ಹಾಸನ: ನಮಗೆ ಉತ್ತರ ಕರ್ನಾಟಕ ಬೇರೆಯಲ್ಲ ದಕ್ಷಿಣ ಕರ್ನಾಟಕ ಬೇರೆಯಲ್ಲ. ಬೆಳಗಾವಿಯಲ್ಲಿ ಬೇರೆ ಯಾರೂ ಯಾಕೆ ಅಧಿವೇಶನ ಮಾಡಿರಲಿಲ್ಲ. ಅಲ್ಲಿ ಅಧಿವೇಶನ ಮಾಡೋಕೆ ಕುಮಾರಸ್ವಾಮಿ ಸಿಎಂ ಆಗಿ ಬರಬೇಕಾಯ್ತು. ಯಡಿಯೂರಪ್ಪಗೆ ಬೇರೆ ಕೆಲಸ ಇಲ್ಲ. ಹಾಗಾಗಿ ಹೋರಾಟ ಮಾಡಿಸುತ್ತಿದ್ದಾರೆಂದು ಲೋಕೋಪಯೋಗಿ ಸಚಿವ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಚ್ಚನಕೊಪ್ಪಲು ಏತ ನೀರಾವರಿಗೆ ಯೋಜನೆಗೆ ಚಾಲನೆ ನೀಡಿ ಹೊಳೆನರಸೀಪುರದಲ್ಲಿ ಪ್ರತ್ಯೇಕ ರಾಜ್ಯಕ್ಕಾಗಿ ನಡೆಯುತ್ತಿರುವ ಹೋರಾಟದ ಬಗ್ಗೆ ಕಿಡಿಕಾರಿದ್ರು. ಇಷ್ಟು ವರ್ಷವಾದ್ರೂ ಮಹದಾಯಿ ವಿಚಾರ ಬಗೆಹರಿದಿಲ್ಲ. ಬಿಜೆಪಿಯವರಿಗೆ ಇದೊಂದು ಸಮಸ್ಯೆ ಇತ್ಯರ್ಥಮಾಡಲು ಏಕೆ ಆಗಿಲ್ಲ ಎಂದು ಪ್ರಶ್ನಿಸಿದ್ರು.
Advertisement
Advertisement
ಬೆಳಗಾವಿ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಕಾಲೇಜುಗಳೇ ಇರ್ಲಿಲ್ಲ. ಉತ್ತರ ಕರ್ನಾಟಕದ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಕುಮಾರಸ್ವಾಮಿ ಬರಬೇಕಾಯ್ತ ಎಂದು ಪ್ರಶ್ನಿಸಿದರು.
Advertisement
ಬೆಳಗಾವಿಯನ್ನ ಎರಡನೇ ರಾಜಧಾನಿ ಮಾಡೋದಲ್ಲ. ಸರ್ಕಾರದ ಪ್ರಮುಖ ಇಲಾಖೆಯ ಕಚೇರಿಯನ್ನ ಉತ್ತರ ಭಾಗದಲ್ಲಿ ತೆರೆದರೆ ತಪ್ಪೇನು? ಇದರಿಂದ ಜನರಿಗೆ ಅನುಕೂಲ ಆಗೊದಿಲ್ವಾ. ಈ ಬಗ್ಗೆ ಸಿಎಂ ಕುಮಾರಸ್ವಾಮಿಯವರೇ ಮಾತನಾಡಿ ತೀರ್ಮಾನಿಸುತ್ತಾರೆ ಅಂದ್ರು.
Advertisement