ಮೈಸೂರು: ಜಿಲ್ಲೆಯ ಮಹಾನಗರ ಪಾಲಿಕೆ ಮೇಯರ್ ಗದ್ದುಗೆಗಾಗಿ ಗುದ್ದಾಟ ಆರಂಭವಾಗಿದ್ದು ಮತ್ತೆ ರೆಸಾರ್ಟ್ ರಾಜಕಾರಣ ಶುರುವಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಆಡಳಿತ ನಡೆಸುತ್ತಿದ್ದರೆ. ಇತ್ತ ಮೈಸೂರಿನಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಳ್ಳಲು ಮುಂದಾಗಿವೆ. ಇಂತದೊಂದು ಸುಳಿವನ್ನು ಸಚಿವ ಸಾರಾ ಮಹೇಶ್ ಬಿಟ್ಟುಕೊಟ್ಟಿದ್ದಾರೆ.
Advertisement
Advertisement
ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಒಮ್ಮೆ ನೋವಾಗಿದೆ. ಮೈತ್ರಿ ವೇಳೆ ಇದ್ದಕಿದ್ದಂತೆ ನಾಮಪತ್ರ ಸಲ್ಲಿಸಿ ತೊಂದರೆ ಕೊಟ್ಟಿದ್ದರು. ಅದಕ್ಕಾಗಿ ಈ ಬಾರಿ ಮೊದಲಿಗೆ ಜೆಡಿಎಸ್‍ಗೆ ಮೇಯರ್ ಸ್ಥಾನ ಬೇಕು ಎಂದು ಕೇಳಿದ್ದೇವೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಹೆಚ್ಚು ಮತ ಇರುವವರಿಗೇ ಮೇಯರ್ ಸ್ಥಾನ ಎಂದು ಹೇಳಿದ್ದಾರೆ. ಸದ್ಯ ಮೇಯರ್ ಆಯ್ಕೆ ಮಾಡುವ ಮತದಾರರ ಸಂಖ್ಯೆ ಜೆಡಿಎಸ್‍ನಲ್ಲಿ ಹೆಚ್ಚಿದೆ. ನಾವು ಈಗಾಗಲೇ ಬಿಬಿಎಂಪಿಯಲ್ಲೂ ಕಾಂಗ್ರೆಸ್ಸಿಗೆ ಅಧಿಕಾರ ಬಿಟ್ಟುಕೊಟ್ಟಿದ್ದೇವೆ. ಈಗ ನಮಗೆ ಅಧಿಕಾರ ಕೇಳುತ್ತಿದ್ದೇವೆ ಎಂದು ಹೇಳಿದ್ದಾರೆ.
Advertisement
Advertisement
ಬಿಜೆಪಿ ನಾಯಕರು ಈಗಾಗಲೇ ಜೆಡಿಎಸ್ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಕಾಂಗ್ರೆಸ್ಸಿಗೆ ಸಚಿವ ಸಾ.ರಾ.ಮಹೇಶ್ ನೇರವಾಗಿ ಟಾಂಗ್ ಕೊಟ್ಟಿದ್ದಾರೆ. ಜೆಡಿಎಸ್ ಸದಸ್ಯರು ಈಗಾಗಲೇ ರೆಸಾರ್ಟ್ ಗೆ ತೆರಳಿದ್ದು, ನಮ್ಮ ಸದಸ್ಯರು ಕಾಂಗ್ರೆಸ್ಸಿನಂತೆ ಹೆದರಿಕೊಂಡು ರೆಸಾರ್ಟ್ ಗೆ ಹೋಗಿಲ್ಲ. ಎಲ್ಲರೂ ಕೂತು ಸಮಾಲೋಚನೆ ನಡೆಸಲು ನಾವೇ ಕಳುಹಿಸಿಕೊಟ್ಟಿದ್ದೇವೆ. ಶಾಸಕ ತನ್ವೀರ್ ಸೇಠ್ ಈಗಾಗಲೇ ಬಂದು ಭೇಟಿಯಾಗಿ ಹೋಗಿದ್ದಾರೆ. ಮಾತುಕತೆ ನಡೆಸಿ ಮತ್ತೊಮ್ಮೆ ಬರುವುದಾಗಿ ತಿಳಿಸಿದ್ದಾರೆ ಎಂದು ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.
ಮೈಸೂರು ಮೇಯರ್ ಚುನಾವಣೆ ಉಸ್ತುವಾರಿಯನ್ನು ಕೃಷ್ಣ ಭೈರೇಗೌಡರಿಗೆ ವಹಿಸಲಾಗಿದ್ದು, ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಸೂಚನೆ ಮೇರೆಗೆ ಇಂದು ಮೈಸೂರಿಗೆ ಆಗಮಿಸಿ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಲಿದ್ದಾರೆ. ಇತ್ತ ಮಾಜಿ ಸಿಎಂ ಸಿದ್ದರಾಮಯ್ಯರವರ ಮೈಸೂರಿನ ನಿವಾಸದಲ್ಲಿ ಕಾಂಗ್ರೆಸ್ ನಾಯಕರು ಮಾತುಕತೆ ನಡೆಸಿದ್ದಾರೆ.
ಸಂಜೆ ಕೃಷ್ಣ ಭೈರೇಗೌಡರ ನೇತೃತ್ವದಲ್ಲಿ ನಾಳೆಯ ಮೇಯರ್ ಚುನಾವಣೆ ವಿಚಾರವಾಗಿ ಸಭೆ ನಡೆಯಲಿದ್ದು, ಮೈಸೂರಿನ ಶಾಸಕರು, ಜಿಲ್ಲಾಧ್ಯಕ್ಷರು, ನಗರಾಧ್ಯಕ್ಷರು ಮತ್ತು ನಗರ ಪಾಲಿಕೆ ಸದಸ್ಯರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸದಸ್ಯರ ಮತ್ತು ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸಿ ಸಿದ್ದರಾಮಯ್ಯ ದಿನೇಶ್ ಗುಂಡೂರಾವ್ ಗೆ ಮಾಹಿತಿಯನ್ನು ಕೃಷ್ಣಭೈರೇಗೌಡ ನೀಡಲಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews