ಹಾಸನ: ಗಾಂಧಿ ಜಯಂತಿ ಪ್ರಯುಕ್ತ ಸಿಎಂ ಕುಮಾರಸ್ವಾಮಿ ಅವರ ಕಾರ್ಯಕ್ರಮಕ್ಕೆ ಶಾಸಕರು ಬರದಿದ್ದಕ್ಕೆ ರೇವಣ್ಣ ಕ್ಲಾಸ್ ತೆಗೆದುಕೊಂಡಿದ್ದಾರೆ.
ಗಾಂಧಿ ಜಯಂತಿಗೆ ಆಗಮಿಸಿದ್ದ ಬಿಜೆಪಿ ಶಾಸಕ ಪ್ರೀತಂಗೌಡ ಅವರನ್ನು ಸಚಿವ ರೇವಣ್ಣ ಪ್ರಶ್ನಿಸಿದ್ದಾರೆ. ರೀ ಕಾರ್ಯಕ್ರಮಕ್ಕೆ ಏಕೆ ಬಂದಿರಲಿಲ್ಲ. ನಾನೇ ಖುದ್ದಾಗಿ ಫೋನ್ ಮಾಡಿದ್ದೆ. ಲೆಟರ್ ಕೂಡ ಕಳಿಸಿದ್ದೆ. ಆದರೂ ಏಕೆ ಬರಲಿಲ್ಲ ಎಂದು ರೇವಣ್ಣ ಪ್ರಶ್ನಿಸಿದ್ದಾರೆ.
ಕಳೆದ ತಿಂಗಳು 23ರಂದು ಹಾಸನದಲ್ಲಿ ಸಾವಿರಾರು ಕೋಟಿ ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರು ಬಾರದೆ ಗೈರಾಗಿದ್ದರು. ಇಂದು ಈ ಬಗ್ಗೆ ನೇರವಾಗಿ ಸಚಿವರು, ಶಾಸಕರನ್ನು ಪ್ರಶ್ನೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ರೇವಣ್ಣ ಈ ಕುರಿತು ಸ್ವತಃ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಹೇಳಿದ್ದಾರೆ. ನೋಡಿ ಮೇಡಂ ನಾನೇ ಫೋನ್ ಮಾಡಿ ಸ್ವತಃ ಕರೆದಿದ್ದೇನೆ. ಆದರೂ ಯಾರೂ ಬಂದಿಲ್ಲ ಎಂದು ಸಚಿವರು ದೂರಿದ್ದಾರೆ. ಆಗ ಶಾಸಕ ಪ್ರೀತಂಗೌಡ ಆಹ್ವಾನ ಪತ್ರಿಕೆ ನನಗೆ ಹಿಂದಿನ ದಿನ ಬಂತು ನಿಮ್ಮಿಂದ ನನಗೆ ಯಾವುದೇ ಫೋನ್ ಬಂದಿಲ್ಲ. ಅಲ್ಲದೇ ನೀವು ಕರೆ ಮಾಡಿದ್ದು ಈ ಹಿಂದೆ ಗುದ್ದಲಿ ಪೂಜೆಗಾಗಿಯೇ ಎಂದು ಶಾಸಕ ನಾಜೂಕಾಗಿಯೇ ಸಚಿವರಿಗೆ ತಿರುಗೇಟು ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv