ತುಮಕೂರು: ಸಿದ್ದಗಂಗಾ ಮಠದ ಶ್ರೀಗಳ ಕ್ರಿಯಾ ಸಮಾಧಿ ಬಳಿ ಕರ್ತವ್ಯನಿರತ ಎಸ್‍ಪಿ ದಿವ್ಯಾ ಗೋಪಿನಾಥ್ ಕಣ್ಣೀರು ಹಾಕಿರುವ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಕ್ರಿಯಾ ಸಮಾಧಿ ಬಳಿ ತೆರಳುವಾಗ ಭದ್ರತಾ ಸಿಬ್ಬಂದಿ ಸಚಿವರಾದ ಸಾ.ರಾ.ಮಹೇಶ್, ವೆಂಕಟರಾವ್ ನಾಡಗೌಡ, ಶ್ರೀನಿವಾಸ್ ಮತ್ತು ನನ್ನನ್ನು ಸೇರಿ ತಡೆದರು. ನಾವೆಲ್ಲರೂ ಭಕ್ತರಾಗಿ ಶ್ರೀಗಳ ಅಂತಿಮ ದರ್ಶನ ಪಡೆಯಲು ಹೋದಾಗ ಸಿಬ್ಬಂದಿ ನಮ್ಮನ್ನು ತಡೆದಾಗ ಬಿಡಿ ಎಂದು ಮನವಿ ಮಾಡಿಕೊಂಡರು ಬಿಡಲಿಲ್ಲ. ಈ ವೇಳೆ ಸಣ್ಣ ಮಾತಿನ ಚಕಮಕಿ ನಡೆಯಿತು ಅಷ್ಟೇ. ಈ ವಿಷಯವನ್ನು ದೊಡ್ಡದು ಮಾಡೋದು ಬೇಡ. ಇಲ್ಲಿಗೆ ಮುಗಿಸಿಬಿಡೋಣ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಇದೇ ಪೊಲೀಸ್ ಅಧಿಕಾರಿಗಳು ಸಾರ್ವಜನಿಕವಾಗಿ ಹೇಗೆಲ್ಲ ಮಾತನಾಡ್ತಾರೆ ಎಂಬುವುದು ಗೊತ್ತಿದೆ. ತಮ್ಮ ಕೆಲಸ ಏನು ಎನ್ನುವುದನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. ಸ್ಥಳದಲ್ಲಿ ನಾನಿದ್ದರೂ, ಸಂಪುಟ ಸಚಿವರ ಮೇಲೆ ವಿಪಕ್ಷ ಶಾಸಕನಾಗಿ ಯಾವುದೇ ಆರೋಪಗಳನ್ನು ಮಾಡಲ್ಲ. ಸಾ.ರಾ.ಮಹೇಶ್ ಮತ್ತು ಎಸ್‍ಪಿ ನಡುವೆ ನಡೆದ ಮಾತುಗಳು ನನಗೆ ಸರಿಯಾಗಿ ಕೇಳಿಸಿಲ್ಲ ಎಂದು ಅಡ್ಡ ಗೋಡೆಯ ಮೇಲೆ ದೀಪವಿಟ್ಟವಂತೆ ಶಾಸಕರು ತಿಳಿಸಿದರು.
ಸಾ.ರಾ.ಮಹೇಶ್ ಗದ್ದುಗೆಯ ಒಳಗಡೆ ಹೋದ ಮೇಲೆ ಶ್ರೀನಿವಾಸ್ ಅಧಿಕಾರಿಯನ್ನು ಸಮಾಧಾನ ಮಾಡೋದನ್ನು ನಾವು ವಿಡಿಯೋದಲ್ಲಿ ಕಾಣಬಹುದು. ಎಸ್‍ಪಿ ಕಣ್ಣೀರು ಹಾಕಿರುವ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಕುಮಾರಸ್ವಾಮಿ, ಅದೊಂದು ಸಣ್ಣ ಘಟನೆ, ಅಲ್ಲಿಯೇ ಅದನ್ನು ಬಗೆಹರಿಸಲಾಗಿದ್ದು, ಸಾ.ರಾ.ಮಹೇಶ್ ಅವರದ್ದು ಯಾವುದೇ ತಪ್ಪಿಲ್ಲ ಎಂದು ಸಚಿವರನ್ನು ಸಮರ್ಥಿಸಿಕೊಂಡಿದ್ದಾರೆ.
https://www.youtube.com/watch?v=zvG1bIidF1M
https://www.youtube.com/watch?v=kDXi0aOuEpg
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv