ಚಿಕ್ಕೋಡಿ (ಬೆಳಗಾವಿ): ಜಿಲ್ಲೆಯ ನಿಪ್ಪಾಣಿ ಮತಕ್ಷೇತ್ರದ ಭಿವಶಿ ಗ್ರಾಮದಲ್ಲಿ ಆಯೋಜಸಿದ್ದ ಉಚಿತ ಆಯುಷ್ಮಾನ್ ಕಾರ್ಡ್ ವಿತರಣೆ ಶಿಬಿರಕ್ಕೆ ಮುಜರಾಯಿ ಹಾಗೂ ವಕ್ಫ್ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ (Shashikala Jolle) ಚಾಲನೆ ನೀಡಿದರು.
ಶಿಬಿರದಲ್ಲಿ ನೋಂದಣಿ ಮಾಡಿಸಲು ತಾಯಿಯೊಬ್ಬಳು ಕಣ್ಣಿನ ಕ್ಯಾನ್ಸರ್ (Eye Cancer) ನಿಂದ ಬಳಲುತ್ತಿರುವ ತನ್ನ 10 ತಿಂಗಳ ಪುಟ್ಟ ಕಂದಮ್ಮನನ್ನು ಕರೆ ತಂದಿದ್ದಳು. ಈಗಾಗಲೇ ಒಂದು ಕಣ್ಣು ಸಂಪೂರ್ಣ ಕಾಣದಾಗಿರುವ ಆ ಪುಟ್ಟ ಮಗುವಿನ ಸ್ಥಿತಿ ನೋಡಿ ಶಶಿಕಲಾ ಜೊಲ್ಲೆ ಅವರು ಮರುಗಿದರು. ಅರಳಬೇಕಾದ ಹೂವೊಂದು ಮೊಗ್ಗಿನಲ್ಲಿಯೇ ಮಾರಣಾಂತಿಕ ಕಾಯಿಲೆಗೆ ತುತ್ತಾಗಿ ಬಳಲುತ್ತಿರುವುದನ್ನು ಕಂಡು ಮರುಗಿ ಸ್ಥಳದಲ್ಲೆ ಕಾರ್ಡ್ ವಿತರಣೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಗುವಿನೊಂದಿಗೆ ಕೆಲಹೊತ್ತು ಕಳೆದ ಸಚಿವೆ ನಂತರ ಮಗುವಿಗೆ ಆಯುಷ್ಮಾನ್ ಕಾರ್ಡ್ (Ayushman Card) ಮಾಡಿಸಿ ಕೊಟ್ಟರು. ಆ ಮಗುವಿನ ಇನ್ನೊಂದು ಕಣ್ಣಿನ ಚಿಕಿತ್ಸೆ ಮಾಡಿಸಿ, ಆ ನೊಂದ ಕುಟುಂಬದ ಹೃದಯಗಳಲ್ಲಿ, ಸಂತಸ ಕಾಣುವಂತಾಗಲಿ. ಮುದ್ದಾದ ಮಗು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು. ಇದನ್ನೂ ಓದಿ: ಸಮಂತಾಗೆ ಗಂಭೀರ ಆರೋಗ್ಯ ಸಮಸ್ಯೆಯಾ? ಆತಂಕಗೊಂಡ ಫ್ಯಾನ್ಸ್