ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯನ್ನು ಮೂಲಸೌಕರ್ಯ, ಮಾಹಿತಿ ಮತ್ತು ಹಜ್ ಖಾತೆಯ ಸಚಿವ ರೋಷನ್ ಬೇಗ್ ಸೂ.. ಬೋ..ಮಗ ಎಂದು ಅವಾಚ್ಯವಾಗಿ ನಿಂದಿಸಿ ಮಾತನಾಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.
ಪುಲಿಕೇಶಿನಗರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ರೋಷನ್ ಬೇಗ್, ತಮಿಳಿನಲ್ಲಿ ತೆವಡಿಯಾ ಪಸಂಗ ಎಂದಿದ್ದಾರೆ. ಎರಡು ದಿನಗಳ ಹಿಂದೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಬಗ್ಗೆ ಬಿಜೆಪಿ ವೀಡಿಯೋ ಬಿಡುಗಡೆ ಮಾಡಿದ್ದು, ಬೇಗ್ ವಿರುದ್ಧ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ತಮಿಳಿನಲ್ಲಿ ಭಾಷಣ ಮಾಡಿರೋ ರೋಷನ್ ಬೇಗ್, ಮೋದಿ 1000, 500 ರೂ. ನೋಟ್ ಬ್ಯಾನ್ ಮಾಡಿದ್ರು. ಅದರಿಂದೇನಾಯ್ತು? ಮೋದಿ ಸೂ…, ಇದರಿಂದ ಯಾರು ಉದ್ಧಾರ ಆದ್ರು? ಎಂದು ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಾರೆ.
Advertisement
Advertisement
ಕಾಂಗ್ರೆಸ್ ಇಂದು ನಿನ್ನೆಯದಲ್ಲ. ನೂರಾರು ವರ್ಷದ ಇತಿಹಾಸ ಹೊಂದಿರೋ ಪಕ್ಷ. ನಮ್ ಸಿದ್ದರಾಮಯ್ಯ 5 ರೂ.ಗೆ ತಿಂಡಿ, 10 ರೂ.ಗೆ ಊಟ ಕೊಡ್ತಾರೆ. ಯಡಿಯೂರಪ್ಪ ಕೇವಲ ಶೋಭಾ ಎದುರು ಮುಖ ನೋಡಿಕೊಂಡು ನಿಂತಿದ್ರು. ಇದನ್ನ ಬಿಟ್ರೆ ಯಡಿಯೂರಪ್ಪ ಬೇರೆ ಏನನ್ನೂ ಮಾಡಲಿಲ್ಲ. ಯಡಿಯೂರಪ್ಪ ಯಾಕೆ ಅನ್ನಭಾಗ್ಯ ಯೋಜನೆ ಜಾರಿಗೆ ತರಲಿಲ್ಲ ಎಂದು ನೇರವಾಗಿ ಮೋದಿ ಹಾಗೂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Advertisement
ಕಾನೂನು ಕ್ರಮ: ರೋಷನ್ ಬೇಗ್ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿರೋ ಬಿಜೆಪಿ ವಕ್ತಾರ ಅಶ್ವಥ್ ನಾರಾಯಣ ಅವರು, ಸಚಿವ ರೋಷನ್ ಬೇಗ್ ಪ್ರಧಾನಿಯವರ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದ್ದರೆ ತಕ್ಷಣ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು. ರೋಷನ್ ಬೇಗ್ ವಿರುದ್ಧ ಪ್ರತಿಭಟನೆ ನಡೆಸಲು, ಕಾನೂನು ಕ್ರಮಕೈಗೊಳ್ಳಲು ನಿರ್ಧರಿಸಿದ್ದೇವೆ ಎಂದಿದ್ದಾರೆ.
ಪ್ರಧಾನಿ ಬಗ್ಗೆ ಸಚಿವ ರೋಷನ್ ಬೇಗ್ ಅಶ್ಲೀಲ ಪದ ಬಳಕೆ ವಿಚಾರವಾಗಿ ಗೃಹ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ರೋಷನ್ ಬೇಗ್ ಆ ರೀತಿ ಮಾತಾಡೋರಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಪ್ರಧಾನಿ ಬಗ್ಗೆಯೇ ಆಗಿರಲಿ, ಯಾರ ಬಗ್ಗೆಯೇ ಆಗಿರಲಿ, ಯಾರೂ ಲಘುವಾಗಿ ಮಾತನಾಡಬಾರದು ಎಂದರು.
ಆದರೆ ಸಚಿವ ರಮಾನಾಥ ರೈ ಮಾತ್ರ ಬಿಜೆಪಿಯವರನ್ನು ಯಾರೂ ಬೈಯುವಂತಿಲ್ವಾ ಎಂದು ರೋಷನ್ ಬೇಗ್ ಹೇಳಿಕೆಗೆ ಪರೋಕ್ಷ ಬೆಂಬಲ ಸೂಚಿಸಿದ್ದಾರೆ.