ಬೆಂಗಳೂರು: ವಿಧಾನಸಭೆಯಲ್ಲಿ ಅವರೆಲ್ಲ ಒಂದೇ ಸಾಲಿನಲ್ಲಿ ಕುಳಿತಿದ್ರು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಹೆಚ್.ಡಿ.ಕುಮಾರಸ್ವಾಮಿ ಮೊದಲ ಸಾಲಿನಲ್ಲಿ ಇದ್ದರು. ರಾಜ್ಯಪಾಲರ ಭಾಷಣದ ಬಳಿಕ ಸ್ವಲ್ಪ ಕಾಲ ವಿರಾಮ ಇತ್ತು. ಆಗ ಕೆಲವು ನೂತನ ಸಚಿವರು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬಳಿ ಹೋಗಿ ವಿಶ್ ಮಾಡಿ ಬರ್ತಿದ್ರು. ಆದರೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತ್ರ ವೇಯ್ಟಿಂಗ್ ಲಿಸ್ಟ್ ನಲ್ಲಿ ಇದ್ರು. ಸ್ವಲ್ಪ ಹೊತ್ತಿನ ಬಳಿಕ ಸೋಮಶೇಖರ್ ಸಿದ್ದರಾಮಯ್ಯ, ಡಿಕೆಶಿ, ಹೆಚ್‍ಡಿಕೆ ಮಾತನಾಡಿಸ್ತಾರೋ ಇಲ್ವೋ ಅನ್ನೋ ಕುತೂಹಲಕ್ಕೆ ಕಡೆಗೂ ತೆರೆ ಎಳೆದರು.
Advertisement
ಹೆಚ್.ಡಿ.ಕುಮಾರಸ್ವಾಮಿ ಸದನದಿಂದ ಹೊರಗೆ ಹೋದ್ರು. ಆಗಲೇ ಎಸ್.ಟಿ.ಸೋಮಶೇಖರ್ ತಮ್ಮ ಆಸನದಿಂದ ವಿರೋಧ ಪಕ್ಷದ ಆಸನದ ಕಡೆ ಎದ್ದು ಬಂದ್ರು. ಹೆಚ್.ಕೆ.ಪಾಟೀಲ್‍ಗೆ ಕೈ ಮುಗಿದು ನೇರವಾಗಿ ಡಿಕೆ ಶಿವಕುಮಾರ್ ಬಳಿ ಬಂದ ಎಸ್.ಟಿ.ಸೋಮಶೇಖರ್ ಕೈ ಕುಲುಕಿದ್ರು. ಡಿಕೆಶಿ ಕೂಡ ಎದ್ದು ನಿಂತು ಎಸ್.ಟಿ.ಸೋಮಶೇಖರ್ ತಬ್ಬಿಕೊಂಡು ಬೆನ್ನು ತಟ್ಟಿದ್ರು. ಇದೇ ವೇಳೆ ಬೈರತಿ ಬಸವರಾಜು ಕೂಡ ಇದ್ದರು. ಆದರೆ ಡಿಕೆಶಿಯಿಂದ ತುಸು ಹತ್ತಿರವೇ ಇದ್ದ ಸಿದ್ದರಾಮಯ್ಯ ಕಡೆ ಎಸ್.ಟಿ.ಸೋಮಶೇಖರ್ ನೋಡಲೇ ಇಲ್ಲ. ಬೈರತಿ ಬಸವರಾಜು ಮಾತ್ರ ಹೋಗಿ ಕೈ ಮುಗಿದ್ರೆ, ಡಿಕೆಶಿ ಮಾತನಾಡಿಸಿ ಸೀದಾ ತಮ್ಮ ಆಸನಕ್ಕೆ ಹೊರಟು ಬಿಟ್ಟರು ಎಸ್.ಟಿ.ಸೋಮಶೇಖರ್.
Advertisement
Advertisement
ಇನ್ನು ಸಿದ್ದರಾಮಯ್ಯ ಕೂಡ ಡಿಕೆಶಿ ಜತೆ ಸೋಮಶೇಖರ್ ಮಾತನಾಡುತ್ತಿರುವಾಗ ಆ ಕಡೆ ನೋಡಲೂ ಹೋಗಲಿಲ್ಲ. ಸುಮಾರು ಎರಡ್ಮೂರು ನಿಮಿಷ ಡಿಕೆಶಿ ನಿಂತುಕೊಂಡೇ ಸೋಮಶೇಖರ್ ಜತೆ ಬೆನ್ನು ತಟ್ಟಿ ಮಾತನಾಡಿದ್ರೂ ತಲೆಕೆಡಿಸಿಕೊಳ್ಳಲಿಲ್ಲ. ಇನ್ನು ಸಿದ್ದರಾಮಯ್ಯ ಹಿಂದಿನ ಸಾಲಿನಲ್ಲಿದ್ದ ಜಾರ್ಜ್, ಬೈರತಿ ಸುರೇಶ್, ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ ಅವರು ಎಲ್ಲವನ್ನೂ ಕುತೂಹಲದಿಂದ ನೋಡುತ್ತಿದ್ದರು. ಒಟ್ಟಾರೆ ಈ ದೃಶ್ಯಾವಳಿಯನ್ನ ನೋಡಿದವರು ಸಿದ್ದರಾಮಯ್ಯ ಕಂಡ್ರೆ ಎಸ್.ಟಿ.ಸೋಮಶೇಖರ್‍ಗೆ ಭಯನೋ..? ಕೋಪನೋ..? ನಿರ್ಲಕ್ಷ್ಯವೋ..? ಅಂತಾ ಪ್ರಶ್ನೆಗಳನ್ನ ಎತ್ತಿದ್ದು ಸುಳ್ಳಲ್ಲ.