕ್ಫ ಸಚಿವೆ ಶಶಿಕಲಾ ಜೊಲ್ಲೆ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದು ಅವರಿಗೆ ಹೋರಾಟ ಸಮಿತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
Advertisement
ಚಿಕ್ಕೋಡಿ ಪಟ್ಟಣದ ಪ್ರವಾಸಿ ಮಂದಿರ ಪತ್ರಿಕಾಗೋಷ್ಠಿಯಲ್ಲಿ ಅಭಿನಂದನೆ ಸಲ್ಲಿಸಿದ ಜಿಲ್ಲಾ ಹೋರಾಟ ಸಮಿತಿ ಸದಸ್ಯರು ಭೌಗೋಳಿಕ ವಾಗಿ ಸುಧಾರಣೆ, ಅಮಗ್ರ ಅಭಿವೃದ್ಧಿಗೆ ನಡೆದು ಬಂದ ಹಲವು ದಶಕದ ಹೋರಾಟ ಜಿಲ್ಲಾ ರಚನೆ ಕನಸಾಗಿದ್ದು, ಅಭಿವೃದ್ಧಿ ನಿಟ್ಟಿನಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಸಕಾರಾತ್ಮಕ ಸ್ಪಂದಿನೆ ಮೆಚ್ಚುಗೆಅರ್ಹ, ಸದಾಕಾಲ ಜಿಲ್ಲಾ ಹೋರಾಟ ಸಮಿತಿ ಯೊಂದಿಗೆ ಇರುವದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮುಜರಾಯಿ ತಹಶೀಲ್ದಾರ್ ಅರೆಸ್ಟ್
Advertisement
Advertisement
ನಿಗಮ ಮಂಡಳಿ ಅಧ್ಯಕ್ಷ ಡಿ.ಎಮ್ ಐಹೊಳೆ, ಶಾಸಕ ಗಣೇಶ್ ಹುಕ್ಕೇರಿ ಅವರು ಜಿಲ್ಲೆಗೆ ದ್ವನಿ ಎತ್ತುವದಾಗಿ ತಿಳಿಸಿದ್ದಾರೆ. ಸಚಿವ ಉಮೇಶ್ ಕತ್ತಿ, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಪಿ.ರಾಜೀವ ಅವರು ಜಿಲ್ಲೆ ರಚನೆಗೆ ಬೆಂಬಲಿಸಿದ್ದಾರೆ ಎಂದರು. ಸಮಿತಿ ಅಧ್ಯಕ್ಷ ತುಕಾರಾಮ ಕೋಳಿ ಸರ್ವಾಂಗೀಣ ಅಭಿವೃದ್ಧಿಗೆ ಚಿಕ್ಕೋಡಿ ಜಿಲ್ಲೆ ಕನಸು ಹೊತ್ತು 3 ದಶಕಗಳಿಂದ ದಿ.ಬಿ.ಆರ್ ಸಂಗಪ್ಪಗೋಳ ಅವರ ನೇತೃತ್ವದಲ್ಲಿ ನಡೆಯುತ್ತಿದ್ದು, ಸಚಿವೇ ಅವರ ಪತ್ರ ಸಮೀತಿಯಲ್ಲಿ ಹೊಸ ಹುಮ್ಮಸ್ಸು ತಂದಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಗೆ ಸ್ವಾಗತಿಸಿದರು.
Advertisement
ಈ ಸಂಧರ್ಭದಲ್ಲಿ ಸುರೇಶ ಬ್ಯಾಕೂಡೆ, ರುದ್ರಪ್ಪಾ ಸಂಗಪ್ಪಗೋಳ, ಸುರೇಶ್ ತಳವಾರ, ತ್ಯಾಗರಾಜ ಕದಂ, ಎಮ್.ಎ ಪಾಟೀಲ್, ಅರ್ಜುನ ಚನ್ನವರ, ರಮೇಶ್ ಬಸ್ತವಾಡೆ, ಬಸವರಾಜ್ ಢಾಕೆ ಇದ್ದರು. ಇದನ್ನೂ ಓದಿ: ಕ್ಷೇತ್ರದ ಸಮಸ್ಯೆ ಹೇಳಲು ಫೋನ್ ಮಾಡಿದ್ದ ಮಹಿಳೆಗೆ ಅನಿಲ್ ಬೆನಕೆ ಅವಾಜ್