ಬೆಂಗಳೂರು: ಫೋನ್ ಕದ್ದಾಲಿಕೆ (Phone Tapping) ಆರೋಪ ಮಾಡಿರುವ ಹೆಚ್‌ಡಿಕೆ, ಆರ್.ಅಶೋಕ್ ಗೆ ಸಚಿವ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.
ಕೇಂದ್ರದಲ್ಲಿ ಬಿಜೆಪಿಯವರದ್ದೇ (BJP) ಸರ್ಕಾರ ಇದೆಯಲ್ಲವಾ..!? ತನಿಖೆ ಮಾಡಬಹುದಲ್ಲವಾ.? ಇದರಲ್ಲಿ ರಾಷ್ಟ್ರೀಯ ಭದ್ರತಾ ವಿಚಾರ ಬರುತ್ತೆ. ಕದ್ದಾಲಿಕೆ ಮಾಡಿದ್ರೆ ತನಿಖೆ ನಡೆಸಲಿ, ಬೇಡ ಅಂದವರು ಯಾರು.? ಅಂತಾ ಸವಾಲು ಹಾಕಿದ್ರು. ಗೃಹ ಇಲಾಖೆಯಲ್ಲಿ ಕೆಲ ಸಚಿವರ ಹಸ್ತಕ್ಷೇಪ ಎಂಬ ವಿಪಕ್ಷಗಳ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆ ರೀತಿ ಯಾವುದೂ ಇಲ್ಲ. ನಾವು ಕೂಡ ಏನೇ ಇದ್ರೂ ಪೊಲೀಸ್ ಇಲಾಖೆ ಸಂಬಂಧ ಪರಮೇಶ್ವರ್ (G Parameshwar) ಜೊತೆಯೇ ಚರ್ಚಿಸುತ್ತೇವೆ. ಆ ರೀತಿ ಯಾರೂ ಹಸ್ತಕ್ಷೇಪ ಮಾಡಿಲ್ಲ ಅಂದ್ರು.
Advertisement
Advertisement
ಇದೇ ವೇಳೆ ಸಿಡಿ ಶಿವು ಎಂದು ಡಿಸಿಎಂ ವಿರುದ್ಧ ಹೆಚ್ ಡಿಕೆ ವಾಗ್ದಾಳಿ ವಿಚಾರವಾಗಿ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿ, ಆರೋಪ ಮಾಡಿದ ಮೇಲೆ ದಾಖಲೆ ಕೊಡಬೇಕಿರೋದು ಅವರ ಜವಬ್ದಾರಿ. ನಾವೇ ಅಂತಿಮವಲ್ಲ, ಕೋರ್ಟ್ ಇದೆ. ಕೋರ್ಟ್‌ನಲ್ಲಿ ಕೇಳಲಿ ಎಂದ್ರು. ಡಿಕೆಶಿ ಆಡಿಯೋಗೆ ಮಾತನಾಡಿರೋದೆ ಸಾಕ್ಷಿ ಎಂಬ HDK ಆರೋಪ ವಿಚಾರವಾಗಿ ಗೃಹ ಸಚಿವರು ಉತ್ತರ ಕೊಡಬೇಕು, ನನಗೆ ಸಂಭಂದಪಟ್ಟ ಇಲಾಖೆ ಅಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಇನ್‍ಸ್ಟಾ ರೀಲ್ ಮಾಡಲು 100 ಅಡಿ ಎತ್ತರದಿಂದ ನೀರಿಗೆ ಹಾರಿ ಪ್ರಾಣ ಕಳೆದುಕೊಂಡ!
Advertisement
Advertisement
SIT ಚೀಫ್ ಗೆ ಕೇಳಬೇಕು ಅವರು ಹೇಳ್ತಾರೆ. ಅದು ಕಾನೂನು ಕ್ರಮ ಆಗುತ್ತೆ, ಒಬ್ಬೊಬ್ಬರು ಒಂದು ಹೇಳಿಕೆ ಕೊಡೋದು ಬೇಡ ಕಾದು ನೋಡೋಣ. ಕಾಂಗ್ರೆಸ್ ನವರು ದೇವೇಗೌಡರ ಕುಟುಂಬಕ್ಕೆ ನಾವ್ಯಾರು ಕಳಂಕ ತರೋದಿಕ್ಕೆ ಹೋಗಿಲ್ಲ, ಅದು ಆದ ಘಟನೆ. ನಮ್ಮ ಪಕ್ಷ, ಒಕ್ಷದ ಮುಖಂಡರು ಯಾರು ಅದಕ್ಕೆ ಸಂಭಂದಪಟ್ಟವರಲ್ಲ ಅಂತಾ ಟಾಂಗ್ ಕೊಟ್ಟರು. ಡಿಕೆಶಿ ಮಾತಾಡಿದಕ್ಕೆ ರಾಜೀನಾಮೆ ಕೊಡೋಕೆ ಆಗುತ್ತಾ.? ಪ್ರಜ್ವಲ್ ಕೇಸ್ ಅನ್ನು ಪೊಲೀಸ್ ನವರಿಗೆ ಬಿಟ್ರೆ ಒಳ್ಳೆಯದು. ವೀಡಿಯೋ ಮಾಡಿರೋದು ಹಂಚಿರೋದು ಅವರ ಪಕ್ಷದವರೇ, ನಮಗೂ ಅದಕ್ಕೂ ಸಂಬಂಧ ಇಲ್ಲ ಅಂದ್ರು.