ಬೆಂಗಳೂರು: ಡಿನ್ನರ್ ಹೊಸತೇನು ಅಲ್ಲ, ನಮ್ಮಲ್ಲಿ ಮುಸುಕಿನ ಗುದ್ದಾಟ ಎನಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಎಸ್ಸಿ-ಎಸ್ಟಿ ಶಾಸಕರ ಡಿನ್ನರ್ ಮೀಟಿಂಗ್ ಮುಂದೂಡಿಕೆ ವಿಚಾರ, ಯಾರು ಕರೆದಿದ್ರು ಅವರನ್ನೇ ಕೇಳಬೇಕು. ಕರೆದಿದ್ದರೆ ನಾವು ಭಾಗವಹಿಸುತ್ತಿದ್ದೆವು. ಸಭೆಗೆ ನಾವು ಆಹ್ವಾನಿತರಷ್ಟೇ. ಸರಿಯಾದ ಪರ್ಸನ್ ಕೇಳಿದ್ರೆ ಗೊತ್ತಾಗುತ್ತೆ. ಸಭೆಗೆ ನನ್ನನ್ನ ಕರೆದಿದ್ದರು. ಏನು ಚರ್ಚೆಯಾಗ್ತಿತ್ತು ನನಗೆ ಗೊತ್ತಿಲ್ಲ. ಪರಮೇಶ್ವರ್ ಜೊತೆ ನಾನು ಮಾತನಾಡಿಲ್ಲ. ಪಕ್ಷ ಒಂದೇ ಇದೆ. ಎಲ್ಲರೂ ಇದ್ದೇವೆ. ರಾಜಕೀಯ ಮಾಡಬೇಕಾದ್ರೆ ಶಕ್ತಿ ಇಟ್ಕೊಂಡೇ ಬರಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಬೇಜಾರಾಗಲು ಅವ್ರ ಆಸ್ತಿ ಬರೆಸಿಕೊಂಡಿದ್ದೀವಾ? – ಡಿಸಿಎಂ ವಿರುದ್ಧ ರಾಜಣ್ಣ ಅಸಮಾಧಾನ
ಸಭೆ ಕರೆದವರೂ ಅಲ್ಲ ಡೆಲ್ಲಿಗೆ ಹೋದವರು ಅಲ್ಲ. ಇದರ ಬಗ್ಗೆ ಹೇಳಿದರೆ, ಮತ್ತೇನೋ ಆಗುತ್ತೆ. ಮತ್ತೆ ಯಾವಾಗ ಮಾಡ್ತಾರೆ ಕೇಳ್ತೇವೆ. ಡಿನ್ನರ್ ಹೊಸದೇನು ಅಲ್ಲ. ಮುಸುಕಿನ ಗುದ್ದಾಟ ಏನೂ ಇಲ್ಲ. ಹೈಕಮಾಂಡ್ ಪರ್ಮಿಷನ್ ಹೋಂ ಮಿನಿಸ್ಟರ್ ತೆಗೆದುಕೊಳ್ತಾರೆ. ಆಮೇಲೆ ಸಭೆಯ ಬಗ್ಗೆ ನೋಡೋಣ. ಸಮಸ್ಯೆ ಉದ್ಭವವಾದಾಗ ಕೇಳಬೇಕಲ್ಲ. ಹೈಕಮಾಂಡ್ ಹತ್ತಿರವೇ ಕೇಳೋಣ ಎಂದಿದ್ದಾರೆ.
ರಾಜಕೀಯದಲ್ಲಿ ಹಿನ್ನಡೆ, ಮುನ್ನಡೆ ಇರುತ್ತೆ. ಫೋನಿನಲ್ಲಿ ಮಾತನಾಡೋಕೇನು ಆಗಲ್ವಾ. ಪಕ್ಷ ಮೇಲಿದೆ ಸಮಸ್ಯೆ ಪರಿಹರಿಸುವ ಶಕ್ತಿ ಅವರಿಗಿದೆ. ನಮ್ಮ ಊಟ ನಮ್ಮದು ಬೇರೆಯವರಿಗೇನು ಸಂಬಂಧ? ಅವರಿಗೇನು ಆತಂಕ? ಪರ್ಮಿಷನ್ ತೆಗೆದುಕೊಂಡು ಮತ್ತೆ ಸಭೆ ಮಾಡಬಹುದು ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಡಿಕೆಶಿ ಸಹನೆಯ ಕಟ್ಟೆ ಒಡೆಯುವ ಕಾಲ ಸನ್ನಿಹಿತವಾಗಿದೆ: ಬೊಮ್ಮಾಯಿ