– ಕರ್ನಾಟಕದ ಕೌಶಲ್ಯಪೂರ್ಣ ಕಾರ್ಯಪಡೆಯತ್ತ ಕಣ್ಣು ನೆಟ್ಟ ಜಪಾನ್
ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಕರ್ನಾಟಕದ ಕೌಶಲ್ಯಪೂರ್ಣ ವೃತ್ತಿಪರರ ಅಗತ್ಯವಿದೆ ಎಂದು ಜಪಾನ್ ಮನವಿ ಮಾಡಿದೆ. ಈ ನಿಟಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ. ಜಪಾನ್ ಜೊತೆ ಸಹಕಾರಕ್ಕೆ ಬದ್ಧ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್(Sharan Prakash Patil) ತಿಳಿಸಿದರು.
ಬುಧವಾರ ಬೆಂಗಳೂರಿನ(Bengaluru) ವಿಕಾಸ ಸೌಧದಲ್ಲಿ ಜಪಾನ್‌ನ ಕಾನ್ಸುಲ್-ಜನರಲ್(Consul General of Japan) ನಕೇನ್ ಸ್ಟಮೊ ಅವರೊಂದಿಗೆ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ತಾಂತ್ರಿಕ ಮತ್ತು ವಿಶೇಷ ಕೋರ್ಸ್ ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸುವ ತುರ್ತು ಅಗತ್ಯವಿದೆ ಎಂದು ಹೇಳಿದರು. ಇದನ್ನೂ ಓದಿ: ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಬಾಕಿಯಿರುವ ಕೇಂದ್ರದ ಪಾಲು ಬಿಡುಗಡೆಯಾಗಿಲ್ಲ: ಸಿಎಂ ಕಿಡಿ
ನಮ್ಮ ಸರ್ಕಾರವು ಈಗಾಗಲೇ ಕೇಂದ್ರೀಕೃತ ಕೌಶಲ್ಯವರ್ಧನೆಯ ಮೂಲಕ ಐಟಿಐ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸಲು ಮುಂದಾಗಿದೆ. ಜಾಗತಿಕ ಉದ್ಯೋಗ(Global Employment) ಅವಕಾಶಗಳ ಮೇಲೆ ಒತ್ತು ನೀಡುವ ಮೂಲಕ ಜಪಾನೀಸ್, ಜರ್ಮನ್ ಮತ್ತು ಇಂಗ್ಲಿಷ್ ಸೇರಿದಂತೆ ವಿದೇಶಿ ಭಾಷಾ ತರಬೇತಿಯನ್ನು ಪರಿಚಯಿಸುವ ಯೋಜನೆಯನ್ನು ಘೋಷಿಸಿದೆ. ಇಲಾಖೆಯ ನಿಯೋಗವು ಶೀಘ್ರದಲ್ಲೇ ಜಪಾನ್‌ಗೆ ಭೇಟಿ ನೀಡಿ ಅದರ ಕಾರ್ಯಪಡೆಯ ಮಾದರಿಯನ್ನು ಅಧ್ಯಯನ ಮಾಡಲಿದೆ ಎಂದರು. ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್ – 31 ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ
ಜಪಾನ್‌ನ ಕಾನ್ಸುಲ್-ಜನರಲ್ ನಕೇನ್ ಸ್ಟಮೊ ಅವರು ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಕೌಶಲ್ಯಪೂರ್ಣ ವೃತ್ತಿಪರರರು, ನರ್ಸ್ಗಳ ಅಗತ್ಯವಿದೆ. ಜಪಾನ್‌ನಲ್ಲಿ ಕಾರ್ಯಪಡೆಯ ಕೊರತೆ ಇದೆ. ವಿಶೇಷವಾಗಿ ಆರೋಗ್ಯ ರಕ್ಷಣೆ, ಐಟಿ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಕೌಶಲ್ಯಗಾರರ ಅಗತ್ಯವಿದೆ. ರಾಜ್ಯದಿಂದ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ಉತ್ಸುಕವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಭಾರತ ಕೆಣಕಿ ಹೋಳಾದ ಪಾಕಿಸ್ತಾನ – ಸ್ವತಂತ್ರ ದೇಶ ಘೋಷಿಸಿಕೊಂಡ ಬಲೂಚಿಸ್ತಾನ
ಜಪಾನ್‌ನಲ್ಲಿ ಈಗ ವಯಸ್ಸಾದವರ ಸಂಖ್ಯೆ ಹೆಚ್ಚಾಗಿದೆ. ಜನಸಂಖ್ಯೆ ಕ್ಷೀಣಿಸುತ್ತಿದೆ. 2030ರ ವೇಳೆಗೆ, ಐಟಿ ವಲಯದಲ್ಲಿ 7,90,000 ವೃತ್ತಿಪರರ ಕೊರತೆ ಎದುರಾಗುವ ನಿರೀಕ್ಷೆಯಿದೆ. ವೈಟ್-ಕಾಲರ್ ತಜ್ಞರ ಜೊತೆ ಕೌಶಲ್ಯಪೂರ್ಣ ತಂತ್ರಜ್ಞರ ಅಗತ್ಯವಿದೆ. ದಾದಿಯರ ಅಗತ್ಯವೂ ಹೆಚ್ಚುತ್ತಿದೆ ಎಂದರು. ಇದನ್ನೂ ಓದಿ: ಸೋಫಿಯಾ ವಿರುದ್ಧ ಅವಹೇಳನಕಾರಿ ಹೇಳಿಕೆ – ಮಧ್ಯಪ್ರದೇಶದ ಮಂತ್ರಿ ವಿರುದ್ಧ ಎಫ್‌ಐಆರ್‌ಗೆ ಸೂಚನೆ
ಬೆಂಗಳೂರಿನಲ್ಲಿ ಜಪಾನ್‌ನ ಕಂಪನಿಗಳು ಸ್ಥಳೀಯ ನರ್ಸಿಂಗ್ ಪದವೀಧರರ ಸುಗಮ ಉದ್ಯೋಗಕ್ಕೆ ಅನುಕೂಲವಾಗುವಂತೆ ಸಿಎಸ್‌ಆರ್ ಉಪಕ್ರಮಗಳ ಅಡಿಯಲ್ಲಿ ಜಪಾನೀಸ್ ಭಾಷೆ ಮತ್ತು ಕೌಶಲ್ಯ ತರಬೇತಿಯನ್ನು ನೀಡಲು ಸಿದ್ಧವಾಗಿವೆ. ಕೈಗಾರಿಕಾ ಉತ್ಪಾದನೆ, ನಿರ್ಮಾಣ, ಹಡಗು ನಿರ್ಮಾಣ, ಯಂತ್ರೋಪಕರಣಗಳ ನಿರ್ವಹಣೆ, ಆಟೋ ದುರಸ್ತಿ, ವಾಯುಯಾನ, ಆತಿಥ್ಯ, ಸಾರಿಗೆ, ರೈಲ್ವೆ, ಕೃಷಿ, ಮೀನುಗಾರಿಕೆ, ಜಲಚರ ಸಾಕಣೆ, ಆಹಾರ ಸೇವೆಗಳು, ಅರಣ್ಯ ಮತ್ತು ಮರ ಸಂಸ್ಕರಣೆ ಮುಂತಾದ ಕ್ಷೇತ್ರಗಳಲ್ಲಿ ಬೇಡಿಕೆ ಇದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: Boycott Turkey – ಸೇಬು, ಚೆರ‍್ರಿ, ಮಾರ್ಬಲ್‌ಗಳ ಆಮದು ಬ್ಯಾನ್‌ಗೆ ನಿರ್ಧಾರ
ಈ ನಿಟ್ಟಿನಲ್ಲಿ ಕರ್ನಾಟಕದೊಂದಿಗೆ ಜಪಾನ್ ಸಹಕರಿಸಲು ಸಿದ್ಧವಾಗಿದೆ. ಕಾರ್ಯಪಡೆಯ ಅಭಿವೃದ್ಧಿಯಲ್ಲಿ ಎಲ್ಲಾ ರೀತಿಯ ಬೆಂಬಲವನ್ನು ನೀಡಲಾಗುವುದು ಎಂದರು.